ದೆಹಲಿ: ಭಾರತದಲ್ಲಿ ಮಂಗಳವಾರ 42,640 ಹೊಸ ಕೊವಿಡ್ ಪ್ರಕರಣಗಳು ಮತ್ತು 1,167 ಸಾವು ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕ್ರಮವಾಗಿ 29,977,861 ಮತ್ತು 389,302 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ವರ್ಷದ ಮಾರ್ಚ್ 20 ರಿಂದ 40,953 ಪ್ರಕರಣಗಳು ವರದಿಯಾಗಿದ್ದು ಇಂದು ವರದಿಯಾಗಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಎಂದು ಅಂಕಿಅಂಶಗಳು ಸೂಚಿಸಿವೆ.
ಕಳೆದ 24 ಗಂಟೆಗಳಲ್ಲಿ ಸುಮಾರು 82,000 ಜನರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಮತ್ತು ಒಟ್ಟು ಚೇತರಿಕೆ 28,926,038 ಕ್ಕೆ ಏರಿದೆ. ದೈನಂದಿನ ಚೇತರಿಕೆಯು ಸತತ 40 ನೇ ದಿನವೂ ಹೊಸ ಪ್ರಕರಣಗಳನ್ನು ಮೀರಿಸಿದೆ.
ಸಕ್ರಿಯ ಪ್ರಕರಣಗಳು 662,521 ಕ್ಕೆ ಇಳಿದಿವೆ ಮತ್ತು ಒಟ್ಟು ಪ್ರಕರಣಗಳ ಶೇಕಡಾ 2.35 ರಷ್ಟಿದೆ.
ಮಂಗಳವಾರದ ಪ್ರಕರಣಗಳು ಸೋಮವಾರದ ಪ್ರಕರಣಕ್ಕಿಂತ 10,616 ಕಡಿಮೆ. 53,256 ಜನರಿಗೆ ಕೊವಿಡ್ -19 ಪಾಸಿಟಿವ್ ಎಂದು ಪತ್ತೆಹಚ್ಚಲಾಗಿದೆ.
India reports 42,640 new #COVID19 cases (lowest in 91 days), 81,839 discharges & 1,167 deaths in last 24 hours as per Union Health Ministry
Total cases: 2,99,77,861
Total discharges: 2,89,26,038
Death toll: 3,89,302
Active cases: 6,62,521Total Vaccination: 28,87,66,201 pic.twitter.com/xyFVIvvIEt
— ANI (@ANI) June 22, 2021
ಕೊವಿಡ್ -19 ಗಾಗಿ ಒಟ್ಟು 394,072,142 ಮಾದರಿಗಳನ್ನು ಪರೀಕ್ಷಿಸಲಾಗಿದೆ, ಅದರಲ್ಲಿ 1,664,360 ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಎಲ್ಲಾ ಸರ್ಕಾರಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಕೇಂದ್ರವು 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಲು ಪ್ರಾರಂಭಿಸಿವೆ. ಮತ್ತು ರಾತ್ರಿ 10 ರ ಹೊತ್ತಿಗೆ, 8 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣವನ್ನು ನೀಡಲಾಗಿದೆ, ಈ ವರ್ಷ ಜನವರಿ 16 ರಂದು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗಿನಿಂದ ಒಂದೇ ದಿನದಲ್ಲಿ ಅತಿ ಹೆಚ್ಚು ಲಸಿಕೆ ನೀಡಲಾಗಿದೆ. ಬಹುಪಾಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಯುಟಿಗಳು) ಸೋಮವಾರ ಹೆಚ್ಚಿನ ಜನರಿಗೆ ಲಸಿಕೆ ನೀಡಿವೆ.
#COVID19 | The total number of samples tested up to 21st June is 39,40,72,142 including 16,64,360 samples tested yesterday, says the Indian Council of Medical Research (ICMR) pic.twitter.com/6OOYQwV6nX
— ANI (@ANI) June 22, 2021
ಆಗಸ್ಟ್ ವೇಳೆಗೆ ದಿನಕ್ಕೆ ಸುಮಾರು 1 ಕೋಟಿ ಜನರಿಗೆ ಲಸಿಕೆ ನೀಡಲು ಕೇಂದ್ರ ಸಿದ್ಧವಾಗಲಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹದ (NTAGI) ಅಧ್ಯಕ್ಷ ಡಾ.ಎನ್.ಕೆ.ಅರೋರಾ ಸೋಮವಾರ ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದರು.
ದೇಶದಲ್ಲಿ ದಾಖಲೆಯ ಏಕದಿನ ಚುಚ್ಚುಮದ್ದಿನ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೊವಿಡ್ -19 ರೋಗದ ವಿರುದ್ಧ ಹೋರಾಡಲು ಲಸಿಕೆಗಳು ಪ್ರಬಲ ಅಸ್ತ್ರವಾಗಿ ಉಳಿದಿವೆ ಎಂದು ಹೇಳಿದರು.
ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ ಒಟ್ಟು ವ್ಯಾಕ್ಸಿನೇಷನ್ ಅಂಕಿಅಂಶಗಳು 28,876,6201 ಕ್ಕೆ ಏರಿದೆ. ಈ ಪೈಕಿ 236,681,488 ಮೊದಲ ಡೋಸ್ ಪಡೆದಿದ್ದರೆ, ಉಳಿದ 52,084,713 ಮಂದಿ ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ .
ಇದನ್ನೂ ಓದಿ: ‘ಯೋಗದ ಮೂಲ ಭಾರತ ಅಲ್ಲ..ಅದನ್ನು ವಿಶ್ವಕ್ಕೆ ಪರಿಚಯಿಸಿದ್ದಷ್ಟೇ ಪ್ರಧಾನಿ ಮೋದಿ’-ಮತ್ತೊಂದು ವಿವಾದ ಹುಟ್ಟಿಸಿದ ನೇಪಾಳ ಪ್ರಧಾನಿ
(India on Tuesday recorded 42,640 cases and 1,167 deaths due to the coronavirus disease active cases go below 7 lakh)