ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಗ್ರೇಟಾ ಥುನ್ಬರ್ಗ್ ವಿರುದ್ಧ FIR ದಾಖಲಿಸಿದ ದೆಹಲಿ ಪೊಲೀಸರು
ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ ಗ್ರೇಟಾ ಥುನ್ಬರ್ಗ್ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ನಮ್ಮ ಬೆಂಬಲವಿದೆ ಎಂದು ಬರೆದುಕೊಂಡಿದ್ದರು.
ದೆಹಲಿ: ಕಳೆದ ಕೆಲ ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ದೆಹಲಿ ಗಡಿ ಭಾಗದಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರ ದೇಶಮಟ್ಟದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ರೈತರ ಪ್ರತಿಭಟನೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗುತ್ತಿದೆ.
ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ ಗ್ರೇಟಾ ಥುನ್ಬರ್ಗ್ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ನಮ್ಮ ಬೆಂಬಲವಿದೆ ಎಂದು ಬರೆದುಕೊಂಡಿದ್ದರು. ಈ ಮೂಲಕ ರೈತರ ಪ್ರತಿಭಟನೆ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುವಂತೆ ಮಾಡಿದ್ದರು. ಅಲ್ಲದೆ, ಗ್ರೇಟಾ ಥುನ್ಬರ್ಗ್ ಮಾಡಿದ ಟ್ವೀಟ್ ಕೇಂದ್ರ ಸರ್ಕಾರಕ್ಕೆ ಇರಿಸುಮುರಿಸು ತಂದಿಟ್ಟಿತ್ತು. ಈ ಬೆನ್ನಲ್ಲೇ ಈಗ ಗ್ರೇಟಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
We stand in solidarity with the #FarmersProtest in India. https://t.co/tqvR0oHgo0
— Greta Thunberg (@GretaThunberg) February 2, 2021
ಇನ್ನು, ಗ್ರೇಟಾ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯ, ಕೆಲವು ಪಟ್ಟಭದ್ರ ಗುಂಪುಗಳು ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆಯುತ್ತಿರುವುದು ದುರದೃಷ್ಟಕರ ಎಂದು ಹೇಳಿತ್ತು.
ನಾನು ಈಗಲೂ ಭಾರತದ ರೈತರ ಪರ ಇದ್ದೇನೆ:
ಅಂತಾರಾಷ್ಟ್ರೀಯ ಪಿತೂರಿ ಆರೋಪ ಹಿನ್ನೆಲೆಯಲ್ಲಿ ಗ್ರೇಟಾ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಉತ್ತರಿಸಿರುವ ಗ್ರೇಟಾ, ಈಗಲೂ ನಾನು ಭಾರತೀಯ ರೈತರ ಪರವಿದ್ದೇನೆ. ಬೆದರಿಕೆಗಳಿಂದ ನನ್ನ ನಿರ್ಧಾರ ಬದಲಿಸಲು ಆಗುವುದಿಲ್ಲ ಎಂದು ಟ್ವೀಟ್ ಮಾಡಿ ಟ್ವೀಟ್ ಮಾಡಿ ಸಮರ್ಥನೆ ನೀಡಿದ್ದಾರೆ.
I still #StandWithFarmers and support their peaceful protest. No amount of hate, threats or violations of human rights will ever change that. #FarmersProtest
— Greta Thunberg (@GretaThunberg) February 4, 2021
ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿದ ಪಾಪ್ ತಾರೆ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್ಬರ್ಗ್
Published On - 4:12 pm, Thu, 4 February 21