ಪ್ರತಿವರ್ಷವೂ ಆರ್ಬಿಐ ದೇಶದ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ಗಳ ರಜಾದಿನದ ಕ್ಯಾಲೆಂಡರ್ನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಹೊಸ ಹಣಕಾಸು ವರ್ಷವಾದ ಏಪ್ರಿಲ್ನಲ್ಲಿ ಒಟ್ಟಾರೆ 15 ದಿನ ಬ್ಯಾಂಕ್ಗಳಿಗೆ ರಜಾ ಇರಲಿದೆ. ಈ ತಿಂಗಳಲ್ಲಿ ರಾಮನವಮಿ, ಗುಡ್ ಫ್ರೈಡೇ, ಬಿಹು ಹಬ್ಬ, ಅಂಬೇಡ್ಕರ್ ಜಯಂತಿ ಸೇರಿ ಹಲವು ಹಬ್ಬ-ಆಚರಣೆಗಳು ಇರುವುದರಿಂದ ದೇಶಾದ್ಯಂತ ರಜೆ ತುಸು ಜಾಸ್ತಿಯೇ ಇದೆ. ಇನ್ನು ಇದರೊಂದಿಗೆ ಎರಡನೇ, ನಾಲ್ಕನೇ ಶನಿವಾರ, ಭಾನುವಾರಗಳೂ ಸೇರಿಕೊಂಡಿವೆ.
ಏಪ್ರಿಲ್ನಲ್ಲಿ ಒಟ್ಟು 15ದಿನ ರಜಾ ಇದ್ದರೂ, ಎಲ್ಲ ರಾಜ್ಯಗಳಲ್ಲೂ ಇದು ಅನ್ವಯ ಆಗುವುದಿಲ್ಲ. ನಾಳೆ ಏಪ್ರಿಲ್ 1ರಂದು ಹಣಕಾಸು ವರ್ಷದ ಪ್ರಾರಂಭವಾಗಿದ್ದು ದೇಶಾದ್ಯಂತ ಎಲ್ಲ ಬ್ಯಾಂಕ್ಗಳಿಗೂ ರಜಾ. ಹಾಗೇ ಏಪ್ರಿಲ್ 2 ಗುಡ್ಫ್ರೈಡೇ ನಿಮಿತ್ತ ಯಾವ ಬ್ಯಾಂಕ್ಗಳೂ ಕಾರ್ಯ ನಿರ್ವಹಿಸುವುದಿಲ್ಲ. ಅದಾದ ಬಳಿಕ ಆಸ್ಸಾಂನಲ್ಲಿ ಏಪ್ರಿಲ್ 14ರಿಂದ 16ರವರೆಗೆ ಅವರ ಬಿಹು ಹಬ್ಬದ ನಿಮಿತ್ತ ಬ್ಯಾಂಕ್ಗಳಿಗೆ ರಜಾ ಇದ್ದು, ಉಳಿದ ರಾಜ್ಯಗಳಿಗೆ ಇದು ಅನ್ವಯ ಆಗುವುದಿಲ್ಲ.
ಇನ್ನು ಗ್ರಾಹಕರ ಅನುಕೂಲಕ್ಕಾಗಿ ನಾವಿಲ್ಲಿ ಏಪ್ರಿಲ್ ತಿಂಗಳಲ್ಲಿ ಯಾವ್ಯಾವಾಗ ರಜಾ ಎಂಬ ಪಟ್ಟಿಯನ್ನು ನೀಡಿದ್ದೇವೆ. ಒಮ್ಮೆ ನೋಡಿಕೊಳ್ಳಿ:
ಇದನ್ನೂ ಓದಿ: ಸಿಎಂ ನಿವಾಸ ಕಾವೇರಿ ಬಳಿ ಅಪಘಾತ; ಮಹಿಳಾ ಸಬ್ಇನ್ಸ್ಪೆಕ್ಟರ್ಗೆ ಡಿಕ್ಕಿ ಹೊಡೆದ ಕಾರು
Rakshita Prem: ‘ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ’: ರಕ್ಷಿತಾ ಜನ್ಮದಿನಕ್ಕೆ ದರ್ಶನ್ ವಿಶೇಷ ಮಾತು!
Published On - 11:53 am, Wed, 31 March 21