ಹಿಮಪಾತವಾಗುತ್ತಿರುವ ದುರ್ಗಮ ಹಾದಿಯಲ್ಲಿ ತಾಯಿ-ನವಜಾತ ಶಿಶುವನ್ನು ಹೊತ್ತು ಸಾಗಿದ ಚಿನಾರ್​ ಕಾರ್ಪ್ಸ್​ ಯೋಧರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 24, 2021 | 3:19 PM

ಫಾರೂಕ್​ ಖಸಾನಾ ಪತ್ನಿ ಹೆರಿಗೆ ನೋವಿನಿಂದ ಆರು ಕಿಮೀ ದೂರದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಗು ಹುಟ್ಟಿ, ಡಿಸ್​ಚಾರ್ಜ್ ಆದರೂ ವಾಪಸ್ ಮನೆಗೆ ಬರಲು ಸಾಧ್ಯವಾಗಿರಲಿಲ್ಲ.

ಹಿಮಪಾತವಾಗುತ್ತಿರುವ ದುರ್ಗಮ ಹಾದಿಯಲ್ಲಿ ತಾಯಿ-ನವಜಾತ ಶಿಶುವನ್ನು ಹೊತ್ತು ಸಾಗಿದ ಚಿನಾರ್​ ಕಾರ್ಪ್ಸ್​ ಯೋಧರು
ತಾಯಿ-ಮಗುವನ್ನು ಹೊತ್ತು ಸಾಗಿದ ಯೋಧರು
Follow us on

ಕುಪ್ವಾರಾ: ಅತಿಯಾದ ಹಿಮಪಾತದಿಂದ ಮನೆಗೆ ಬರಲಾಗದೆ ಆಸ್ಪತ್ರೆಯಲ್ಲೇ ಇದ್ದ ಬಾಣಂತಿ ಮತ್ತು ಮಗುವನ್ನು ಭಾರತೀಯ ಸೇನೆ ಚಿನಾರ್ ಕಾರ್ಪ್ಸ್​ ರೆಜಿಮೆಂಟ್​ನ ಯೋಧರು ಸುರಕ್ಷಿತವಾಗಿ ಹೊತ್ತುಕೊಂಡು ಬಂದು ಮನೆಗೆ ತಲುಪಿಸಿದ್ದಾರೆ.

ಕುಪ್ವಾರಾದ ದರ್ದ್​ಪೋರ್ ನಿವಾಸಿ ಫಾರೂಕ್​ ಖಸಾನಾ ಪತ್ನಿ ಹೆರಿಗೆ ನೋವಿನಿಂದ ಆರು ಕಿಮೀ ದೂರದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಗು ಹುಟ್ಟಿ, ಡಿಸ್​ಚಾರ್ಜ್ ಆದರೂ ವಾಪಸ್ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ಸಿಕ್ಕಾಪಟೆ ಹಿಮಪಾತವಾಗುತ್ತಿರುವ ಕಾರಣ ವಾಹನ ಸಂಚಾರವೂ ಸಾಧ್ಯವಾಗಿರಲಿಲ್ಲ. ಇನ್ನು ನಡೆಯುವುದೂ ಅಷ್ಟೇನೂ ಸುಲಭವಾಗಿರಲಿಲ್ಲ. ಈ ತಾಯಿ ಮತ್ತು ನವಜಾತ ಶಿಶುವನ್ನು ಚಿನಾರ್​ ಕಾರ್ಪ್ಸ್​ನ ಯೋಧರು ಹೊತ್ತುಕೊಂಡೇ ಆರು ಕಿಮೀ ಸಾಗಿ ಮನೆಗೆ ಮುಟ್ಟಿಸಿದ್ದಾರೆ. ಈ ವಿಷಯವನ್ನು ಭಾರತೀಯ ಸೇನೆ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದೆ.

ಯೋಧರು ಹಿಮಪಾತವಾಗುತ್ತಿರುವ ರಸ್ತೆಯಲ್ಲಿ ತಾಯಿ-ಮಗುವನ್ನು ಹೊತ್ತು ಮನೆಗೆ ಕರೆದುಕೊಂಡುಹೋಗುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.