ಭಾರತದಲ್ಲಿ ಈ ವರ್ಷದ ಮುಂಗಾರಿನಲ್ಲಿ ವಾಡಿಕೆಗಿಂತಲೂ ಹಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು(Monsoon) ಆರಂಭದಲ್ಲಿ ಎಲ್ ನಿನೋ ಪರಿಸ್ಥಿತಿಗಳು ದುರ್ಬಲಗೊಳ್ಳುವ ಸಾಧ್ಯತೆಯಿದೆ. ಮುಂಗಾರಿಗೆ ಸಹಾಯ ಮಾಡುವ ಲಾ ನಿನಾ ಅಭಿವೃದ್ಧಿಗೊಳ್ಳಲಿದೆ. ಎಲ್ ನಿನೊ ಹಾಗೂ ಲಾ ನಿನಾ ಪೆಸಿಫಿಕ್ ಮಹಾಸಾಗರದಲ್ಲಿನ ಹವಾಮಾನದ ಮಾದರಿಗಳಾಗಿವೆ. ಅದು ಪ್ರಪಂಚಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರಬಹುದು.
ಮುಂಗಾರು ಮಳೆಯು ಜೂನ್‌ನಲ್ಲಿ ಕೇರಳವನ್ನು ಆವರಿಸುತ್ತದೆ, ಜುಲೈ ಮಧ್ಯದಲ್ಲಿ ಇಡೀ ದೇಶವನ್ನು ಆವರಿಸುತ್ತದೆ ಮತ್ತು ಸೆಪ್ಟೆಂಬರ್‌ನಲ್ಲಿ ಕಡಿಮೆಯಾಗುತ್ತದೆ. ಮುಂಗಾರು ಮಳೆಯು ಜಲಾಶಯಗಳನ್ನು ಮರುಪೂರಣಗೊಳಿಸುತ್ತದೆ. ಬೆಳೆಗಳಿಗೆ ನೀರಿನ ಲಭ್ಯತೆಯನ್ನು ಖಚಿತಪಡಿಸುತ್ತದೆ ಮತ್ತು ಕೃಷಿ ಉತ್ಪಾದಕತೆಯನ್ನು ಉಳಿಸಿಕೊಳ್ಳುತ್ತದೆ. ಉತ್ತಮ ಮುಂಗಾರು ಋತುವಿನಲ್ಲಿ ಸಮೃದ್ಧ ಫಸಲುಗಳಿಗೆ ಕಾರಣವಾಗುತ್ತದೆ.
ಹೆಚ್ಚಿದ ಕೃಷಿ ಉತ್ಪಾದನೆಯ ಮೂಲಕ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಮಳೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಮತೋಲಿತ ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ಮತ್ತು ಹಣದುಬ್ಬರವನ್ನು ತಡೆಯಲು ಈ ಸ್ಥಿರತೆ ಅತ್ಯಗತ್ಯ. ಮುಂಗಾರು ಮಳೆಯು ಗ್ರಾಮೀಣ ಪ್ರದೇಶದ ಕೃಷಿ ಆದಾಯ, ಉದ್ಯೋಗಾವಕಾಶಗಳು ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಮೂಲಕ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.
ಲಾ ನಿನಾ ಇದ್ದ ವರ್ಷಗಳಲ್ಲಿ ಅಂದರೆ 1974 ಮತ್ತು 2000 ರಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ದಾಖಲಾಗಿದ್ದನ್ನು ಹೊರತುಪಡಿಸಿ ಹೆಚ್ಚಿನ ವರ್ಷಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯೇ ದಾಖಲಾಗಿದೆ.
ಕಳೆದ ವರ್ಷ IMD ಶೇ. 96 ಮಳೆಯ ಮುನ್ಸೂಚನೆ ನೀಡಿತ್ತು. ಆದರೆ, ಆ ಅವಧಿಯಲ್ಲಿ ನಿರೀಕ್ಷೆಗಿಂತ ಶೇ.2ರಷ್ಟು ಕಡಿಮೆ ಅಂದರೆ ಶೇ.94ರಷ್ಟು ಮಾತ್ರ ಮಳೆ ದಾಖಲಾಗಿದೆ.
ಒಂದು ವರ್ಷದಲ್ಲಿ ದೇಶದ ಒಟ್ಟು ಮಳೆಯ ಶೇ.70 ಮಳೆಗಾಲದಲ್ಲಿ ಮಾತ್ರ ಬೀಳುತ್ತದೆ. ದೇಶದ ಶೇ.70ರಿಂದ 80ರಷ್ಟು ರೈತರು ಬೆಳೆಗಳಿಗೆ ನೀರಾವರಿಗಾಗಿ ಮಳೆಯನ್ನೇ ಅವಲಂಬಿಸಿದ್ದಾರೆ.
ವಾಯುವ್ಯ, ಪೂರ್ವ ಮತ್ತು ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ನಿರೀಕ್ಷಿತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮತ್ತಷ್ಟು ಓದಿ: ಜನರಿಗೆ ಬಿಸಿಲ ಬೇಗೆಯಿಂದ ಬೇಗ ದೊರೆಯಲಿದೆ ಮುಕ್ತಿ, ಅವಧಿಗೂ ಮುನ್ನವೇ ಮುಂಗಾರು ಆಗಮನ ಸಾಧ್ಯತೆ
ಭಾರತದಲ್ಲಿ ಉತ್ತಮ ಮಾನ್ಸೂನ್‌ಗೆ ಸಂಬಂಧಿಸಿದ ಲಾ ನಿನಾ ಪರಿಸ್ಥಿತಿಗಳು ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ದೇಶವು ದೀರ್ಘಾವಧಿಯ ಸರಾಸರಿ 87 ಸೆಂಟಿಮೀಟರ್‌ನ 106 ಪ್ರತಿಶತದಷ್ಟು ಮಳೆಯನ್ನು ಪಡೆಯಲಿದೆ ಎಂದು ಹೇಳಿದೆ.
ಎಲ್ ನಿನೊ ಹಾಗೂ ಲಾ ನಿನಾ ಪೆಸಿಫಿಕ್ ಮಹಾಸಾಗರದಲ್ಲಿ ಹವಾಮಾನದ ಮಾದರಿಗಳಾಗಿವೆ. ಅದು ಪ್ರಪಂಚಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರಬಹುದು.
ಈ ಬಾರಿಯ ಮುಂಗಾರು ಅವಧಿಗೂ ಮುನ್ನವೇ ಆಗಮಸುವ ಸಾಧ್ಯತೆ ಇದೆ ಸ್ಕೈ ಮೆಟ್ ವರದಿ ಮಾಡಿತ್ತು. ಹೀಗಾಗಿ ದೇಶದ ಜನತೆ ಶೀಘ್ರವೇ ಬಿಸಿ ಝಳದಿಂದ ಮುಕ್ತಿ ಪಡೆಯಲಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ಇಂಡಿಯನ್ ಓಷನ್ ಡೈಪೋಲ್ ಅಥವಾ ಒಐಡಿ ಅಥವಾ ಲಾ ನಿನಾ ಪರಿಸ್ಥಿತಿಗಳು ಮಳೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಋತುವಿನ ಮೊದಲಾರ್ಧದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುತ್ತದೆ ಎಂದು ಅದು ಹೇಳಿದೆ. ಎಲ್ ನಿನೋ ತ್ವರಿತವಾಗಿ ಲಾ ನಿನಾಗೆ ತಿರುಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Mon, 15 April 24