India Rain Alert: ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ, ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಭಾರಿ ಮಳೆ

ನಿಗದಿತ ಸಮಯಕ್ಕಿಂತ ಮೊದಲೇ ಕೆಲವು ರಾಜ್ಯಗಳಿಗೆ ಮುಂಗಾರು ಆಗಮನವಾಗಿದ್ದು, ಭಾರಿ ಮಳೆಯಾಗುತ್ತಿದೆ. ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳಲ್ಲಿ ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳು, ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳು, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ, ಮಧ್ಯ ಮತ್ತು ಉತ್ತರ ಬಂಗಾಳಕೊಲ್ಲಿಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ.

India Rain Alert: ವಾಡಿಕೆಗಿಂತ ಮೊದಲೇ  ಮುಂಗಾರು ಆಗಮನ, ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಭಾರಿ ಮಳೆ
ಮಳೆ
Image Credit source: PTI

Updated on: May 26, 2025 | 7:25 AM

ನವದೆಹಲಿ, ಮೇ 26: ವಾಡಿಕೆಗಿಂತ ಮೊದಲೇ ಹಲವು ರಾಜ್ಯಗಳಿಗೆ ನೈಋತ್ಯ ಮುಂಗಾರು(Southwest Monsoon) ಆಗಮನವಾಗಿದೆ. ಕರ್ನಾಟಕ, ಕೇರಳ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳದ ಬಳಿಕ ಮಹಾರಾಷ್ಟ್ರಕ್ಕೆ ಮುಂಗಾರು ಆಗಮನವಾಗಿದೆ. ಮುಂದಿನ ಎರಡು ದಿನಗಳಲ್ಲಿ ಮುಂಬೈ ತಲುಪಬಹುದು, ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖ ನೀಡಿದೆ.

ಮುಂದಿನ ಮೂರು ದಿನಗಳಲ್ಲಿ ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳು, ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳು, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ, ಮಧ್ಯ ಮತ್ತು ಉತ್ತರ ಬಂಗಾಳಕೊಲ್ಲಿಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ.

ದೆಹಲಿಯಲ್ಲಿ ಮಳೆ
ದೆಹಲಿಗೆ ಮುಂಗಾರು ಆಗಮನ ಸಮೀಪದವಿಲ್ಲದಿದ್ದರೂ ಕೂಡ ಭಾನುವಾರ ಧಾರಾಕಾರ ಮಳೆಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ, ರಸ್ತೆಗಳೆಲ್ಲವೂ ಜಲಾವೃತಗೊಂಡು ಕೆರೆಯಂತಾಗಿತ್ತು, ಹಲವು ವಾಹನಗಳು ಸಿಲುಕಿದ್ದವು.

ಇದನ್ನೂ ಓದಿ
ಕೇರಳಕ್ಕೆ ಮುಂಗಾರು ಪ್ರವೇಶ; 2009ರ ಬಳಿಕ ಮೊದಲ ಬಾರಿ ಬೇಗ ಮಳೆಗಾಲ ಶುರು
ಕೇರಳಕ್ಕೆ ಮೇ 25ರೊಳಗೆ ಮುಂಗಾರು ಪ್ರವೇಶ; ಕರ್ನಾಟಕದಲ್ಲೂ ಬೇಗ ಮಳೆಗಾಲ ಶುರು
Bangalore Rains: ಬೆಂಗಳೂರಿನಲ್ಲಿ ಮಧ್ಯಾಹ್ನದಿಂದಲೇ ಶುರುವಾದ ಮಳೆ
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ

ಇಂದು ಎಲ್ಲೆಲ್ಲಿ ಮಳೆಯಾಗಲಿದೆ?
ಕರಾವಳಿ ಕರ್ನಾಟಕ, ಕೇರಳ, ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು ಹಾಗೂ ಕಾರೈಕಲ್​ನಲ್ಲಿ ವಿಪರೀತ ಮಳೆ ಸುರಿಯಲಿದೆ. ಅಂಡಮಾನ್ ನಿಕೋಬಾರ್ ದ್ವೀಪಗಳು, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ಕರ್ನಾಟಕದ ಉತ್ತರ ಒಳನಾಡಿನಲ್ಲೂ ಭಾರಿ ಮಳೆಯಾಗಲಿದೆ.

ಮತ್ತಷ್ಟು ಓದಿ: Rain Updates: ಕೇರಳಕ್ಕೆ ಮಾನ್ಸೂನ್ ಆಗಮನವಾಗುತ್ತಿದ್ದಂತೆ ಕರ್ನಾಟಕ, ಗೋವಾಗೆ ರೆಡ್ ಅಲರ್ಟ್ ಘೋಷಣೆ; ಮುಂಬೈನಲ್ಲೂ ಭಾರೀ ಮಳೆ

 

ಅರುಣಾಚಲಪ್ರದೇಶ, ಅಸ್ಸಾಂ, ಮೇಘಾಲಯ, ಬಿಹಾರ, ಛತ್ತೀಸ್​ಗಢ, ಆಂಧ್ರ ಕರಾವಳಿ, ಗುಜರಾತ್, ಲಕ್ಷದ್ವೀಪ, ಮರಾಠವಾಡ, ನಾಗಾಲ್ಯಾಂಡ್, ಪಣಿಪುರ, ಮಿಜೋರಾಂ, ತ್ರಿಪುರಾ, ತೆಲಂಗಾಣದಲ್ಲಿ ಮಳೆಯಾಗಲಿದೆ. ಬಿಹಾರ ಹಾಗೂ ಮಧ್ಯಪ್ರದೇಶದಲ್ಲಿ ಗಾಳಿಯು ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬೀಸಲಿದೆ.

ಈ ಬಾರಿ ಮುಂಗಾರು ನಿಗದಿತ ಸಮಯಕ್ಕಿಂತ 8 ದಿನ ಮೊದಲೇ ಕೇರಳ ತಲುಪಿದೆ. ಐಎಂಡಿ ಪ್ರಕಾರ, ಕೊನೆಯ ಬಾರಿಗೆ ರಾಜ್ಯದಲ್ಲಿ ಮಾನ್ಸೂನ್ ಇಷ್ಟು ಬೇಗ ಆಗಮಿಸಿದ್ದು 2009 ರ ಮೇ 23 ಮತ್ತು 2001 ರಂದು. ಕೇರಳದಲ್ಲಿ ಮಾನ್ಸೂನ್ ಆಗಮನದ ಸಾಮಾನ್ಯ ದಿನಾಂಕ ಜೂನ್ 1. ಆದಾಗ್ಯೂ, 1918 ರಲ್ಲಿ, ಮಾನ್ಸೂನ್ ಮೇ 11 ರಂದು ಕೇರಳಕ್ಕೆ ಆಗಮಿಸಿತ್ತು.

ವಾಡಿಕೆಗಿಂತ ಮೊದಲೇ ಕೇರಳ ಪ್ರವೇಶಿಸಿರುವ ಮುಂಗಾರು, ರಾಜ್ಯದ ಎಲ್ಲೆಡೆ ನಿರಂತರವಾಗಿ ಮಳೆ ಸುರಿಯುಂತೆ ಮಾಡಿದೆ. ಮುಂಗಾರು ಮಾರುತವು ಮಹಾರಾಷ್ಟ್ರವನ್ನೂ ಪ್ರವೇಶಿಸಿದ್ದು, ಕೊಂಕಣದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈಶಾನ್ಯ ರಾಜ್ಯಗಳಿಗೆ ಕೂಡ ಮುಂಗಾರು ಪ್ರವೇಶ ಆಗಿದೆ.

ಇಡುಕ್ಕಿ ಜಿಲ್ಲೆಯಲ್ಲಿರುವ ಮಲಂಕರ ಅಣೆಕಟ್ಟಿನ ಐದು ಗೇಟುಗಳನ್ನು ತೆಗೆದು ಭಾನುವಾರ ನದಿಗೆ ನೀರು ಹರಿಸಲಾಯಿತು. ಇದರಿಂದ ತೊಡುಪುಳ ಹಾಗೂ ಮೂವಾಟ್ಟುಪುಳ ನದಿ ತೀರದಲ್ಲಿ ವಾಸಿಸುವ ನಿವಾಸಿಗಳಿಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಕೋಳಿಕ್ಕೋಡ್‌, ಕಾಸರಗೋಡು ಜಿಲ್ಲೆಯ ಹಲವೆಡೆ ಮರಗಳು ಉರುಳಿಬಿದ್ದಿವೆ. ಕೊಲ್ಲಂ ಪಟ್ಟಣದ ಹೃದಯಭಾಗದಲ್ಲಿ ದೊಡ್ಡದಾದ ಫ್ಲೆಕ್ಸ್ ರಸ್ತೆಗೆ ಉರುಳಿಬಿದ್ದಿದ್ದು, ಭಾರಿ ಅನಾಹುತವೊಂದು ಸ್ಪಲ್ಪದರಲ್ಲಿ ತಪ್ಪಿದೆ.

ದೆಹಲಿಯ ಬವಾನಾ, ಘೋಘಾ ಗ್ರಾಮ, ಸೆಕ್ಟರ್‌ 25 ರೋಹಿಣಿ, ಡಿಎಸ್‌ಐಐಡಿಸಿ ನರೇಲಾ, ಸುಲ್ತಾನ್‌ಪುರಿ, ಸೆಕ್ಟರ್‌ 22 ರೋಹಿಣಿ, ಕರಾಲಾ, ಬದ್ಲಿ, ಸಿರ್ಸಾಪುರ್, ಅವಂತಿಕಾ, ಮಂಗೋಲ್‌ಪುರಿ, ಆರ್‌.ಯು.ಬ್ಲಾಕ್‌ ಪೀತಾಂಪುರ ಹಾಗೂ ರಿಠಾಲಾ ಗ್ರಾಮಗಳು ಹಾಗೂ ಉತ್ತರ ದೆಹಲಿಯ ಹಲವೆಡೆಗಳಲ್ಲಿ ವಿದ್ಯುತ್‌ ವ್ಯತ್ಯಯಗೊಂಡಿದೆ ಎಂದು ಟಾಟಾ ಪವರ್‌ ದೆಹಲಿ ಡಿಸ್ಟ್ರಿಬ್ಯೂಷನ್‌ ಲಿಮಿಟೆಡ್‌ ತಿಳಿಸಿದೆ.

ಕೇರಳಕ್ಕೆ ಈ ವರ್ಷ ಮೇ 24ರಂದೇ ನೈಋತ್ಯ ಮುಂಗಾರು ಪ್ರವೇಶಿಸಿದ್ದು, ಭಾನುವಾರ ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿಯೂ ವ್ಯಾಪಕ ಮಳೆಯಾಗಿದೆ. ಮುಂಡಕ್ಕೈ ಮತ್ತು ಚೂರಲ್‌ಮಲದಲ್ಲಿ ಹಾದುಹೋಗುವ ಪುನ್ನಪುಳ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳ ನಿವಾಸಿಗಳು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ