ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದಕ್ಕೆ ಬಿಜೆಪಿ ಶಾಸಕರು ವಿಷಾದ ವ್ಯಕ್ತಪಡಿಸಲಿಲ್ಲ: ಯುಟಿ ಖಾದರ್, ಸ್ಪೀಕರ್
ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಇಬ್ಬರು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ದೂರು ದಾಖಲಾದ ಕೂಡಲೇ ಅದರ ಗಾಂಭೀರ್ಯತೆಯ ಆಧಾರದಲ್ಲಿ ಒಂದು ಉನ್ನತಮಟ್ಟದ ತನಿಖೆಗೆ ಆದೇಶ ನೀಡುವುದಾಗಿ ಪರಮೇಶ್ವರ್ ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ಮಾತಾಡುತ್ತಿದ್ದ ಸಿಎಂ, ವಿಪಕ್ಷ ನಾಯಕ ಅಶೋಕಗೆ ಮಾತಾಡುವ ಅವಕಾಶ ನೀಡಿದರು ಎಂದು ಖಾದರ್ ಹೇಳಿದರು.
ಬೆಂಗಳೂರು, 22 ಮಾರ್ಚ್: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಸಸ್ಪೆಂಡ್ ಆಗಿರುವ ಬಿಜೆಪಿ ಶಾಸಕರು (BJP MLAs) ತಮ್ಮಿಂದಾಗಿರುವ ತಪ್ಪನ್ನು ಮನಗಂಡು ಸಸ್ಪೆನ್ಷನ್ ರದ್ದು ಮಾಡುವಂತೆ ಕೋರಿ ಮನವಿ ಸಲ್ಲಿಸಿದರೆ ಅದರ ಬಗ್ಗೆ ಯೋಚಿಸಬಹುದು ಎಂದು ಹೇಳಿದರು. ಸಭಾಧ್ಯಕ್ಷರ ಪೀಠದ ಮೇಲೆ ಪೇಪರ್ ಎಸೆದು ದಾಂಧಲೆ ಮಾಡೋದು ಸರಿಯಲ್ಲ, ಸದನದಲ್ಲಿ ಹೀಗೆ ನಡೆದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಭೆಗಳಲ್ಲೂ ಇದೇ ಮುಂದುವರಿಯುತ್ತದೆ. ಆವೇಶದಲ್ಲಿ ಅದೆಲ್ಲ ನಡೆಯಿತು, ಪೀಠಕ್ಕೆ ಅಗೌರವ ತೋರಬಾರದು ಅನ್ನೋದು ಬಿಜೆಪಿ ಶಾಸಕರಿಗೆ ಮನವರಿಕೆಯಾಗಲಿಲ್ಲ, ಸಂಜೆ 4 ಗಂಟೆಗೆ ಸದನ ಮುಂದುವರಿದಾಗ ಅವರು ತಮ್ಮ ವರ್ತನೆಯ ಬಗ್ಗೆ ವಿಷಾದ ವ್ಯಕ್ತಪಡಿಸುವ ಬದಲು ಮೊದಲು ಮಾಡಿದಕ್ಕಿಂತ ಹೆಚ್ಚು ಗಲಾಟೆ ಶುರು ಮಾಡಿದರು ಎಂದು ಖಾದರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನನ್ನ ಹೊರಹಾಕಿದ ಮಾರ್ಷಲ್ಸ್