AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus cases in India: ದೇಶದಲ್ಲಿ 41,157 ಹೊಸ ಕೊವಿಡ್ ಪ್ರಕರಣ ಪತ್ತೆ, 518 ಸಾವು

Covid 19: ಭಾರತದಲ್ಲಿ ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ಮತ್ತಷ್ಟು ಕುಸಿದಿದ್ದು 422,660 ಕ್ಕೆ ತಲುಪಿದೆ. ಕಳೆದ ವರ್ಷ ಏಕಾಏಕಿ ಪ್ರಾರಂಭವಾದಾಗಿನಿಂದ ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ 1.36 ನಷ್ಟಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ರೋಗಿಗಳನ್ನು ಸೂಚಿಸುವ ಸಕ್ರಿಯ ಕೊವಿಡ್ -19 ಪ್ರಕರಣಗಳು 24 ಗಂಟೆಗಳ ಅವಧಿಯಲ್ಲಿ 1,365 ರಷ್ಟು ಕಡಿಮೆಯಾಗಿದೆ.

Coronavirus cases in India: ದೇಶದಲ್ಲಿ 41,157 ಹೊಸ ಕೊವಿಡ್ ಪ್ರಕರಣ ಪತ್ತೆ, 518 ಸಾವು
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 18, 2021 | 10:39 AM

Share

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 41,157 ಹೊಸ ಕೊವಿಡ್ -19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು 4.22 ಲಕ್ಷಕ್ಕೆ ಇಳಿದಿವೆ. ಕೇರಳವು ಒಂದೂವರೆ ತಿಂಗಳಲ್ಲಿ ಅತಿ ಹೆಚ್ಚು ಹೊಸ ಕೊವಿಡ್ ಪ್ರಕರಣಗಳನ್ನು 16,148 ದಾಖಲಿಸಿದೆ. ದೇಶದಲ್ಲಿ 518 ಹೊಸ ಸಾವು ವರದಿ ಆಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು,ಕೇರಳ ನಂತರದ ಸ್ಥಾನದಲ್ಲಿದೆ. ಭಾರತದ ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದು, ಗೇಮ್ಸ್ ವಿಲೇಜ್‌ನಲ್ಲಿ ಮೊದಲ ಕೊವಿಡ್ -19 ಪ್ರಕರಣ ಶನಿವಾರ ಪತ್ತೆಯಾಗಿದೆ.

ಕೊವಿಡ್-ಸೂಕ್ತವಾದ ನಡವಳಿಕೆಯ ಬಗ್ಗೆ ವ್ಯಾಪಕ ಸಾರ್ವಜನಿಕ ನಿರ್ಲಕ್ಷ್ಯದ ಮಧ್ಯೆ, ಭಾರತದ ಜನರು ಇನ್ನೂ ಹರ್ಡ್ ಇಮ್ಯುನಿಟಿ ಪಡೆಯದ ಕಾರಣ ಮೂರನೇ ತರಂಗದ ಸಾಧ್ಯತೆಯು ಖಚಿತವಾಗಿದೆ ಎಂದು ಭಾರತದ ಕೊರೊನಾವೈರಸ್ ಕಾರ್ಯಪಡೆಯ ಮುಖ್ಯಸ್ಥ ಡಾ. ವಿ.ಕೆ. ಪೌಲ್ ಎಚ್ಚರಿಸಿದ್ದಾರೆ. ಕೊವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮುಂದಿನ 100-125 ದಿನಗಳು ನಿರ್ಣಾಯಕವಾಗಲಿವೆ ಎಂದು ನೀತಿ ಆಯೋಗ ಸದಸ್ಯ (ಆರೋಗ್ಯ) ಹೇಳಿದ್ದಾರೆ. ಜನರು ಜಾಗರೂಕರಾಗಿರಬೇಕು ಎಂದಿದ್ದಾರೆ ಪೌಲ್.

ಭಾರತದಲ್ಲಿ ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ಮತ್ತಷ್ಟು ಕುಸಿದಿದ್ದು 422,660 ಕ್ಕೆ ತಲುಪಿದೆ. ಕಳೆದ ವರ್ಷ ಏಕಾಏಕಿ ಪ್ರಾರಂಭವಾದಾಗಿನಿಂದ ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ 1.36 ನಷ್ಟಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ರೋಗಿಗಳನ್ನು ಸೂಚಿಸುವ ಸಕ್ರಿಯ ಕೊವಿಡ್ -19 ಪ್ರಕರಣಗಳು 24 ಗಂಟೆಗಳ ಅವಧಿಯಲ್ಲಿ 1,365 ರಷ್ಟು ಕಡಿಮೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 42,004 ಜನರು ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದು, ದೇಶದ ಚೇತರಿಕೆಯ ಪ್ರಮಾಣ ಶೇ 97.31% ಆಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಶನಿವಾರ 19,36,709 ಪರೀಕ್ಷೆಗಳನ್ನು ನಡೆಸಲಾಗಿದ್ದು, ದೇಶದಲ್ಲಿ ಕೊವಿಡ್ ಪತ್ತೆಗಾಗಿ ನಡೆಸಿದ ಒಟ್ಟು 44,39,58,663 ಮಾದರಿ ಪರೀಕ್ಷಿಸಲಾಗಿದೆ.

ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 30269796 ಕ್ಕೆ ಏರಿದರೆ, ಪ್ರಕರಣದ ಸಾವಿನ ಪ್ರಮಾಣ ಶೇಕಡಾ 1.33 ಕ್ಕೆ ಏರಿದೆ ಎಂದು ಡೇಟಾ ತಿಳಿಸಿದೆ. ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ 40.49 ಕೋಟಿ ಲಸಿಕೆ ವಿತರಣೆ ಆಗಿದೆ.

ದೈನಂದಿನ ಸಕಾರಾತ್ಮಕ ದರವು ಶೇಕಡಾ 2.13 ರಷ್ಟಿದೆ ಮತ್ತು ಸಾಪ್ತಾಹಿಕ ಸಕಾರಾತ್ಮಕ ದರವು ಶೇಕಡಾ 2.08 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದ ಕೊವಿಡ್ ಮೊತ್ತವು ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಕಳೆದ ವರ್ಷ ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ. ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ದಾಟಿದೆ ಮತ್ತು ಕಳೆದ ವರ್ಷ ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ. ಮೇ 4ರಂದು 2ಕೋಟಿ ಮತ್ತು ಜೂನ್ 23ರಂದು 3 ಕೋಟಿ ದಾಟಿದೆ. 518 ಹೊಸ ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ 124 ಮತ್ತು ಕೇರಳದಿಂದ 114 ಸಾವುಗಳು ಸೇರಿವೆ ಎಂದು ಸಚಿವಾಲಯ ತಿಳಿಸಿದೆ.

ಒಟ್ಟಾರೆಯಾಗಿ, ದೇಶದಲ್ಲಿ 413609 ಸಾವುಗಳು ಸಂಭವಿಸಿವೆ, ಇದರಲ್ಲಿ ಮಹಾರಾಷ್ಟ್ರದಿಂದ 126851, ಕರ್ನಾಟಕದಿಂದ 36121, ತಮಿಳುನಾಡಿನಿಂದ 33695, ದೆಹಲಿಯಿಂದ 25027, ಉತ್ತರಪ್ರದೇಶದಿಂದ 22715, ಪಶ್ಚಿಮ ಬಂಗಾಳದಿಂದ 17988 ಮತ್ತು ಪಂಜಾಬ್‌ನಿಂದ 16224 ಸಾವುಗಳು ಸಂಭವಿಸಿವೆ. ಶೇಕಡಾ 70 ಕ್ಕೂ ಹೆಚ್ಚು ಸಾವುಗಳು ಕೊಮೊರ್ಬಿಡಿಟಿಗಳಿಂದಾಗಿ ಸಂಭವಿಸಿವೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Corona Vaccine: 40 ಕೋಟಿ ಡೋಸ್ ಸಮೀಪಿಸಿದ ಭಾರತದ ಕೊವಿಡ್19 ಲಸಿಕೆ ನೀಡಿಕೆ ಪ್ರಮಾಣ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!