AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು ಆದರೆ ಬಿಜೆಪಿ-ಆರ್​ಎಸ್​ಎಸ್​ ಸಿದ್ಧಾಂತದ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ: ರಾಹುಲ್ ಗಾಂಧಿ

ಪ್ರತಿಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು ಆದರೆ ಬಿಜೆಪಿ-ಆರ್​ಎಸ್​ಎಸ್​ ಸಿದ್ಧಾಂತದ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರತಿಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು ಆದರೆ ಬಿಜೆಪಿ-ಆರ್​ಎಸ್​ಎಸ್​ ಸಿದ್ಧಾಂತದ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನಯನಾ ರಾಜೀವ್
|

Updated on: Jan 30, 2023 | 8:23 AM

Share

ಪ್ರತಿಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು ಆದರೆ ಬಿಜೆಪಿ-ಆರ್​ಎಸ್​ಎಸ್​ ಸಿದ್ಧಾಂತದ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ವಿರೋಧ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು ಆದರೆ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಿದ್ಧಾಂತದ ವಿರುದ್ಧ ಒಗ್ಗಟ್ಟಾಗಿರುತ್ತಾರೆ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪ್ರತಿಪಕ್ಷಗಳ ಏಕತೆಯು ಸಂವಾದ ಮತ್ತು ದೂರದೃಷ್ಟಿಯಿಂದ ಬರುತ್ತದೆ ಎಂದು ಹೇಳಿದರು.

ಸಂವಾದ ಹಾಗೂ ದೂರದೃಷ್ಟಿಯಿಂದ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಬರುತ್ತದೆ, ಪ್ರತಿಪಕ್ಷಗಳು ಇಬ್ಭಾಗವಾಗಿದೆ ಎಂದು ಹೇಳುವುದು ಸರಿಯಲ್ಲ, ಪ್ರತಿಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿರುವುದು ನಿಜ, ಆದರೆ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಡುತ್ತವೆ. ಸೈದ್ಧಾಂತಿಕ ಹೋರಾಟವಾಗಿರುವುದರಿಂದ ಒಟ್ಟಾಗಿ ನಿಲ್ಲುತ್ತವೆ ಒಂದು ಕಡೆ ಬಿಜೆಪಿ ಮತ್ತು ಆರ್​ಎಸ್​ಎಸ್​ ಇನ್ನೊಂದು ಕಡೆ ಆರ್​ಎಸ್​ಎಸ್​ ಬಿಜೆಪಿಯೇತರ ಶಕ್ತಿಗಳಿವೆ ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಈ ದೇಶದ ಸಾಂಸ್ಥಿಕ ರಚನೆಯ ಮೇಲೆ ದಾಳಿ ಮಾಡುತ್ತಿವೆ. ಅದು ಸಂಸತ್ತು, ವಿಧಾನಸಭೆ, ನ್ಯಾಯಾಂಗ ಅಥವಾ ಮಾಧ್ಯಮವಾಗಿರಬಹುದು. ಎಲ್ಲಾ ಸಂಸ್ಥೆಗಳ ಮೇಲೆ ಬಿಜೆಪಿ ದಾಳಿ ಮತ್ತು ವಶಪಡಿಸಿಕೊಳ್ಳುತ್ತಿದೆ. ನೀವು ದೇಶದ ವಿವಿಧ ಭಾಗಗಳಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನೋಡಿದಂತೆ ಸಾಂಸ್ಥಿಕ ರಚನೆಯ ಮೇಲಿನ ದಾಳಿಯ ಪರಿಣಾಮವಾಗಿದೆ.

ಮತ್ತಷ್ಟು ಓದಿ: ಭಾರತ್ ಜೋಡೋ ಯಾತ್ರೆ ಬಳಿಕ ಸಿದ್ದು-ಡಿಕೆಶಿ ಜಂಟಿ ಯಾತ್ರೆ; ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಈ ಯಾತ್ರೆ ಈ ದೇಶದ ರಾಜಕೀಯದ ಮೇಲೆ ಅಗಾಧ ಪರಿಣಾಮ ಬೀರಲಿದೆ ಎಂದರು. ಕೆಲವು ಪಕ್ಷದ ನಾಯಕರು ರ್ಯಾಲಿಯಲ್ಲಿ ಹಾಜರಾಗಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಕೆಲವರು ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಾರೆ.

ಎನ್‌ಸಿ, ಪಿಡಿಪಿ, ಸಿಪಿಐ, ಸಿಪಿಐ(ಎಂ), ಶಿವಸೇನೆ ಮತ್ತು ಡಿಎಂಕೆಯಂತಹ ಪಕ್ಷಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದ್ದರೂ, ಎಸ್‌ಪಿ, ಬಿಎಸ್‌ಪಿ ಮತ್ತು ಟಿಎಂಸಿಯಂತಹ ಪಕ್ಷಗಳ ಭಾಗವಹಿಸುವಿಕೆಯ ಬಗ್ಗೆ ಅನಿಶ್ಚಿತತೆ ಇದೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ