ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೆಂಪು ಬಣ್ಣದ ಪೇಟ ಧರಿಸಿ ಗಮನಸೆಳೆದ ಪ್ರಧಾನಿ
ಮೂಲಗಳ ಮಾಹಿತಿಯ ಪ್ರಕಾರ, ಮೋದಿ ಧರಿಸಿದ್ದ ಈ ಮುಂಡಾಸು ಜಾಮ್ನಗರದಲ್ಲಿ ತಯಾರಾದದ್ದಾಗಿದೆ. ಗುಜರಾತ್ನ ರಾಜರ ಕುಟುಂಬ ಈ ಪೇಟವನ್ನು ಪ್ರಧಾನಿಗೆ ಮೊದಲ ಬಾರಿಗೆ ಉಡುಗೊರೆ ನೀಡಿದೆ.

ದೆಹಲಿ: ಭಾರತವು 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಇಂದು ಆಚರಿಸಲಾಯಿತು. ಪದ್ಧತಿಯಂತೆ ದೆಹಲಿ ರಾಜಪಥ್ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು.
ದೆಹಲಿ ಗಣರಾಜ್ಯೋತ್ಸವ ಸಮಾರಂಭ ಆರಂಭವಾದಾಗ, ನೆರೆದಿದ್ದ ಜನರ ಮನಸೆಳೆದ ಒಂದು ವಿಚಾರವೆಂದರೆ ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಪೇಟ. ಬಿಳಿ ಕುರ್ತಾ, ಪೈಜಾಮಾ ಜೊತೆಗೆ, ಬೂದು ಬಣ್ಣದ ಕೋಟ್ ಹಾಗೂ ಶಾಲು ಧರಿಸಿದ್ದ ಪ್ರಧಾನಿ ಕೆಂಪು ಬಣ್ಣದ ಪೇಟ ತೊಟ್ಟು ಜನರ ಕಣ್ಸೆಳೆದರು.
ಮೂಲಗಳ ಮಾಹಿತಿಯ ಪ್ರಕಾರ, ಮೋದಿ ಧರಿಸಿದ್ದ ಈ ಮುಂಡಾಸು ಜಾಮ್ನಗರದಲ್ಲಿ ತಯಾರಾದದ್ದಾಗಿದೆ. ಗುಜರಾತ್ನ ರಾಜರ ಕುಟುಂಬ ಈ ಪೇಟವನ್ನು ಪ್ರಧಾನಿಗೆ ಮೊದಲ ಬಾರಿಗೆ ಉಡುಗೊರೆ ನೀಡಿದೆ ಎಂದು ತಿಳಿದುಬಂದಿದೆ. ಜಾಮ್ನಗರ್ ಲೋಕಸಭಾ ಸದಸ್ಯ, ಪೂನಾಬೆನ್ ಮಾದಮ್ ಟ್ವೀಟ್ ಮಾಡಿರುವಂತೆ, ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಜಾಮ್ನಗರ್ನಲ್ಲಿ ಈ ಪೇಟ ತಯಾರಾಗಿದೆ.
Jamnagar is known for its rich culture.
Proud to see Hon'ble PM Shri @narendramodi Ji in a 'Halari Paghdi' from Jamnagar on the occasion of #RepublicDay pic.twitter.com/Jz5CFTWij2
— Poonamben Maadam (@PoonambenMaadam) January 26, 2021
#RepublicDay: Prime Minister Narendra Modi signs the ceremonial book at the National War Memorial at the India Gate
Defence Minister, Chief of Defence Staff, Chief of Army Staff and Chief of Navy Staff also present pic.twitter.com/99Fp8ZCPXX
— ANI (@ANI) January 26, 2021
#RepublicDay: Prime Minister Narendra Modi leads the nation in paying tribute to the fallen soldiers by laying a wreath at the National War Memorial at the India Gate pic.twitter.com/mDX47YYVfr
— ANI (@ANI) January 26, 2021
ಪ್ರಧಾನಿ ಮೋದಿ ವಿಭಿನ್ನ ಉಡುಪು, ವಸ್ತ್ರ, ಪೇಟಗಳ ಮೂಲಕ ಗಮನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಬಾರಿಯ ಗಣರಾಜ್ಯೋತ್ಸವದಲ್ಲೂ ಮೋದಿ ಕೇಸರಿ ಪೇಟ ಧರಿಸಿ ಕಾಣಿಸಿಕೊಂಡಿದ್ದರು. ಅಂತೆಯೇ, ಕಳೆದ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು, ರಾಜಸ್ಥಾನದ ಕೇಸರಿ ಮತ್ತು ಹಳದಿ ಬಣ್ನದ ಪೇಟದಲ್ಲಿ ಗಮನ ಸೆಳೆದಿದ್ದರು.
ಭಾರತದ ವೈವಿಧ್ಯತೆ ಸಾರಿದ ‘ಗೂಗಲ್ ಡೂಡಲ್’; ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸಿದ ಇಂಟರ್ನೆಟ್ ದೈತ್ಯ
ಗಣರಾಜ್ಯೋತ್ಸವ ವಿಶೇಷ | ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ನಾರೀಶಕ್ತಿ
Published On - 7:42 pm, Tue, 26 January 21




