Coronavirus cases in India: ದೇಶದಲ್ಲಿ 40,120 ಹೊಸ ಕೊವಿಡ್ ಪ್ರಕರಣ ಪತ್ತೆ, 585 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Aug 13, 2021 | 10:36 AM

Covid-19: ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕೊವಿಡ್ -19 ರ ಸಕ್ರಿಯ ಪ್ರಕರಣಗಳು ಅದೇ ಅವಧಿಯಲ್ಲಿ 38,5227 ಕ್ಕೆ ಇಳಿದಿದೆ. ಕೊರೊನಾವೈರಸ್ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 31,30,2345 ಕ್ಕೆ ಏರಿಕೆಯಾಗಿದೆ. ಆದರೆ ಪ್ರಕರಣದ ಸಾವಿನ ಪ್ರಮಾಣವು 1.34 ಶೇಕಡಾ ಇದೆ.

Coronavirus cases in India: ದೇಶದಲ್ಲಿ 40,120 ಹೊಸ ಕೊವಿಡ್ ಪ್ರಕರಣ ಪತ್ತೆ, 585 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 40,120 ಹೊಸ ಕೊವಿಡ್ -19 ಪ್ರಕರಣಗಳು ದಾಖಲಾಗಿದ್ದು ಒಟ್ಟು ಪ್ರಕರಣಗಳ ಸ ಸಂಖ್ಯೆಯನ್ನು 3.21 ಕೋಟಿಗೆ ತಲುಪಿದೆ. ಹೊಸ ಪ್ರಕರಣಗಳಲ್ಲಿ, ಸಕ್ರಿಯ ಪ್ರಕರಣಗಳು 3.85 ಲಕ್ಷಕ್ಕೆ ಇಳಿದಿದ್ದು, ಚೇತರಿಕೆ ಸಂಖ್ಯೆ 3.13 ಕೋಟಿಗೆ ಏರಿಕೆಯಾಗಿದೆ. 21,445 ಸೋಂಕುಗಳೊಂದಿಗೆ ಕೇರಳವು ಅಗ್ರಸ್ಥಾನದಲ್ಲಿದೆ. ದೇಶವು 585 ಸಾವುಗಳನ್ನು ದಾಖಲಿಸಿದ್ದು ಒಟ್ಟು ಸಂಖ್ಯೆ ಈಗ 4.3 ಲಕ್ಷವನ್ನು ಮೀರಿದೆ.

ಏತನ್ಮಧ್ಯೆ, ದೆಹಲಿಯಲ್ಲಿ ಗುರುವಾರ ಕೊವಿಡ್ -19 ನಿಂದ ಯಾವುದೇ ಸಾವು ದಾಖಲಾಗಿಲ್ಲ, ದೈನಂದಿನ ಸಾವಿನ ಸಂಖ್ಯೆ ಶೂನ್ಯವಾಗಿರುವ ಸತತ ಎರಡನೇ ದಿನ, 49 ಹೊಸ ಪ್ರಕರಣಗಳು ಶೇಕಡಾ 0.07 ರಷ್ಟು ಸಕಾರಾತ್ಮಕತೆಯೊಂದಿಗೆ ವರದಿಯಾಗಿವೆ ಎಂದು ದೆಹಲಿ ಆರೋಗ್ಯ ಇಲಾಖೆ ಹೇಳಿದೆ . ರಾಷ್ಟ್ರೀಯ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆ ಆರಂಭವಾದಾಗಿನಿಂದ ಇದು ಎಂಟು ಬಾರಿ, ಒಂದು ದಿನದಲ್ಲಿ ಶೂನ್ಯ ಸಾವು ದಾಖಲಾಗಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಮುಂಬೈಯಲ್ಲಿ ,ಡೆಲ್ಟಾ ಪ್ಲಸ್ ರೂಪಾಂತರಿಯಿಂದಾಗಿ 63 ವರ್ಷದ ಮಹಿಳೆ ಘಾಟ್‌ಕೋಪರ್‌ನಲ್ಲಿ ಜುಲೈನಲ್ಲಿ ಬಲಿಯಾಗಿದ್ದಾರೆ. ಇದು ಡೆಲ್ಟಾ ಪ್ಲಸ್ ರೂಪಾಂತರದಿಂದಾಗಿ ಮಹಾರಾಷ್ಟ್ರದಲ್ಲಿ ವರದಿಯಾದ ಎರಡನೇ ಸಾವು. ಮೊದಲನೆಯದು ರತ್ನಗಿರಿಯ 80 ವರ್ಷದ ಮಹಿಳೆ, ಅವರು ಜೂನ್ 13 ರಂದು ಸಾವಿಗೀಡಾಗಿದ್ದರು. ಡೆಲ್ಟಾ ಪ್ಲಸ್ ಎನ್ನುವುದು ಸಾರ್ಸ್- CoV-2 (B.1.617.2) ನ ಹೆಚ್ಚು ಹರಡುವ ಡೆಲ್ಟಾ ರೂಪಾಂತರದ ರೂಪಾಂತರವಾಗಿದೆ.

ಶುಕ್ರವಾರ ಬೆಳಗ್ಗೆ  8 ಗಂಟೆಗೆ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕೊವಿಡ್ -19 ರ ಸಕ್ರಿಯ ಪ್ರಕರಣಗಳು ಅದೇ ಅವಧಿಯಲ್ಲಿ 38,5227 ಕ್ಕೆ ಇಳಿದಿದೆ. ಕೊರೊನಾವೈರಸ್ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 31,30,2345 ಕ್ಕೆ ಏರಿಕೆಯಾಗಿದೆ. ಆದರೆ ಪ್ರಕರಣದ ಸಾವಿನ ಪ್ರಮಾಣವು 1.34 ಶೇಕಡಾ ಇದೆ. ರಾಷ್ಟ್ರೀಯ ಕೋವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.45 ಕ್ಕೆ ತಲುಪಿದೆ.


ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ 19,70,495 ಕೊವಿಡ್ -19 ಪರೀಕ್ಷೆಗಳನ್ನು ಗುರುವಾರ ನಡೆಸಲಾಗಿದ್ದು ಒಟ್ಟು ಪರೀಕ್ಷೆಗಳ ಸಂಖ್ಯೆ 48,94,70,779 ಕ್ಕೆ ತಲುಪಿದೆ. ದೇಶದಲ್ಲಿ ನೀಡಲಾದ ಒಟ್ಟು ಕೊವಿಡ್ -19 ಲಸಿಕೆ ಪ್ರಮಾಣಗಳು 52.89 ಕೋಟಿ ಮೀರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.


54.04 ಕೋಟಿಗಿಂತಲೂ ಹೆಚ್ಚು ಕೊವಿಡ್ -19 ಲಸಿಕೆ ಡೋಸ್‌ಗಳನ್ನು ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ ಮತ್ತು 1,09,83,510 ಹೆಚ್ಚುವರಿ ಡೋಸ್‌ಗಳು ಇನ್ನು ತಲುಪಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಇದನ್ನೂ ಓದಿ:  ಚೆನ್ನೈನ ಕಿಲ್ಪಾಕ್​​ ಸಮೀಪದ ದೇವಾಲಯದ ಉತ್ಸವದಲ್ಲಿ ಭಾಗಿಯಾದ 20 ಮಂದಿಗೆ ಕೊವಿಡ್, ಮಹಿಳೆ ಸಾವು

ಇದನ್ನೂ ಓದಿ:  ಈ ಬಾರಿಯದ್ದು 74ನೇ ಸ್ವಾತಂತ್ರ್ಯೋತ್ಸವವೋ? 75ನೇಯದ್ದೋ?- ಶುರುವಾಗಿದೆ ಹೀಗೊಂದು ಗೊಂದಲ..!

(India records 40120 new covid-19 infections 585 deaths in last 24 hours as per union health ministry)