ಹಗೆತನದಿಂದ ಉಪಯೋಗವಿಲ್ಲ, ಸಂಯಮವಿರಲಿ; ಇರಾನ್ ಮೇಲೆ ಇಸ್ರೇಲ್ ದಾಳಿಗೆ ಭಾರತ ಕಳವಳ

|

Updated on: Oct 26, 2024 | 9:41 PM

ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಂಟಾಗಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಇರಾನ್‌ನ ಅಕ್ಟೋಬರ್ 1ರಂದು ಟೆಹ್ರಾನ್‌ನ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಇರಾನ್‌ನ ವೈಮಾನಿಕ ದಾಳಿಗೆ ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದೆ. ಇದಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಹಗೆತನದಿಂದ ಉಪಯೋಗವಿಲ್ಲ, ಸಂಯಮವಿರಲಿ; ಇರಾನ್ ಮೇಲೆ ಇಸ್ರೇಲ್ ದಾಳಿಗೆ ಭಾರತ ಕಳವಳ
ಇರಾನ್ ಮೇಲೆ ಇಸ್ರೇಲ್ ದಾಳಿ
Follow us on

ನವದೆಹಲಿ: ಇರಾನ್ ಮೇಲೆ ಇಸ್ರೇಲ್ ಇಂದು ದಾಳಿ ನಡೆಸಿದ ನಂತರ ಮತ್ತೊಮ್ಮೆ ಮಧ್ಯಪ್ರಾಚ್ಯ ದೇಶದಲ್ಲಿ ಯುದ್ಧಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಿದೆ. ಯುದ್ಧ ಮಾಡುವ ರಾಷ್ಟ್ರಗಳು ಹಗೆತನದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಭಾರತ ಹೇಳಿದೆ.

“ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಉಲ್ಬಣ, ಅಶಾಂತಿ ಮತ್ತು ಅಸ್ಥಿರತೆಗಾಗಿ ನಾವು ತೀವ್ರ ಕಳವಳ ಹೊಂದಿದ್ದೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. “ಸಂಯಮವನ್ನು ಉಳಿದಿಕೊಂಡು ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ಎಲ್ಲ ದೇಶಗಳಿಗೂ ನಾವು ನಮ್ಮ ಕರೆಯನ್ನು ಪುನರುಚ್ಚರಿಸುತ್ತೇವೆ. ನಡೆಯುತ್ತಿರುವ ಹಗೆತನದಿಂದ ಅಮಾಯಕ ಜನರು ಬಳಲುತ್ತಿದ್ದಾರೆ.” ಎಂದು ಭಾರತ ಹೇಳಿದೆ.

ಇದನ್ನೂ ಓದಿ: ಯುದ್ಧದಿಂದ ಪಶ್ಚಿಮ ಏಷ್ಯಾ, ಉಕ್ರೇನ್ ಸಂಘರ್ಷಗಳ ಸಮಸ್ಯೆ ಪರಿಹಾರ ಅಸಾಧ್ಯ; ಜರ್ಮನಿ ಚಾನ್ಸೆಲರ್ ಜೊತೆ ಮೋದಿ ಭೇಟಿ

ಈ ಪ್ರದೇಶದಲ್ಲಿನ ನಮ್ಮ ಮಿಷನ್‌ಗಳು ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇರಾನ್ ಮೇಲಿನ ಇಸ್ರೇಲಿ ದಾಳಿಯಲ್ಲಿ, ಟೆಹ್ರಾನ್ ಮತ್ತು ನೆರೆಯ ನಗರವಾದ ಕರಾಜ್‌ನಲ್ಲಿ ಅನೇಕ ಭೀಕರ ಸ್ಫೋಟಗಳು ಕೇಳಿಬಂದವು.

ಅಕ್ಟೋಬರ್ 1ರಂದು ಕ್ಷಿಪಣಿ ದಾಳಿಯ ನಂತರ ಇರಾನ್ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಇಸ್ರೇಲ್ ಮೊದಲೇ ಘೋಷಿಸಿತ್ತು. 6 ತಿಂಗಳ ಅವಧಿಯಲ್ಲಿ ಟೆಹ್ರಾನ್ ಇಸ್ರೇಲ್ ಮೇಲೆ ಎರಡನೇ ಬಾರಿ ದಾಳಿ ನಡೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ