ಕೊರೊನಾ ವೈರಾಣುವಿನ ಮೂಲ ಕಂಡುಹಿಡಿಯಲು ಹಲವು ರಾಷ್ಟ್ರಗಳ ಕಸರತ್ತು; ಇದೀಗ ಆ ಗುಂಪಿಗೆ ಭಾರತವೂ ಸೇರ್ಪಡೆ

|

Updated on: Jun 01, 2021 | 9:57 AM

ಕೊರೊನಾ ವೈರಸ್​ ಸೋಂಕಿನ ಮೂಲವನ್ನು ಕಂಡುಹಿಡಿಯಲು ಡಬ್ಲ್ಯೂಎಚ್​ಒಗೆ ನಾವು ಯಾವಾಗಲೂ ಬೆಂಬಲಿಸುತ್ತೇವೆ. ಈ ವಿಚಾರದಲ್ಲಿ ಪಾರದರ್ಶಕತೆ ತುಂಬ ಮುಖ್ಯ ಎಂದು ಭಾರತ ಮೊದಲಿನಿಂದಲೂ ಹೇಳಿಕೊಂಡು ಬಂದಿದೆ.

ಕೊರೊನಾ ವೈರಾಣುವಿನ ಮೂಲ ಕಂಡುಹಿಡಿಯಲು ಹಲವು ರಾಷ್ಟ್ರಗಳ ಕಸರತ್ತು; ಇದೀಗ ಆ ಗುಂಪಿಗೆ ಭಾರತವೂ ಸೇರ್ಪಡೆ
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ವೈರಸ್​ ಹುಟ್ಟಿ, ಹರಡಲು ಶುರುವಾಗಿ ಒಂದು ವರ್ಷದ ಮೇಲಾಗಿದೆ. ಇದೀಗ ಯುಎಸ್​, ಯುಕೆ ಸೇರಿ ಹಲವು ರಾಷ್ಟ್ರಗಳು ವೈರಸ್ ಮೂಲ ಕಂಡುಹಿಡಿಯಲು ಮುಂದಾಗಿದ್ದು, ಆ ಗುಂಪಿಗೆ ಇದೀಗ ಭಾರತವೂ ಸೇರ್ಪಡೆಯಾಗಿದೆ. ಕೊರೊನಾ ಚೀನಾದಲ್ಲಿ ಶುರುವಾಗಿದೆ ಎಂದು ಹೇಳಲಾಗಿದ್ದರೂ ಅದರ ಮೂಲ ಯಾವುದು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಹಿಂದೆ ಡಬ್ಲ್ಯೂಎಚ್​ಒ ತಜ್ಞರ ತಂಡ ಚೀನಾಕ್ಕೆ ಭೇಟಿ ನೀಡಿತ್ತಾದರೂ ಸರಿಯಾದ ಉತ್ತರವನ್ನೇನೂ ಕೊಟ್ಟಿರಲಿಲ್ಲ. ಬಾವಲಿ ಅಥವಾ ಬೇರೆ ಪ್ರಾಣಿಯಿಂದ ಮನುಷ್ಯನಿಗೆ ಹರಡಿರಬಹುದು ಎಂದು ವರದಿ ನೀಡಿತ್ತು.

ಇದೀಗ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಅವರು ಕೊರೊನಾ ಮೂಲ ಕಂಡುಹಿಡಿಯಲು ತಮ್ಮ ಗುಪ್ತಚರ ಸಂಸ್ಥೆ ಸಿಐಎ ಗೆ ಆದೇಶ ನೀಡಿದ್ದಾರೆ. ಇನ್ನು ಯುಕೆ ಕೂಡ ಕೊರೊನಾ ಸೋಂಕಿನ ಮೂಲ ಕಂಡುಹಿಡಿಯಲು ಮುಂದಾಗಿದೆ. ಕೊರೊನಾ ಸೋಂಕು ಚೀನಾದ ಪ್ರಯೋಗಲಾಯದಿಂದ ಸೋರಿಕೆಯಾಗಿದೆ ಎಂಬ ಈ ಹಿಂದಿನ ಮಾಹಿತಿಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ನಮ್ಮ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಹಾಗಾಗಿ ಇದರ ಮೂಲ ತಿಳಿಯಲೇಬೇಕಾದ ಅವಶ್ಯಕತೆ ಇದೆ ಎಂದೂ ಹೇಳಿದೆ.

ಇನ್ನು ಕೊರೊನಾ ವೈರಸ್​ ಸೋಂಕಿನ ಮೂಲವನ್ನು ಕಂಡುಹಿಡಿಯಲು ಡಬ್ಲ್ಯೂಎಚ್​ಒಗೆ ನಾವು ಯಾವಾಗಲೂ ಬೆಂಬಲಿಸುತ್ತೇವೆ. ಈ ವಿಚಾರದಲ್ಲಿ ಪಾರದರ್ಶಕತೆ ತುಂಬ ಮುಖ್ಯ ಎಂದು ಭಾರತ ಮೊದಲಿನಿಂದಲೂ ಹೇಳಿಕೊಂಡು ಬಂದಿದೆ. ಇನ್ನು ಚೀನಾ ಮಾತ್ರ ಕೊರೊನಾ ಮೂಲ ಯಾವುದು ಎಂಬ ಬಗ್ಗೆ ಸರಿಯಾಗಿ ಏನೂ ಹೇಳುತ್ತಿಲ್ಲ. ಅಲ್ಲದೆ ತಮ್ಮಲ್ಲಿನ ಸಾವಿನ ಸಂಖ್ಯೆಯಲ್ಲೂ ಮುಚ್ಚುಮರೆ ಮಾಡುತ್ತಿದೆ ಎಂಬುದನ್ನು ಯುಎಸ್​ನ ಹಿಂದಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆರೋಪಿಸಿದ್ದರು. ಕೊರೊನಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧತೆಗಳನ್ನು ಹೆಚ್ಚಿಸಲು, ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಅಧಾನೋಮ್​ ಅವರು ಈ ವರ್ಷ ಅಂತಾರಾಷ್ಟ್ರೀಯ ಒಪ್ಪಂದಕ್ಕಾಗಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಸೋನು ಸೂದ್​ ದುಡ್ಡಿಗಾಗಿ ಹಪಾಹಪಿಸುವ ವ್ಯಕ್ತಿ ಆಗಿದ್ದರು; ಇನ್ನೊಂದು ಮುಖ ತೆರೆದಿಟ್ಟ ನಿರ್ಮಾಪಕ