ಜನರಿಗೆ ಬಿಸಿಲ ಬೇಗೆಯಿಂದ ಬೇಗ ದೊರೆಯಲಿದೆ ಮುಕ್ತಿ, ಅವಧಿಗೂ ಮುನ್ನವೇ ಮುಂಗಾರು ಆಗಮನ ಸಾಧ್ಯತೆ
ಈ ಬಾರಿಯ ಮುಂಗಾರು ಅವಧಿಗೂ ಮುನ್ನವೇ ಆಗಮಸುವ ಸಾಧ್ಯತೆ ಇದೆ ಸ್ಕೈ ಮೆಟ್ ವರದಿ ಮಾಡಿದೆ. ಹೀಗಾಗಿ ದೇಶದ ಜನತೆ ಶೀಘ್ರವೇ ಬಿಸಿ ಝಳದಿಂದ ಮುಕ್ತಿ ಪಡೆಯಲಿದ್ದಾರೆ. ಆದರೆ ಭಾರತೀಯ ಹವಾಮಾನ ಇಲಾಖೆ ಇಲ್ಲಿಯವರೆಗೂ ಮುಂಗಾರು ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಈ ಬಾರಿಯ ಮುಂಗಾರು ಅವಧಿಗೂ ಮುನ್ನವೇ ಆಗಮಸುವ ಸಾಧ್ಯತೆ ಇದೆ ಸ್ಕೈ ಮೆಟ್ ವರದಿ ಮಾಡಿದೆ. ಹೀಗಾಗಿ ದೇಶದ ಜನತೆ ಶೀಘ್ರವೇ ಬಿಸಿ ಝಳದಿಂದ ಮುಕ್ತಿ ಪಡೆಯಲಿದ್ದಾರೆ. ಆದರೆ ಭಾರತೀಯ ಹವಾಮಾನ ಇಲಾಖೆ ಇಲ್ಲಿಯವರೆಗೂ ಮುಂಗಾರು ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಸ್ಕೈಮೆಟ್ ವರದಿಯು ಈ ಬಾರಿ ಸಾಮಾನ್ಯ ಮುಂಗಾರು ಇರಲಿದೆ ಎಂದು ಹೇಳಿದೆ. ಹಿಂದೂ ಮಹಾಸಾಗರದಲ್ಲಿ ಇಂಡಿಯನ್ ಓಷನ್ ಡೈಪೋಲ್ ಅಥವಾ ಒಐಡಿ ಅಥವಾ ಲಾ ನಿನಾ ಪರಿಸ್ಥಿತಿಗಳು ಮಳೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಋತುವಿನ ಮೊದಲಾರ್ಧದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುತ್ತದೆ ಎಂದು ಅದು ಹೇಳಿದೆ. ಎಲ್ ನಿನೋ ತ್ವರಿತವಾಗಿ ಲಾ ನಿನಾಗೆ ತಿರುಗುತ್ತಿದೆ. ಲಾ ನಿನಾ ವರ್ಷಗಳಲ್ಲಿ ಮಾನ್ಸೂನ್ ಬಲವಾಗಿರುತ್ತದೆ ಎಂದು ಸ್ಕೈಮೆಟ್‌ನ ಎಂಡಿ ಜತಿನ್ ಸಿಂಗ್ ಹೇಳಿದ್ದಾರೆ.
2023 ರ ಮಾನ್ಸೂನ್ ಋತುವಿನಲ್ಲಿ ದೀರ್ಘಾವಧಿಯ ಸರಾಸರಿ 868.6 ಎಂಎಂಗೆ ಹೋಲಿಸಿದರೆ ಭಾರತವು 820 ಎಂಎಂ ನಷ್ಟು “ಸರಾಸರಿ-ಕಡಿಮೆ” ಸಂಚಿತ ಮಳೆಯನ್ನು ಪಡೆಯಿತು. ಈ ತಿಂಗಳ ಕೊನೆಯಲ್ಲಿ ನೈರುತ್ಯ ಮುಂಗಾರು ಮುನ್ಸೂಚನೆಯನ್ನು ನೀಡಲು ಐಎಂಡಿ ಸಜ್ಜಾಗಿದೆ.
ಮತ್ತಷ್ಟು ಓದಿ: Karnataka Weather: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಏಪ್ರಿಲ್ 17ರವರೆಗೆ ಮಳೆ ಸಾಧ್ಯತೆ
ಸ್ಕೈಮೆಟ್ ಪ್ರಕಾರ, ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಲಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಮುಂಗಾರು ಹೆಚ್ಚಿರಲಿದೆ, ಬಿಹಾರ, ಜಾರ್ಖಂಡ್, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಕಡಿಮೆ ಮಳೆಯಾಗುವ ನಿರೀಕ್ಷೆ ಇದೆ.
ಎಲ್ ನಿನೊ ಹಾಗೂ ಲಾ ನಿನಾ ಪೆಸಿಫಿಕ್ ಮಹಾಸಾಗರದಲ್ಲಿ ಹವಾಮಾನದ ಮಾದರಿಗಳಾಗಿವೆ. ಅದು ಪ್ರಪಂಚಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರಬಹುದು.
ಈಶಾನ್ಯ ರಾಜ್ಯಗಳಲ್ಲಿ ಮಳೆಗಾಲದ ಆರಂಭದಲ್ಲಿ ಮಳೆಯ ಕೊರತೆ ಕಾಡಲಿದೆ. 2024ರ ಮಳೆ ಮುನ್ಸೂಚನೆ ವರದಿ ಪ್ರಕಾರ, ದೀರ್ಘ ಅವಧಿ ಸರಾಸರಿ ಪ್ರಕಾರ 868.6 ಎಂಎಂ ಮಳೆ ಬೀಳಲಿದೆ. ಅಂದರೆ ಶೇಕಡ 102 ಮಳೆಯಾಗಲಿದೆ.
ಕರ್ನಾಟಕದಲ್ಲಿ ಈ ಸಲದ ಮುಂಗಾರು ಮಳೆ ಜೂನ್, ಜುಲೈ ತಿಂಗಳಲ್ಲಿ ಶುರುವಾಗಲಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದು. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಜೂನ್‌ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಮುಂಗಾರು ಮಳೆ ಸಹಜವಾಗಿರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ