Coronavirus Cases in India: ಭಾರತದಲ್ಲಿ ಒಂದೇ ದಿನ 1.32 ಲಕ್ಷ ಹೊಸ ಕೊವಿಡ್ ಪ್ರಕರಣ, 3207 ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Jun 02, 2021 | 10:43 AM

Covid 19: ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳು ಸ್ವಲ್ಪ ಸಮಯದವರೆಗೆ ತೀವ್ರ ಕುಸಿತ ಕಂಡಿದೆ. ಕಳೆದ ನಾಲ್ಕು ವಾರಗಳಲ್ಲಿ ಇದು ಕ್ರಮೇಣ ಇಳಿಮುಖವಾಗಿದ್ದು  ದೇಶದ ಕೆಲವು ಭಾಗಗಳಲ್ಲಿ ಹೇರಲಾಗಿರುವ ಲಾಕ್‌ಡೌನ್‌ ನಿರ್ಬಂಧಗಳು ಫಲ ನೀಡಿವೆ .

Coronavirus Cases in India: ಭಾರತದಲ್ಲಿ ಒಂದೇ ದಿನ 1.32 ಲಕ್ಷ ಹೊಸ ಕೊವಿಡ್ ಪ್ರಕರಣ, 3207 ಸಾವು
ಸಾಂಗ್ಲಿಯಲ್ಲಿರುವ ಆಸಪತ್ರೆಯೊಂದರ ಕೊವಿಡ್ ವಾರ್ಡ್ ನ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,32,788 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು 3,207 ಸಾವುಗಳು ವರದಿ ಆಗಿದೆ . 26,500 ಕ್ಕೂ ಹೆಚ್ಚು ಪ್ರಕರಣಗಳು ತಮಿಳುನಾಡಿನಲ್ಲಿ ದಾಖಲಾಗಿದೆ. ಸಕ್ರಿಯ ಪ್ರಕರಣಗಳು ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ ಸುಮಾರು 17.93 ಲಕ್ಷವಾಗಿದೆ.  45 ಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಕೇವಲ 32 ಪ್ರತಿಶತದಷ್ಟು ಜನರು ಮಾತ್ರ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

ಭಾರತದ ದೈನಂದಿನ ಕೊವಿಡ್ -19 ಪ್ರಕರಣಗಳು ಸ್ವಲ್ಪ ಸಮಯದವರೆಗೆ ತೀವ್ರ ಕುಸಿತ ಕಂಡಿದೆ. ಕಳೆದ ನಾಲ್ಕು ವಾರಗಳಲ್ಲಿ ಇದು ಕ್ರಮೇಣ ಇಳಿಮುಖವಾಗಿದ್ದು  ದೇಶದ ಕೆಲವು ಭಾಗಗಳಲ್ಲಿ ಹೇರಲಾಗಿರುವ ಲಾಕ್‌ಡೌನ್‌ ನಿರ್ಬಂಧಗಳು ಫಲ ನೀಡಿವೆ . ಮಂಗಳವಾರ ದೇಶದಲ್ಲಿ 1,27,510 ಕೊವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಸುಮಾರು ಎರಡು ತಿಂಗಳಲ್ಲಿ ಕಡಿಮೆ. 3,000 ಕ್ಕಿಂತ ಕಡಿಮೆ ಹೊಸ ಸಾವುಗಳು  2,795, ನಿಖರವಾಗಿ ಹೇಳಬೇಕೆಂದರೆ  ನಿನ್ನೆ 36 ದಿನಗಳಲ್ಲಿ ಮೊದಲ ಬಾರಿಗೆ ವರದಿಯಾಗಿದೆ.


ಭಾರತದಲ್ಲಿ ಸಕ್ರಿಯ ಕೊವಿಡ್ -19 ರೋಗಿಗಳ ಸಂಖ್ಯೆ ಪ್ರಸ್ತುತ 1,793,645 ರಷ್ಟಿದ್ದು, ನಿನ್ನೆ 1,895,520 ಸಕ್ರಿಯ ಪ್ರಕರಣಗಳಿಂದ ಗಮನಾರ್ಹ ಇಳಿಕೆ ಕಂಡುಬಂದಿದೆ. ಕೊವಿಡ್ -19 ರಿಂದ ದೇಶದಲ್ಲಿ ಮರಣ ಪ್ರಮಾಣ 1.18% ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಂಗಳವಾರದವರೆಗೆ ಒಟ್ಟು 350,057,330 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದ್ದು, ಅದರಲ್ಲಿ 2,019,773 ಪರೀಕ್ಷೆಗಳನ್ನು ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಲಾಗಿದೆ. ಒಟ್ಟು ಲಸಿಕೆ ಡೋಸ್ ಸಂಖ್ಯೆ 21.83 ಕೋಟಿ ದಾಟಿದೆ. ಕೇಂದ್ರ ಸರ್ಕಾರದ ಪ್ರಕಾರ, ಇಲ್ಲಿಯವರೆಗೆ ನೀಡಲಾದ 218,358,591 ಡೋಸ್ ಲಸಿಕೆಗಳಲ್ಲಿ, 173,239,527 ಮೊದಲ ಡೋಸ್ ಆಗಿದ್ದರೆ, ಉಳಿದ 45,119,064 ಲಸಿಕೆಗಳು ಎರಡನೆ ಡೋಸ್ ಆಗಿದೆ.

ಬೆಂಗಳೂರಿನಲ್ಲಿ ದಾಖಲಾಗಿದ್ದು 58 ದಿನಗಳಲ್ಲಿ ಅತಿ ಕಡಿಮೆ ಏಕದಿನ ಪ್ರಕರಣಗಳು
ಕರ್ನಾಟಕದಲ್ಲಿ ಮಂಗಳವಾರ 14,304 ಹೊಸ ಕೊವಿಡ್ -19 ಪ್ರಕರಣಗಳು ವರದಿಯಾಗಿದ್ದು, ಏಪ್ರಿಲ್ 14 ರಿಂದ ರಾಜ್ಯದಲ್ಲಿ 11,265 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 3,418 ಪ್ರಕರಣಗಳು ದಾಖಲಾಗಿದ್ದು, ಕಳೆದ 58 ದಿನಗಳಲ್ಲಿ ಇದು ಅತಿ ಕಡಿಮೆ ಆಗಿದೆ. ಏಪ್ರಿಲ್ 4 ರಂದು ರಾಜ್ಯ ರಾಜಧಾನಿಯಲ್ಲಿ 3,728 ಪ್ರಕರಣಗಳು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ 1.1 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದ್ದು, ರಾಜ್ಯದ ದೈನಂದಿನ ಸಕಾರಾತ್ಮಕತೆ ಪ್ರಮಾಣ 12.3% ರಷ್ಟಿದೆ. ಮಂಗಳವಾರ ಕೊವಿಡ್‌ನಿಂದ ಚೇತರಿಸಿಕೊಂಡ ಎಲ್ಲಾ 29,271 ಜನರಲ್ಲಿ ರಾಜ್ಯದ ಒಟ್ಟು ಚೇತರಿಕೆ 22.9 ಲಕ್ಷಕ್ಕೆ ತಲುಪಿದೆ. ಆದಾಗ್ಯೂ, ಸಾವಿನ ಸಂಖ್ಯೆ 400 ಕ್ಕಿಂತ ಹೆಚ್ಚು ಆಗಿದೆ.
ಮುಂಬೈನಲ್ಲಿ 831 ಹೊಸ ಪ್ರಕರಣಗಳು ಮತ್ತು 23 ಸಾವು
ಕಳೆದ 24 ಗಂಟೆಗಳಲ್ಲಿ ಮುಂಬೈ 831 ಹೊಸ ಪ್ರಕರಣಗಳು ಮತ್ತು 23 ಸಾವುಗಳನ್ನು ವರದಿ ಮಾಡಿದೆ. ಅದೇ ವೇಳೆ ಉತ್ತರ ಪ್ರದೇಶದಲ್ಲಿ 1,317 ಹೊಸ ಪ್ರಕರಣಗಳು ಮತ್ತು 179 ಸಾವುಗಳು ಸಂಭವಿಸಿವೆ. ಇಲ್ಲಿ ಸಾವಿನ ಸಂಖ್ಯೆ 20,672 ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು ಪ್ರಕರಣಗಳು 16,92,709 ಕ್ಕೆ ತಲುಪಿದ್ದು, ಮಂಗಳವಾರ 1,317 ಹೊಸ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ:  ದೇಶ ಮತ್ತು ರಾಜ್ಯದಲ್ಲಿ ಕೊವಿಡ್​ನಿಂದ ಅನಾಥರಾದ ಮಕ್ಕಳೆಷ್ಟು ಗೊತ್ತೆ? ಇಲ್ಲಿದೆ ಅಂಕಿ ಅಂಶ

(India records 3,207 deaths and 1.32 lakh new Coronavirus cases rise in single day infection)

Published On - 10:34 am, Wed, 2 June 21