Coronavirus in India: ದೇಶದಲ್ಲಿ ಕೊವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ; 24 ಗಂಟೆಗಳಲ್ಲಿ 351 ಸಾವು

|

Updated on: Mar 31, 2021 | 11:31 AM

Covid 19: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಕೆಲವು ರಾಜ್ಯಗಳಲ್ಲಿ ಇದು ಕೆಟ್ಟ ಪರಿಸ್ಥಿತಿಯಿಂದ ಅತೀ ಕೆಟ್ಟ ಪರಿಸ್ಥಿತಿಗೆ ಇದು ತಲುಪಲಿದೆ. ಇಡೀ ದೇಶವು ಅಪಾಯದಲ್ಲಿದೆ ಮತ್ತು ಈ ಹಂತದಲ್ಲಿ ಅಪಾರ ನಷ್ಟ ಭರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ  ಹೇಳಿದೆ.

Coronavirus in India: ದೇಶದಲ್ಲಿ ಕೊವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ; 24 ಗಂಟೆಗಳಲ್ಲಿ 351 ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 53,480 ಹೊಸ ಕೊವಿಡ್ -19 ಪ್ರಕರಣಗಳು ದಾಖಲಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 1.21 ಕೋಟಿ ( 1,21,49,335) ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 11,846 ಏರಿಕೆ ಆಗಿದ್ದು, ಪ್ರಕರಣಗಳ ಸಂಖ್ಯೆ 5,52,566ಕ್ಕೆ ತಲುಪಿದೆ. ಒಂದೇ ದಿನ ಕೊವಿಡ್​ನಿಂದ 354 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 1,62,468ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 41,280 ರೋಗಿಗಳು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಸಚಿವಾಲಯದ ಅಂಕಿ ಅಂಶಗಳು ಹೇಳಿದೆ.

ಮಂಗಳವಾರ 354 ಮಂದಿ ಮೃತಪಟ್ಟಿದ್ದು 2020 ಡಿಸೆಂಬರ್ 16ರ ನಂತರ ಅತೀ ಹೆಚ್ಚು ಸಾವು ಸಂಭವಿಸಿದ ದಿನವಾಗಿದೆ ಇದು. ಸಾವಿಗೀಡಾದವರ ಪೈಕಿ 140 ಮಂದಿ ಮಹಾರಾಷ್ಟ್ರದವರಾಗಿದ್ದಾರೆ. ಕರ್ನಾಟಕದಲ್ಲಿ 21 ಮಂದಿ ಸಾವಿಗೀಡಾಗಿದ್ದು ಡಿಸೆಂಬರ್ 9ರ ನಂತರ ಅತೀ ಹೆಚ್ಚು ಸಾವು ವರದಿಯಾಗಿದೆ. ಇನ್ನುಳಿದಂತೆ ಪಂಜಾಬ್​ನಲ್ಲಿ 64, ಛತ್ತೀಸ್​ಗಢದಲ್ಲಿ- 35, ತಮಿಳುನಾಡಿನಲ್ಲಿ -16, ಮಧ್ಯಪ್ರದೇಶದಲ್ಲಿ -10, ಉತ್ತರ ಪ್ರದೇಶದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ 27,918 ಸೋಂಕಿತರು ಪತ್ತೆಯಾಗಿದ್ದಾರೆ. ತೆಲಂಗಾಣದಲ್ಲಿ 684 ಹೊಸ ಕೊರೊನಾ ಸೋಂಕು ಪ್ರಕರಣ ವರದಿ ಆಗಿದ್ದು 394 ಮಂದಿ ಚೇತರಿಸಿಕೊಂಡಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಮಿಜೋರಾಂನಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 4,473ಕ್ಕೇರಿದೆ.

ಕೇರಳದಲ್ಲಿ 2,389 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಪ್ರಮಾಣ ಶೇಕಡಾ 4.08 ಆಗಿದೆ. ತಮಿಳುನಾಡಿನಲ್ಲಿ 2,342 ಹೊಸ ಪ್ರಕರಣ ಪತ್ತೆಯಾಗಿದ್ದು, 16 ಮಂದಿ ಸಾವಿಗೀಡಾಗಿದ್ದಾರೆ.


ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಕೆಲವು ರಾಜ್ಯಗಳಲ್ಲಿ ಇದು ಕೆಟ್ಟ ಪರಿಸ್ಥಿತಿಯಿಂದ ಅತೀ ಕೆಟ್ಟ ಪರಿಸ್ಥಿತಿಗೆ ಇದು ತಲುಪಲಿದೆ. ಇಡೀ ದೇಶವು ಅಪಾಯದಲ್ಲಿದೆ ಮತ್ತು ಈ ಹಂತದಲ್ಲಿ ಅಪಾರ ನಷ್ಟ ಭರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ  ಹೇಳಿದೆ.

ಕೊವಿಡ್ 19 ಪರಿಸ್ಥಿತಿಯು ಕೆಟ್ಟದರಿಂದ ಅತೀ ಕೆಟ್ಟ ಸ್ಥಿತಿಗೆ ತಲುಪಿದೆ. ಕಳೆದ ಕೆಲವು ವಾರಗಳಲ್ಲಿ ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ಚಿಂತಾಜನಕ ಸ್ಥಿತಿ ಉಂಟಾಗಿದೆ. ದೇಶದ ಯಾವುದೇ ಭಾಗ ಅಥವಾ ರಾಜ್ಯ ಇದರಿಂದ ಹೊರತಾಗಿಲ್ಲ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ.ಪೌಲ್ ಹೇಳಿದ್ದಾರೆ. ಆಸ್ಪತ್ರೆಗಳು ಮತ್ತು ಐಸಿಯುಗಳನ್ನು ಸಿದ್ಧವಾಗಿರಿಸಬೇಕು. ಪ್ರಕರಣಗಳ ಸಂಖ್ಯೆ ದಿಢೀರ್ ಆಗಿ ಏರಿಕೆಯಾದರೆ ಆರೋಗ್ಯ ವ್ಯವಸ್ಥೆಯ ಮೇಲೆ ಹೊರೆ ಬೀಳುತ್ತದೆ ಎಂದು ಪೌಲ್ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪೌಲ್ ಜತೆ ಉಪಸ್ಥಿತರಿದ್ದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ , ಅತೀ ಹೆಚ್ಚು ಕೊವಿಡ್ ರೋಗಿಗಳು ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿದ್ದಾರೆ ಎಂದಿದ್ದಾರೆ. ಅತೀ ಹೆಚ್ಚು ಕೊವಿಡ್ ರೋಗಿಗಳಿರುವ 10 ಜಿಲ್ಲೆಗಳು- ಪುಣೆ (59,475), ಮುಂಬೈ (46,248),ನಾಗ್ಪುರ್ (45,322), ಥಾಣೆ (35,264), ನಾಶಿಕ್ (26,553), ಔರಂಗಾಬಾದ್ (21,282), ಬೆಂಗಳೂರು ನಗರ (16,259), ನಂದೇಡ್(15,171), ದೆಹಲಿ (8,032) ಮತ್ತು ಅಹಮದ್​ನ​ಗರ್ (7,952).

ಕೊರೊನಾ ನಿಯಂತ್ರಣಕ್ಕೆ ತರಲು ತಪಾಸಣೆ, ನಿಗಾ ಮತ್ತು ಚಿಕಿತ್ಸೆ ( test, track and treat) ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಭೂಷಣ್ ಹೇಳಿದ್ದಾರೆ. ಕೊವಿಡ್ ಸಕ್ರಿಯ ಪ್ರಕರಣಗಳು ಕಳೆದ 20ದಿನಗಳಿಂದ ಏರಿಕೆಯಾಗುತ್ತಲೇ ಇದ್ದು ಒಟ್ಟು ಸೋಂಕಿತ ಪ್ರಕರಣಗಳ ಪೈಕಿ ಶೇ4.47 ಸಕ್ರಿಯ ಪ್ರಕರಣಗಳಿವೆ. ಅದೇ ವೇಳೆ ಚೇತರಿಕೆ ಪ್ರಮಾಣವು 94.19ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಅಹಮದಾಹಾದ್, ವಡೋದರಾ, ಸೂರತ್,ರಾಜ್ ಕೋಟ್​ನಲ್ಲಿ ರಾತ್ರಿ ಕರ್ಫ್ಯೂ

ಅಹಮದಾಹಾದ್, ವಡೋದರಾ, ಸೂರತ್,ರಾಜ್ ಕೋಟ್​ನಲ್ಲಿ ಏಪ್ರಿಲ್ 15ರ ವರೆಗೆ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ ಎಂದು ಗುಜರಾತ್ ಗೃಹ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.  ಈ ಮೆಟ್ರೊನಗರಗಳಲ್ಲಿ ರಾತ್ರಿ 9ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ  ಕರ್ಫ್ಯೂ ಇರಲಿದೆ.

ಇದನ್ನೂ ಓದಿ :  Corona Cases Updates: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 68,020 ಕೊರೊನಾ ಸೋಂಕಿತರು ಪತ್ತೆ; 2020 ಅಕ್ಟೋಬರ್ ನಂತರ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣ

Published On - 11:26 am, Wed, 31 March 21