ದೇಶದಲ್ಲಿ ಇಂದು 2 ಸಾವಿರಕ್ಕೂ ಅಧಿಕ ಕೊರೊನಾ ಕೇಸ್​ಗಳು ದಾಖಲು; ನಿನ್ನೆಗಿಂತ ಸಾವಿರ ಹೆಚ್ಚು, 214 ಮಂದಿ ಸಾವು

ಭಾರತದಲ್ಲಿ ದೈನಂದಿನ ಪಾಸಿಟಿವಿಟಿ ರೇಟ್​ 0.31 ರಿಂದ 0.83ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4.30ಕ್ಕೆ ತಲುಪಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ 11,558ರಿಂದ 11542ಕ್ಕೆ ಇಳಿದಿದೆ.

ದೇಶದಲ್ಲಿ ಇಂದು 2 ಸಾವಿರಕ್ಕೂ ಅಧಿಕ ಕೊರೊನಾ ಕೇಸ್​ಗಳು ದಾಖಲು; ನಿನ್ನೆಗಿಂತ ಸಾವಿರ ಹೆಚ್ಚು, 214 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
| Updated By: Lakshmi Hegde

Updated on: Apr 18, 2022 | 1:20 PM

ದೆಹಲಿ: ಭಾರತದಲ್ಲಿ ಮತ್ತೀಗ ನಿಧಾನವಾಗಿ ಕೊರೊನಾ ಸೋಂಕಿನ ಪ್ರಮಾಣ ಏರುತ್ತಿದೆ. ಕಳೆದ 24ಗಂಟೆಯಲ್ಲಿ 2183 ಹೊಸ ಪ್ರಕರಣಗಳು ದಾಖಲಾಗಿವೆ. ನಿನ್ನೆ 1150ರಷ್ಟು ಕೇಸ್​ಗಳು ಪತ್ತೆಯಾಗಿದ್ದು, ಇಂದು ಸಾವಿರದಷ್ಟು ಕೇಸ್​ಗಳು ಹೊಸದಾಗಿ ದಾಖಲಾಗಿವೆ. ಅಂದರೆ ನಿನ್ನೆಗಿಂತಲೂ ಇಂದು ಶೇ.89. 8ರಷ್ಟು ಹೆಚ್ಚಾಗಿದೆ.  ಹಾಗೇ ಕಳೆದ 24ಗಂಟೆಯಲ್ಲಿ 214 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 62 ಸಾವಿನ ಪ್ರಕರಣಗಳು ಕೇರಳದಿಂದ ದಾಖಲಾಗಿವೆ. ಅದೂ ಈ ಹಿಂದೆಯೇ ಕೊರೊನಾದಿಂದ ಮೃತಪಟ್ಟ ಕೆಲ ಪ್ರಕರಣಗಳನ್ನು ಡಾಟಾಕ್ಕೆ ಸೇರಿಸದೆ ಹಾಗೇ ಇಡಲಾಗಿತ್ತು. ಅದನ್ನೀಗ ಸೇರ್ಪಡೆಗೊಳಿಸಲಾಗಿದೆ.

ಭಾರತದಲ್ಲಿ ದೈನಂದಿನ ಪಾಸಿಟಿವಿಟಿ ರೇಟ್​ 0.31 ರಿಂದ 0.83ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4.30ಕ್ಕೆ ತಲುಪಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ 11,558ರಿಂದ 11542ಕ್ಕೆ ಇಳಿದಿದೆ. ದೇಶದಲ್ಲಿ ಏಪ್ರಿಲ್​ 1ರಿಂದ ಕೊವಿಡ್ 19 ನಿಯಂತ್ರಣ ನಿರ್ಬಂಧಗಳನ್ನೆಲ್ಲ ತೆಗೆದುಹಾಕಲಾಗಿದೆ. ಹೀಗಾಗಿ ನಿಧಾನವಾಗಿ ಮತ್ತೆ ಕೊರೊನಾ ಏರಿಕೆಯಾಗುತ್ತಿದೆ. ಅದರಲ್ಲೂ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇನ್ನಷ್ಟು ಕೊರೊನಾ ಅತ್ಯಂತ ವೇಗವಾಗಿ ಹರಡುತ್ತಿದೆ. ಇಂದು ಒಂದೇ ದಿನ 517 ಕೇಸ್​​ಗಳು ದಾಖಲಾಗಿದ್ದು, ದೈನಂದಿನ ಪಾಸಿಟಿವಿಟಿ ರೇಟ್​ ಏರುತ್ತಲೇ ಇದೆ.