ದೆಹಲಿ: ಕೊರೊನಾ ಬಂದು ಒಂದು ವರ್ಷ ಕಳೆದಿದೆ. ಆದರೆ ಇದರ ತೀವ್ರತೆ ಮಾತ್ರ ಕಡಿಮೆಯಾಗುವ ಸೂಚನೆಯೇ ಸಿಗುತ್ತಿಲ್ಲ. ಈ ನಡುವೆ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 30,006 ಹೊಸ ಪ್ರಕರಣಗಳು ಪತ್ತೆಯಾಗಿವೆ. ಶುಕ್ರವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು ಶೇಕಡಾ 2 ರಷ್ಟು ಹೆಚ್ಚಳವಾಗಿದ್ದು 33,494 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು 442 ಮಂದಿ ಕೊರೊನಾಗೆ ಬಲಿಯಾಗಿರುವುದರ ಬಗ್ಗೆ ದಾಖಲಾಗಿದೆ. ಭಾರತದಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 98,26,775 ತಲುಪಿದೆ.
ಶನಿವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 3,59,819 ಕ್ಕೆ ಇಳಿದಿತ್ತು. ಒಟ್ಟು ಕೊರೊನಾದಿಂದ ಚೇತರಿಸಿಕೊಂಡಿರುವವರ ಸಂಖ್ಯೆ 93,24,328 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಶುಕ್ರವಾರ, ಹೊಸ ಪ್ರಕರಣಗಳ ಸಂಖ್ಯೆ 29,398 ಇತ್ತು.
ಏರುತ್ತಲೇ ಇದೆ ಕೊರೊನಾ ಅಟ್ಟಹಾಸ
ಆಗಸ್ಟ್ 7ಕ್ಕೆ ಭಾರತದ ಕೋವಿಡ್ -19 ಪ್ರಕರಣಗಳು 20 ಲಕ್ಷ ಆಗಿತ್ತು. ಆಗಸ್ಟ್ 23 ರಂದು ಮೂರು ದಶಲಕ್ಷ ಮತ್ತು ಸೆಪ್ಟೆಂಬರ್ 5 ಕ್ಕೆ ನಾಲ್ಕು ದಶಲಕ್ಷಕ್ಕೆ ದಾಟಿತ್ತು. ಬಳಿಕ ಇದು ಸೆಪ್ಟೆಂಬರ್ 16ಕ್ಕೆ ಐದು ದಶಲಕ್ಷ, ಸೆಪ್ಟೆಂಬರ್ 28 ಕ್ಕೆ ಆರು ದಶಲಕ್ಷ, ಅಕ್ಟೋಬರ್ 11 ರ ವೇಳೆಗೆ ಏಳು ದಶಲಕ್ಷ, ಅಕ್ಟೋಬರ್ 29ಕ್ಕೆ ಎಂಟು ದಶಲಕ್ಷ ದಾಟಿತ್ತು. ಮತ್ತು ನವೆಂಬರ್ 20 ಕ್ಕೆ ಅದು ಒಂಬತ್ತು ದಶಲಕ್ಷಕ್ಕೆ ಜಿಗಿದಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಡಿಸೆಂಬರ್ 11 ರವರೆಗೆ ಒಟ್ಟು 15,26,97,399 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಶುಕ್ರವಾರ 10,65,176 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. 146 ದಿನಗಳ ನಂತರ ಸೋಂಕಿತರನ್ನು 3.63 ಲಕ್ಷಕ್ಕೆ ತರುವ ಮೂಲಕ ಭಾರತ ಸಾಧನೆ ಮಾಡಿದ್ದು ಈ ಬಗ್ಗೆ ಶುಕ್ರವಾರ ವರದಿಯಾಗಿತ್ತು.
ಗುರುವಾಯೂರು ದೇವಸ್ಥಾನಕ್ಕಿಲ್ಲ ಭಕ್ತರಿಗೆ ಪ್ರವೇಶ
ಕಳೆದ ಕೆಲವು ದಿನಗಳಿಂದ ಕೇರಳವು ಗರಿಷ್ಠ ಹೊಸ ಸೋಂಕುಗಳನ್ನು ದಾಖಲಿಸುತ್ತಿದ್ದರೆ, ದೆಹಲಿಯ ಪರಿಸ್ಥಿತಿ ಸುಧಾರಿಸಿದೆ. ಗುರುವಾರ, ಪಶ್ಚಿಮ ಬಂಗಾಳ (2,801), ಉತ್ತರ ಪ್ರದೇಶ (1,662) ಮತ್ತು ರಾಜಸ್ಥಾನ (1,592) ದೆಹಲಿ (1,575) ಗಿಂತ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡಿದೆ. ಆದಾಗ್ಯೂ, ಶುಕ್ರವಾರ, ದೆಹಲಿಯಲ್ಲಿ 1,000 ಪ್ರಕರಣಗಳು ಹೆಚ್ಚಾಗಿದ್ದು, 2,385 ಹೊಸ ಕೋವಿಡ್ -19 ಕೇಸ್ಗಳು ದಾಖಲಾಗಿವೆ.
ಇನ್ನು ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿರುವ ಕೇರಳ ಎರಡು ವಾರಗಳ ವರಗೆ ತ್ರಿಶ್ಶೂರಿನ ಗುರುವಾಯೂರು ದೇವಸ್ಥಾನದೊಳಗೆ ಭಕ್ತರಿಗೆ ಪ್ರವೇಶವನ್ನು ರದ್ದು ಮಾಡಿದೆ. ಹಾಗೂ ಸುತ್ತಲಿನ ಏರಿಯಾವನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಿದೆ. ದೇವಸ್ಥಾನದ 22ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿದ ಬಗ್ಗೆ ಶುಕ್ರವಾರ ವರದಿಯಾಗಿತ್ತು.
ವಿಶ್ವದಲ್ಲಿ ಕೊರೊನಾ ದರ್ಶನ:
ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 7,20,80,830ಕ್ಕೇರಿಕೆಯಾಗಿದೆ. ವಿಶ್ವದಲ್ಲಿ ಈವರೆಗೆ ಕೊರೊನಾದಿಂದ 16,10,705 ಜನ ಮೃತಪಟ್ಟಿದ್ದು, 5,04,74,262 ಸೋಂಕಿತರು ಗುಣಮುಖರಾಗಿದ್ದಾರೆ. ವಿಶ್ವದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 1,99,95,863 ಇವೆ.
ವಿಶ್ವದ ಕೊರೊನಾ ಪೀಡಿತ ಟಾಪ್ 10 ದೇಶಗಳು:
ಬೆಂಗಳೂರಿನಲ್ಲಿ ಒಂದೇ ದಿನ 606 ಮಂದಿಯಲ್ಲಿ ಕೊರೊನಾ ಸೋಂಕುಪತ್ತೆ: ರಾಜ್ಯದಲ್ಲಿ ಒಟ್ಟು 1203 ಹೊಸ ಪ್ರಕರಣಗಳು
Published On - 5:20 pm, Sun, 13 December 20