Coronavirus Cases in India: ದೇಶದಲ್ಲಿ1.34 ಲಕ್ಷ ಹೊಸ ಕೊವಿಡ್ ಪ್ರಕರಣ, 2887 ರೋಗಿಗಳು ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Jun 03, 2021 | 11:06 AM

Covid 19: ಕಳೆದ 24 ಗಂಟೆಗಳಲ್ಲಿ 25,317 ಪ್ರಕರಣಗಳು ತಮಿಳುನಾಡಿನಲ್ಲಿ ವರದಿಯಾಗಿದ್ದು, ಇದರ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಕರ್ನಾಟಕದಲ್ಲಿ 19,661 ಹೊಸ ಸೋಂಕು ಪ್ರಕರಣ ವರದಿ ಆಗಿದೆ .

Coronavirus Cases in India: ದೇಶದಲ್ಲಿ1.34 ಲಕ್ಷ ಹೊಸ ಕೊವಿಡ್ ಪ್ರಕರಣ, 2887 ರೋಗಿಗಳು ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,34,154 ಹೊಸ ಕೊವಿಡ್ -19 ಪ್ರಕರಣಗಳು ಪತ್ತೆ ಆಗಿದ್ದು 2,887 ಸಾವುಗಳು ವರದಿ ಆಗಿದೆ. ತಮಿಳುನಾಡು ಅತೀ ಹೆಚ್ಚು ಸೋಂಕು ಪ್ರಕರಣ ವರದಿಯಾಗಿರುವ ರಾಜ್ಯವಾಗಿದೆ. ಕಳೆದ 24 ಗಂಟೆಗಳಲ್ಲಿ 25,317 ಪ್ರಕರಣಗಳು ತಮಿಳುನಾಡಿನಲ್ಲಿ ವರದಿಯಾಗಿದ್ದು, ಇದರ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಕರ್ನಾಟಕದಲ್ಲಿ 19,661 ಹೊಸ ಸೋಂಕು ಪ್ರಕರಣ ವರದಿ ಆಗಿದೆ. ಮಹಾರಾಷ್ಟ್ರದಲ್ಲಿ 15,169 ಪ್ರಕರಣಗಳು ವರದಿಯಾಗಿವೆ. ಕೇರಳ 19,760, ಮತ್ತು ಆಂಧ್ರಪ್ರದೇಶ 12,768 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 8,923 ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 17.13 ಲಕ್ಷಕ್ಕೆ ಇಳಿದಿವೆ.

ನಗರವಾರು ಲೆಕ್ಕಾಚಾರ ನೋಡಿದರೆ ಬೆಂಗಳೂರು ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡುವುದನ್ನು ಮುಂದುವರೆಸಿದೆ, ಕಳೆದ 24 ಗಂಟೆಗಳಲ್ಲಿ 4,095 ಹೊಸ ಸೋಂಕುಗಳು ದೃಢಪಟ್ಟಿದೆ. ಏತನ್ಮಧ್ಯೆ, ಚೆನ್ನೈನಲ್ಲಿ 2,217 ಹೊಸ ಪ್ರಕರಣಗಳು ವರದಿಯಾಗಿದ್ದು ಕೋಲ್ಕತ್ತಾದಲ್ಲಿ 1,040 ಪ್ರಕರಣಗಳು ದಾಖಲಾಗಿವೆ. ಮುಂಬೈ ಮತ್ತು ದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕ್ರಮವಾಗಿ 925 ಮತ್ತು 576 ಆಗಿದೆ.


ಥಾಣೆಯಲ್ಲಿ ಕೊವಿಡ್ ಪ್ರಕರಣ 568, ಸಾವಿನ ಸಂಖ್ಯೆ 44
568 ಹೊಸ ಪ್ರಕರಣಗಳೊಂದಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ 5,18,831 ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಬುಧವಾರ ವರದಿಯಾದ ಈ ಹೊಸ ಪ್ರಕರಣಗಳಲ್ಲದೆ 44 ಜನರು ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 9,332 ಕ್ಕೆ ತಲುಪಿದೆ. ಥಾಣೆಯಲ್ಲಿ ಕೊವಿಡ್ -19 ಮರಣ ಪ್ರಮಾಣವು ಶೇಕಡಾ 1.79 ಆಗಿದೆ . ಚೇತರಿಸಿಕೊಂಡ ಮತ್ತು ಚಿಕಿತ್ಸೆ ಪಡೆಯದ ರೋಗಿಗಳ ವಿವರಗಳನ್ನು ಜಿಲ್ಲಾಡಳಿತ ಒದಗಿಸಿಲ್ಲ. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ, ಕೊವಿಡ್ -19 ಪ್ರಕರಣಗಳ ಸಂಖ್ಯೆ 1,10,708 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 2,105 ಕ್ಕೆ ತಲುಪಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.


ದೆಹಲಿಯಲ್ಲಿ ಕೊವಿಡ್ ಆಸ್ಪತ್ರೆ ಸ್ಥಾಪಿಸಲು 20 ಕೆಜಿ ಚಿನ್ನ, ಬೆಳ್ಳಿ ದಾನ ಮಾಡಿದ ಎಂದು ಸಿಖ್ ಗುರುದ್ವಾರ
ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯು ರಾಷ್ಟ್ರ ರಾಜಧಾನಿಯಲ್ಲಿ 125 ಹಾಸಿಗೆಗಳ ಕೊವಿಡ್ -19 ಆಸ್ಪತ್ರೆಯನ್ನು ಸ್ಥಾಪಿಸಲು 20 ಕೆಜಿಗಿಂತ ಹೆಚ್ಚು ಚಿನ್ನ ಮತ್ತು ಬೆಳ್ಳಿಯನ್ನು ದೇಣಿಗೆ ನೀಡಿದೆ ಎಂದು ಹೇಳಿದೆ.

ಲಸಿಕೆ ಲೆಕ್ಕಾಚಾರ
ವ್ಯಾಕ್ಸಿನೇಷನ್ ಡ್ರೈವ್ (ಜೂನ್ 2) ನ 138 ನೇ ದಿನಕ್ಕೆ ಒಟ್ಟು 22,45,112 ಡೋಸ್ ಲಸಿಕೆ ನೀಡಲಾಗಿದೆ.
ಇದಲ್ಲದೆ, 45 ರಿಂದ 60 ವರ್ಷ ವಯಸ್ಸಿನ 6,78,25,793 ಮತ್ತು 1,09,67,786 ಫಲಾನುಭವಿಗಳಿಗೆ ಕ್ರಮವಾಗಿ ಮೊದಲ ಮತ್ತು ಎರಡನೆಯ ಡೋಸ್ ನೀಡಲಾಗಿದೆ, ಆದರೆ 60 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ 5,93,85,071 ಮೊದಲ ಡೋಸ್ ಮತ್ತು 1,89,41,698 ಎರಡನೇ ಡೋಸ್ ನೀಡಲಾಗಿದೆ.

ಕೋವಿಡ್ -19 ವ್ಯಾಕ್ಸಿನೇಷನ್ ವ್ಯಾಪ್ತಿಯು 22 ಕೋಟಿ ಗಡಿ ದಾಟಿರುವುದರಿಂದ ಭಾರತವು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ 18-44 ವರ್ಷದೊಳಗಿನ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ.

ಭಾರತದಲ್ಲಿನ ಕೊವಿಡ್ ಪ್ರವೃತ್ತಿ ಜಾಗತಿಕ ಮಾದರಿಗಳೊಂದಿಗೆ ಸ್ಥಿರವಾಗಿದೆ ಏಕೆಂದರೆ ಇತರ ಹಾಟ್‌ಸ್ಪಾಟ್‌ಗಳಾದ ಅಮೆರಿಕ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಇತರ ದೇಶಗಳಲ್ಲಿ ಪ್ರಕರಣ ಇಳಿಕೆಯಾಗುತ್ತಿದ. ಆದಾಗ್ಯೂ, ಪ್ರಕರಣಗಳ ಕುಸಿತದ ಹೊರತಾಗಿಯೂ, ಹೊಸ ಪ್ರಕರಣಗಳ ವಿಷಯದಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶ ಬ್ರೆಜಿಲ್ ಆಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೊವಿಡ್ ಶಿಷ್ಟಾಚಾರ ಉಲ್ಲಂಘನೆ: ಆಯೋಜಕರಿಗೆ 10 ಸಾವಿರ ರೂಪಾಯಿ ದಂಡ

ಕೊವಿಡ್ 3ನೇ ಅಲೆ ಎದುರಿಸಲು ಸಿದ್ಧತೆ; ವಾರದೊಳಗೆ ಕಾರ್ಯಪಡೆಯಿಂದ ವರದಿ ಸಲ್ಲಿಕೆ

(India records New Covid cases below 2 lakh for 7 days in a row 2,887 deaths in last 24 hours)

Published On - 10:50 am, Thu, 3 June 21