ಬೇಸಿಗೆಯ ಅಕಾಲಿಕ ಮಳೆಯೊಂದಕ್ಕೆ ಬೆಂಗಳೂರು ರಸ್ತೆಯಲ್ಲಿ ಸಂಚಾರ ಅಧ್ವಾನ, ಬಸ್ಸಿನ ಚಕ್ರ ಮುಳುಗುವಷ್ಟು ನೀರು!
ಯಲಹಂಕದ ರಸ್ತೆಯೊಂದರಲ್ಲಿ ನದಿಯಂತೆ ಹರಿಯುತ್ತಿರುವ ಮಳೆನೀರು ಅಂಗಡಿಗಳಿಗೂ ನುಗ್ಗುತ್ತಿದೆ. ಜನರ ಪರದಾಟ ಗಮನಿಸಿ. ಬಿಎಂಟಿಸಿ ಬಸ್ಸು ಇಲ್ಲಿಯವರೆಗೆ ಬಂದ್ದಿದ್ದೇ ಸೋಜಿಗ ಹುಟ್ಟಿಸುವ ಸಂಗತಿ. ಯಾಕೆಂದರೆ ಎಲ್ಲಿ ಗುಂಡಿಯಿದೆ, ಎಲ್ಲಿ ಸಮತಟ್ಟಾದ ರಸ್ತೆ ಇದೆ ಅಂತ ಹೇಳಲಾಗದು. ನೀಲಿಬಣ್ಣದ ಪಾಶ್ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಚಕ್ರ ಪ್ರಾಯಶಃ ಗುಂಡಿಯಲ್ಲಿ ಸಿಕ್ಕಿಕೊಂಡಿರಬಹುದು!
ಬೆಂಗಳೂರು, 22 ಮಾರ್ಚ್: ಮಾರ್ಚ್ ತಿಂಗಳ ಕೊನೆಯ ದಿನಗಳಿವು, ನಗರದಲ್ಲಿ ಮಳೆ ಸುರಿದರೆ ಅದು ಅಕಾಲಿಕ. ಆದರೆ ಬೇಸಿಗೆಯ ಒಂದು ಅಕಾಲಿಕ ಮಳೆಗೂ ಬೆಂಗಳೂರು ರಸ್ತೆಗಳು ಗ್ರೇಟರ್ ಬೆಂಗಳೂರಿನ ಕನಸು ಕಾಣುತ್ತಿರುವ ಒಬ್ಬ ಸಾಮಾನ್ಯ ನಿವಾಸಿಯನ್ನು ವಾಸ್ತವಕ್ಕೆ ತಂದು ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ನೀರಲ್ಲಿ ನಿಲ್ಲಿಸಿಬಿಡುತ್ತವೆ, ಈ ಬಿಎಂಟಿಸಿ ಬಸ್ಸಿನಂತೆ. ಇವತ್ತು ಬೆಂಗಳೂರು ಉತ್ತರ ಭಾಗದಲ್ಲಿ ಸಮಾರು 45 ನಿಮಿಷ ಮಳೆಯಾಗಿದ್ದಕ್ಕೆ ಯಲಹಂಕ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ಈ ಸ್ಥಿತಿ. ಈಗ್ಲೇ ಹೀಗಾದರೆ ಮುಂದ್ಹೇಗೆ ಅಂತ ಯೋಚನೆಯೇ? ಪತ್ರಿಸಲದಂತೆ ಈ ಸಲವೂ ದೇವರಿರುತ್ತಾನೆ ಬಿಡಿ ಮಾರಾಯ್ರೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಮಳೆಗೆ ಸ್ವಿಮ್ಮಿಂಗ್ ಪೂಲ್ ಆದ ಕನ್ವೆನ್ಷನ್ ಹಾಲ್!
Latest Videos