Coronavirus Cases in India: ಸಾವಿನ ಸಂಖ್ಯೆ ಇಳಿಮುಖ, 2.76 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ

|

Updated on: May 20, 2021 | 10:49 AM

Covid 19 India: ಎರಡನೇ ಅಲೆಯಲ್ಲಿ ಸತತ 3,00,000 ಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾದ ನಂತರ ಇದೀಗ ದೈನಂದಿನ ಕೊವಿಡ್​ -19 ಪ್ರಕರಣಗಳಲ್ಲಿ ಇಳಿಮುಖವಾಗಿದೆ. ಕಳೆದ 24ಗಂಟೆಗಳಲ್ಲಿ 3,874 ಜನರು ಕೊವಿಡ್​ನಿಂದ ಮೃತಪಟ್ಟಿದ್ದು ಏಕದಿನ ಸಾವಿನ ಸಂಖ್ಯೆ ಕಡಿಮೆಯಾಗಿದೆ.

Coronavirus Cases in India: ಸಾವಿನ ಸಂಖ್ಯೆ ಇಳಿಮುಖ, 2.76 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತವು 24 ಗಂಟೆಗಳ ಅವಧಿಯಲ್ಲಿ 2,76,110 ಹೊಸ ಕೊವಿಡ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ. ಇದೀಗ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,772,440 ಆಗಿದೆ. ಎರಡನೇ ಅಲೆಯಲ್ಲಿ ಸತತ 3,00,000 ಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾದ ನಂತರ ಇದೀಗ ದೈನಂದಿನ ಕೊವಿಡ್​ -19 ಪ್ರಕರಣಗಳಲ್ಲಿ ಇಳಿಮುಖವಾಗಿದೆ.ಕಳೆದ 24ಗಂಟೆಗಳಲ್ಲಿ 3,874 ಜನರು ಕೊವಿಡ್​ನಿಂದ ಮೃತಪಟ್ಟಿದ್ದು ಏಕದಿನ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಬುಧವಾರ ಕೊವಿಡ್ -19 ನಿಂದ 4,529 ಜನರು ಸಾವಿಗೀಡಾಗಿದ್ದು ಅತಿ ಹೆಚ್ಚು ಏಕದಿನ ಸಾವು ದಾಖಲಾದ ದಿನವಾಗಿತ್ತು.

ಕೊವಿಡ್ -19 ಪ್ರಕರಣಗಳ ದೈನಂದಿನ ಸಂಖ್ಯೆ ಸ್ಥಿರವಾಗಿ ಕುಸಿಯುತ್ತಿರುವಾಗ, ಆರೋಗ್ಯ ಅಧಿಕಾರಿಗಳು ಇನ್ನೂ ಸಂಬಂಧಿತ ಸಾವು ನೋವುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.ಸಾರ್ವಜನಿಕ ಆರೋಗ್ಯ ತಜ್ಞ ಡಾ.ವಿ.ಕೆ.ಮೊಂಗಾ ಅವರು ದೈನಂದಿನ ಪ್ರಕರಣಗಳ ಸಂಖ್ಯೆಗೆ ಒಂದು ಹಂತಕ್ಕೆ ಏರಿಕೆಯಾಗುವುದು ನಿಲ್ಲುವ ಮುನ್ನ ಕನಿಷ್ಠ ಮುಂದಿನ ಒಂದು ವಾರ ಏರಿಕೆಯಾಗುತ್ತಲೇ ಇರಬಹುದು ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿಮಾಡಿದೆ.

ದೀರ್ಘಕಾಲದ ಆಸ್ಪತ್ರೆಯಲ್ಲಿನ ಚಿಕಿತ್ಸೆ ಮತ್ತು ಕೊವಿಡ್ -19 ಸಮಸ್ಯೆಗಳೇ ಸಾವು ಪ್ರಕರಣಕ್ಕೆ ಸಾವುಗಳ ಉಲ್ಬಣಕ್ಕೆ ಕಾರಣವೆಂದು ಡಾ. ಮೊಂಗಾ ಹೇಳಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ರೋಗಿಗಳನ್ನು ಐಸಿಯುನಲ್ಲಿ ದಾಖಲಿಸಲಾಗಿದೆ. ಕೊವಿಡ್ -19 ನಿಂದ ಉಂಟಾದ ಸಮಸ್ಯೆಗಳು ಮತ್ತು ಆಸ್ಪತ್ರೆಗಳಲ್ಲಿ ದೀರ್ಘಕಾಲ ಉಳಿಯುವುದರಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತದೆ ಎಂದು ಡಾ ಮೊಂಗಾ ಹೇಳಿದ್ದಾರೆ.


ಕೇಂದ್ರ ಆರೋಗ್ಯ ಸಚಿವಾಲಯವು  ಶೇಕಡಾ 74.46 ರಷ್ಟು ದೈನಂದಿನ ಕೊವಿಡ್ ಪ್ರಕರಣ ದಾಖಲಾಗುವ10 ರಾಜ್ಯಗಳನ್ನು ಪಟ್ಟಿಮಾಡಿದೆ. ಸಚಿವಾಲಯದ ಪ್ರಕಾರ, ಈ ರಾಜ್ಯಗಳು ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರ್ಯಾಣ.

ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ತಲಾ 34,000 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಕೇರಳ 32,000 ಕ್ಕೂ ಹೆಚ್ಚು ಪ್ರಕರಣಗಳಿವೆ. ದೇಶದಲ್ಲಿ ಸಕ್ರಿಯ  ಪ್ರಕರಣಗಳು 96,000 ಕ್ಕಿಂತಲೂ ಕಡಿಮೆಯಾಗಿದ್ದು, 31.29 ಲಕ್ಷಕ್ಕೆ ಇಳಿದಿದೆ.

ದೇಶದಲ್ಲಿ ನೀಡಲಾಗುವ ಕೊವಿಡ್ -19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ 18.58 ಕೋಟಿ ತಲುಪಿದೆ. ಆರೋಗ್ಯ ಸಚಿವರ ತಾತ್ಕಾಲಿಕ ವರದಿಯ ಪ್ರಕಾರ 27,10,934 ಸೆಷನ್‌ಗಳ ಮೂಲಕ ಒಟ್ಟು 18,58,09,302 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.

ಏತನ್ಮಧ್ಯೆ, ಕೋವಿಡ್ -19 ಗಾಗಿ ಮೊದಲ ಮನೆಯಲ್ಲಿಯೇ ಪರೀಕ್ಷೆ ಮಾಡುವುದಕ್ಕೆ ಕೇಂದ್ರವು ಬುಧವಾರ ಅನುಮತಿಸಿದೆ. ಇದಕ್ಕಾಗಿ ಜನರು ₹ 250 ವೆಚ್ಚದ ಕಿಟ್ ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದು ಇದು 15 ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀಡುತ್ತಾರೆ. ಕಿಟ್ ಅನ್ನು ಪುಣೆ ಮೂಲದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಲಿಮಿಟೆಡ್ ತಯಾರಿಸಿದೆ ಮತ್ತು ಇದು ಕ್ಷಿಪ್ರ ಆಂಟಿಜೆನ್ ಪರೀಕ್ಷೆ (RAT) ಆಗಿದೆ.


ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾರ್ಗಸೂಚಿಗಳ ಪ್ರಕಾರ, ಕಿಟ್ ಅನ್ನು ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿರುವ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವವರು ಮಾತ್ರ ಬಳಸಬೇಕು. ಕಳೆದ 24 ಗಂಟೆಗಳಲ್ಲಿ 20.55 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಸೋಂಕಿಗೆ ಪರೀಕ್ಷಿಸಲಾಗಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 961 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 65 ಸಾವುಗಳು
ವರದಿ ಮಾಡಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 8,648 ಕ್ಕೆ ತಲುಪಿದೆ. ಈ  ಜಿಲ್ಲೆಯಲ್ಲಿ ಕೊವಿಡ್ -19 ಮರಣ ಪ್ರಮಾಣ ಶೇಕಡಾ 1.71 ಆಗಿದೆ ಎಂದು ಅವರು ಹೇಳಿದರು. ಚೇತರಿಸಿಕೊಂಡ ಮತ್ತು ಚಿಕಿತ್ಸೆ ಪಡೆಯದ ರೋಗಿಗಳ ವಿವರಗಳನ್ನು ಜಿಲ್ಲಾಡಳಿತ ಒದಗಿಸಿಲ್ಲ. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ, ಕೊವಿಡ್ -19 ಪ್ರಕರಣಗಳ ಸಂಖ್ಯೆ 1,05,182 ಕ್ಕೆ ಏರಿದ್ದು, ಸಾವಿನ ಸಂಖ್ಯೆ 1,924 ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು  ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇದೆಯೇ ಒಮ್ಮೆ ಗಮನಿಸಿ

ಮಲೇರಿಯಾ ವಿರುದ್ಧ ಭಾರತದ ಪ್ರಬಲ ಹೋರಾಟ; ಸಾವಿನ ಸಂಖ್ಯೆ ಇಳಿಮುಖ

(India recorded 2,76,110 new Covid-19 cases fatalities below 4,000 in a 24-hour span)

Published On - 10:33 am, Thu, 20 May 21