ಭಾರತ-ಪಾಕ್​ ನಡುವೆ ಬಂದು ಬಡಾಯಿಕೊಚ್ಚಿಕೊಂಡ ಟ್ರಂಪ್​ನ ಮತ್ತೊಂದು ಬಿಲ್ಡಪ್ ಅನಾವರಣ

ಭಾರತ ಮತ್ತು ಪಾಕಿಸ್ತಾನಕ್ಕೆ ವ್ಯಾಪಾರ ಹೆಚ್ಚಿಸುವ ಭರವಸೆ ನೀಡಿದ ಬಳಿಕ ಆ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿದವು ಎಂಬರ್ಥದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಆದ್ರೆ, ಟ್ರಂಪ್ ಅವರೊಂದಿಗಾಗಲೀ ಅಮೆರಿಕದ ಯಾರೊಂದಿಗಾಗಲೀ ಆಪರೇಷನ್ ಸಿಂದೂರ್ ಬಳಿಕ ವ್ಯಾಪಾರ ವಿಚಾರವನ್ನು ಸರ್ಕಾರ ಚರ್ಚಿಸಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹಾಗಾದ್ರೆ, ಟ್ರಂಪ್​​ ಬರೀ ಬಿಲ್ಡಪ್​​ ತೆಗೆದುಕೊಳ್ಳುವುದಾ? ಇದೊಂದೇ ಅಲ್ಲ ಈ ಹಿಂದೆಯೂ ಭಾರತ ಹಾಗೂ ಪಾಕ್​ ಮಧ್ಯ ಪ್ರವೇಶ ಮಾಡಿ ಈ ಟ್ರಂಪ್​ ವಿಶ್ವದ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದು ಉಂಟು.

ಭಾರತ-ಪಾಕ್​ ನಡುವೆ ಬಂದು ಬಡಾಯಿಕೊಚ್ಚಿಕೊಂಡ ಟ್ರಂಪ್​ನ ಮತ್ತೊಂದು ಬಿಲ್ಡಪ್ ಅನಾವರಣ
Us President Donald Trump

Updated on: May 13, 2025 | 9:52 PM

ನವದೆಹಲಿ, (ಮೇ 13): ವಿಶ್ವದ ದೊಡ್ಡಣ್ಣ ಎಂದು ಅಮೆರಿಕವನ್ನು (America) ಕರೆಯಲಾಗುತ್ತದೆ. ದೊಡ್ಡಣ್ಣ ಅಂದ್ರೆ ನ್ಯಾಯದ ಪರ ನಿಲ್ಲುವವ. ಗಲಾಟೆಗಳನ್ನು ಬಗೆಹರಿಸುವವ. ಆದ್ರೆ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳಯವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ (Donald Trump)​ ಬಿಲ್ಡಪ್​ ಬಟಾಬಯಲಾಗಿದೆ. ಈ ಹಿಂದೆ ಅಂದರೆ 2019ರ ಜುಲೈ 22ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಪ್ರವೇಶಿಸಿ ಟ್ರಂಪ್​ ದೊಡ್ಡ ಬಡಾಯಿ ಕೊಚ್ಚಿಕೊಂಡಿದ್ದರು. ಇದೀಗ ಆಪರೇಷನ್ ಸಿಂಧೂರ್ ಬಳಿಕ ಮಧ್ಯ ಪ್ರವೇಶ ಮಾಡಿದ್ದ ಟ್ರಂಪ್,​ ತಾನೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪರಮಾಣು ಸಂಘರ್ಷವನ್ನು ತಡೆದಿದ್ದೇನೆ ಎಂದು ವಿಶ್ವದ ಮುಂದೆ ಕ್ರೆಡಿಟ್​ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ವ್ಯಾಪಾರದ ಚಾಕಲೊಟ್ ತೋರಿಸಿ ಭಾರತ ಪಾಕಿಸ್ತಾನದ ಜಗಳ ನಿಲ್ಲಿಸಿತಾ ಅಮೆರಿಕ?; ಟ್ರಂಪ್ ಹೇಳಿದ್ದು ಸುಳ್ಳೆನ್ನುತ್ತಿದೆ ಸರ್ಕಾರ

ಟ್ರಂಪ್​ಗೆ ಭಾರತ ಸ್ಪಷ್ಟ ಸಂದೇಶ

ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನತೆಯ ಮಧ್ಯೆ ಕಾಶ್ಮೀರದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯವು ಮಂಗಳವಾರ ಕಾಶ್ಮೀರದ ವಿಚಾರದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದು, ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಕಾಶ್ಮೀರದಲ್ಲಿ ಯಾರ ಮಧ್ಯಸ್ಥಿಕೆಯನ್ನೂ ಭಾರತ ಸ್ವೀಕರಿಸುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಯ ಮಾತ್ರ ಎಂದು ಗುಡುಗಿದ್ದಾರೆ. ಇದರೊಂದಿಗೆ ಟ್ರಂಪ್​ ಬಿಲ್ಡಪ್​ಗೆ ಶಾಕ್​ ಕೊಟ್ಟಿದ್ದಾರೆ.

ಬಡಾಯಿ ಕೊಚ್ಚಿಕೊಂಡ ಟ್ರಂಪ್​

ಆಪರೇಷನ್ ಸಿಂದೂರ್​ ಯಶಸ್ವಿ ಬಳಿಕ ಮಧ್ಯ ಪ್ರವೇಶಿಸಿದ್ದ ಟ್ರಂಪ್, ಸಂರ್ಘವನ್ನು ಕೈಬಿಡುವಂತೆ ಹೇಳಿದ್ದರು. ಇದನ್ನೇ ದೊಡ್ಡದಾಗಿ ಹೇಳಿಕೊಂಡಿರುವ ದೊಡ್ಡಣ್ಣ, ಪರಮಾಣು ಸಂಘರ್ಷವನ್ನು ನಾವು ತಡೆದಿದ್ದೇವೆ. ಪರಮಾಣು ಯುದ್ಧ ನಡೆದು ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆ ಇರುವುದಾಗಿ ನನಗೆ ಅನಿಸಿತು. ಹಾಗಾಗಿ ಅದರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳು ನಿರ್ಣಾಯಕ ಪಾತ್ರ ವಹಿಸಿವೆ ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮನ್ನು ತಾವು ಹೊಗಳಿಕೊಂಡು ಬೆನ್ನು ತಟ್ಟಿಕೊಂಡಿದ್ದರು.

ಈ ಹಿಂದೆ ಬಿಲ್ಡಪ್​ ಕೊಟ್ಟಿದ್ದ ಟ್ರಂಪ್

ಡೊನಾಲ್ಡ್​ ಟ್ರಂಪ್​ ಈ ರೀತಿ ವಿಶ್ವದ ಮುಂದೆ ಬಡಾಯಿ ಕೊಚ್ಚಿಕೊಂಡಿರುವುದು ಇದೇನು ಮೊದಲಲ್ಲ. ಈ ಹಿಂದೆಯೂ ಪೊಳ್ಳು ಮಾತುಗಳಿಂದ ತಮ್ಮಷ್ಟಕ್ಕೆ ತಾವೇ  ಫುಲ್ ಕ್ರೆಡಿಟ್ ತೆಗೆದುಕೊಂಡಿದ್ದರು.  2019ರ ಜುಲೈ 22ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಪ್ರವೇಶಿಸಿ ಟ್ರಂಪ್​ ದೊಡ್ಡ ಬಡಾಯಿ ಕೊಚ್ಚಿಕೊಂಡಿದ್ದರು. ಆದ್ರೆ, ಇದಾದ ಒಂದೇ ವಾರಕ್ಕೆ ಮೋದಿ ಸರ್ಕಾರ, ಕಾಶ್ಮೀರ 370ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಐತಿಹಾಸಿಕ ತೀರ್ಮಾನ ಕೈಗೊಂಡಿತ್ತು. ಇದರೊಂದಿಗೆ ಬಿಸಿಯಲ್ಲಿ ಚಳಿ ಕಾಯಿಸಿಕೊಳ್ಳಲು ಬಂದಿದ್ದ ಟ್ರಂಪ್​ಗೆ ಮೋದಿ ಸರ್ಕಾರ ಶಾಕ್ ಕೊಟ್ಟಿತ್ತು.

ಒಟ್ಟಿನಲ್ಲಿ 2019ರ ಇದೀಗ ಭಾರತ-ಪಾಕ್ ನಡುವೆ ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಬಂದಿದ್ದ ದೊಡ್ಡಣ್ಣ ಅಮೆರಿಕದ ಡಬಲ್​ಗೇಮ್ ಬಯಲಾಗಿದೆ. ಭಾರತ-ಪಾಕ್ ನಡುವಿನ ಯುದ್ಧ ನಿಲ್ಲಿಸಿದ್ದೀವಿ ಎಂದು ಕ್ರೆಡಿಟ್ ಪಡೆಯು ಮುಂದಾಗಿದ್ದ ಡೊನಾಲ್ಡ್​ ಟ್ರಂಪ್​ ನೌಟಂಕಿ ಆಟ ಬಯಲಾದಂತಾಗಿದೆ.

Published On - 9:51 pm, Tue, 13 May 25