ದೆಹಲಿ: ದೆಹಲಿಯಲ್ಲಿ ಪ್ರತಿಭಟನಾನಿರತ ರೈತರು ಗಣರಾಜ್ಯೋತ್ಸವ ದಿನದಂದು ನಿಗದಿತ ರಸ್ತೆಗಳಲ್ಲಿಯೇ ಟ್ರ್ಯಾಕ್ಟರ್ ಮೆರವಣಿಗೆ ನಡೆಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇದನ್ನು ರೈತ ನಾಯಕರೂ ಒಪ್ಪಿಕೊಂಡಿದ್ದರು. ಆದರೆ ಇಂದು ಟ್ರ್ಯಾಕ್ಟರ್ ಮೆರವಣಿಗೆ ನಡೆದದ್ದು ಬೇರೆ ಮಾರ್ಗದಲ್ಲಿ. ರೈತರು ಬೇರೆ ರಸ್ತೆಗಳಲ್ಲಿ ಯಾಕೆ ಪ್ರತಿಭಟನೆ ನಡೆಸಿದರು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡಾ ಪ್ರಶ್ನಿಸಿದ್ದಾರೆ.
ಇವರೆಲ್ಲ ಯುವಕರು. ಎಲ್ಲರೂ ಅಹಿಂಸೆ ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಎಂದು ರೈತ ನಾಯಕ ನರೇಶ್ ಟಿಕಾಯತ್ ಹೇಳಿದ್ದಾರೆ.
ದೆಹಲಿಯ ಮೂರು ಗಡಿಪ್ರದೇಶಗಳಿಂದ ರೈತರ ಮೆರವಣಿಗೆ ಹೊರಡಲು ರೈತರಿಗೆ ದೆಹಲಿ ಪೊಲೀಸರು ಭಾನುವಾರ ಅನುಮತಿ ನೀಡಿದ್ದರು. ಇದಕ್ಕೆ ಒಪ್ಪಿದ್ದ ರೈತರು ಪೂರ್ವ ನಿರ್ಧಾರಿತ ಮಾರ್ಗದಲ್ಲಿಯೇ ನಾವು ಟ್ರ್ಯಾಕ್ಟರ್ ಮೆರವಣಿಗೆ ಮಾಡುತ್ತೇವೆ. ಬೇರೆ ಯಾವುದೇ ದಾರಿಯಿಂದ ದೆಹಲಿ ನಗರದೊಳಗೆ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದರು. 11 ಗಂಟೆಗೆ ಮೆರವಣಿಗೆ ಆರಂಭಿಸಲು ಅನುಮತಿ ನೀಡಲಾಗಿತ್ತು. ಆದಾಗ್ಯೂ, ಇದಕ್ಕಿಂತ ಒಂದು ಗಂಟೆ ಮುಂಚೆಯೇ ರೈತರು ತಮ್ಮ ಪ್ರತಿಭಟನೆ ಆರಂಭಿಸಿದ್ದರು.
ಇದನ್ನೂ ಓದಿ: In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?
ರೈತರ ಟ್ರ್ಯಾಕ್ಟರ್ ಮೆರವಣಿಗೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಮತ್ತು ರೈತರ ನಡುವೆ ಸಂಘರ್ಷ ನಡೆಯಿತು. ಸಿಂಗು ಮತ್ತು ಘಾಜೀಪುರ್ ಗಡಿ ಪ್ರದೇಶಗಳಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರು.
11.30ರ ಹೊತ್ತಿಗೆ ಅಕ್ಷರಧಾಮ್ ದೇಗುಲದತ್ತ ಹೋಗುತ್ತಿದ್ದ ರೈತ ಪ್ರತಿಭಟನಾಕಾರರ ಗುಂಪು ಮಧ್ಯ ದೆಹಲಿಗೆ ನುಗ್ಗಿತು. ಘಾಜಿಪುರ್ ಮಾರುಕಟ್ಟೆಗೆ ಹೋಗಿ ಅಲ್ಲಿಂದ ಯುಟರ್ನ್ ತೆಗೆದುಕೊಳ್ಳುವಂತೆ ಪೊಲೀಸರು ಪ್ರತಿಭಟನಾಕಾರರರಿಗೆ ಹೇಳಿದ್ದರು. ಈ ವೇಳೆ ಮಧ್ಯ ದೆಹಲಿಗೆ ಮುನ್ನುಗ್ಗುತ್ತಿದ್ದ ರೈತರನ್ನು ತಡೆಯಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು.
#WATCH | Farmers stage protest against the three agriculture laws at Delhi-Jaipur Expressway in Manesar, Haryana. pic.twitter.com/F42FUhwEiy
— ANI (@ANI) January 26, 2021
ಅಲ್ಲಿಯವರೆಗೆೆ ಶಾಂತವಾಗಿದ್ದ ಟಿಕ್ರಿ ಸಮೀಪದ ನಂಗಲೋಯಿಯಲ್ಲಿ ಪೊಲೀಸ್ ಮತ್ತು ರೈತರ ಮೇಲೆ ಸಂಘರ್ಷವೇರ್ಪಟ್ಟಿತು. ನಂಗಲೋಯಿ ಚೌಕ್ ನಿಂದ ದೆಹಲಿ ನಗರದತ್ತ ಟ್ರ್ಯಾಕ್ಟರ್ ತಿರುಗಿಸಿದಾಗ ಪೊಲೀಸರು ಅಲ್ಲಿಂದ ಹಿಂದೆ ಸರಿಯುವಂತೆ ಹೇಳಿದರೂ ಪೊಲೀಸರು ಒಪ್ಪಲಿಲ್ಲ.
ದೆಹಲಿ ಕೆಂಪುಕೋಟೆ ಮೇಲೆ ರೈತಧ್ವಜ; ಇತಿಹಾಸದಲ್ಲಿ ಇದೇ ಮೊದಲು ಕೆಂಪುಕೋಟೆಗೆ ರೈತರ ಮುತ್ತಿಗೆ