ಮುಂದಿನ 12 ಗಂಟೆಗಳಲ್ಲಿ ದೆಹಲಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಜನವರಿ 30 ರಂದು ದೆಹಲಿಯ ಎನ್ಸಿಆರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನರೇಲಾ, ಬವಾನಾ, ಅಲಿಪುರ್, ಕಂಜಾವಾಲಾ, ಜಾಫರ್ಪುರ್, ನಜಫ್ಗಢ, ಇಂಡಿಯಾ ಗೇಟ್, ಅಕ್ಷರಧಾಮ, ಸಫ್ದರ್ಗಂಜ್, ನೆಹರೂ ಸ್ಟೇಡಿಯಂ, ಲಜಪತ್ ಕಾಲೊನಿ, ಛತ್ತರ್ಪುರ್, ತುಘಲಕಾಬಾದ್, ಮಾಳವೀಯನಗರ, ದೇರಮಂಡಿ ಪ್ರದೇಶದಲ್ಲಿ ಮಳೆಯಾಗಲಿದೆ.
ಹರ್ಯಾಣದ ಭಿವಾನಿ, ಉತ್ತರಪ್ರದೇಶದ ಕಿಥೋರ್, ಗುರ್ಮುಕ್ತೇಶ್ವರ್, ಹಾಪುರ್ ಮತ್ತು ಗುಲಾಟಿಯಲ್ಲಿ ಲಘು ಮಳೆಯಾಗಲಿದೆ.
ಹರ್ಯಾಣದ ಜಿಂದ್, ಗೊಹಾನಾ, ಹಂಸಿ, ರೋಹ್ಟಕ್, ಚರ್ಖಿ ದಾದ್ರಿ, ಕೊಸಾಲಿ, ಉತ್ತರ ಪ್ರದೇಶದ ಬಿಜ್ನೌರ್, ಸಕೋಟಿ ತಾಂಡಾ, ಹಸ್ತಿನಾಪುರ, ಮೀರತ್, ಮೋದಿನಗರ ಮತ್ತು ರಾಜಸ್ಥಾನದ ಪಿಲಾನಿಯಲ್ಲಿ ತಡರಾತ್ರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮತ್ತಷ್ಟು ಓದಿ: Karnataka Weather Today: ಬೆಂಗಳೂರು ಸೇರಿ ಕರ್ನಾಟಕದ 9 ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಮತ್ತೆ ಮಳೆ
ದೆಹಲಿಯಲ್ಲಿ 17.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಹಿಮಪಾತ ಉಂಟಾಗಲಿದ್ದು, ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರೋಹ್ಟಾಂಗ್ ಪಾಸ್, ಕುಂಜಮ್ ಪಾಸ್, ಬರಾಲಾಚಾ ಸೇರಿದಂತೆ ಇತರೆ ಬೆಟ್ಟಗಳಲ್ಲಿ ಭಾರಿ ಹಿಮಪಾತವಾಗಿದೆ.
ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಚಳಿ ಹೆಚ್ಚಾಗಿದೆ, ಸೋಮವಾರವೂ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಹಿಮಪಾತದ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ಆರು ಜಿಲ್ಲೆಗಳಲ್ಲಿ ಮಳೆ ಹಾಗೂ ಆಲಿಕಲ್ಲು ಮಳೆಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಕಾಶಿ, ಚಮೋಲಿ, ಪಿಥೋರಗಢ, ಬಾಗೇಶ್ವರದಲ್ಲಿ ಸೋಮವಾರ ಭಾರಿ ಮಳೆ ಹಾಗೂ ಹಿಮಪಾತವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಡೆಹ್ರಾಡೂನ್, ತೆಹ್ರಿ, ನೈನಿತಾಲ್, ಚಂಪಾವತ್, ಉಧಮ್ಸಿಂಗ್ ನಗರ, ಹರಿದ್ವಾರ ಜಿಲ್ಲೆಗಳಲ್ಲಿ ಕೆಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ