Coronavirus India Update: ದೇಶದಲ್ಲಿ ಒಂದೇ ದಿನ 3.79 ಲಕ್ಷ ಹೊಸ ಕೊವಿಡ್ ಪ್ರಕರಣ, 3,645 ಸಾವು

|

Updated on: Apr 29, 2021 | 11:08 AM

Covid Second Wave: ದೇಶದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 1.8 ಕೋಟಿ (1,83,76,524) ಆಗಿದೆ. ಕಳೆದ 24 ಗಂಟೆಗಳಲ್ಲಿ 3,645 ಮಂದಿ ಸಾವಿಗೀಡಾಗಿದ್ದು ಮೃತರ ಸಂಖ್ಯೆ 2.04 ಲಕ್ಷ (2,04,832) ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

Coronavirus India Update: ದೇಶದಲ್ಲಿ ಒಂದೇ ದಿನ 3.79 ಲಕ್ಷ ಹೊಸ ಕೊವಿಡ್ ಪ್ರಕರಣ, 3,645 ಸಾವು
ಸೂರತ್​ನ ಆಸ್ಪತ್ರೆಯೊಂದರ ದೃಶ್ಯ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3.79 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಗರಿಷ್ಠ ಪ್ರಕರಣಗಳ ದಾಖಲೆ ಬರೆದಿದೆ. ದೇಶದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 1.8 ಕೋಟಿ (1,83,76,524) ಆಗಿದೆ. ಕಳೆದ 24 ಗಂಟೆಗಳಲ್ಲಿ 3,645 ಮಂದಿ ಸಾವಿಗೀಡಾಗಿದ್ದು ಮೃತರ ಸಂಖ್ಯೆ 2.04 ಲಕ್ಷ (2,04,832) ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ 1ರಂದ ಕೊವಿಡ್ ಲಸಿಕೆ ವಿತರಣೆ ನಡೆಯಲಿದ್ದು, 1.33 ಕೋಟಿ ಜನರು Co-Win ಪೋರ್ಟಲ್​ ನಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಲಸಿಕೆ ಪಡೆಯಲು ಹೆಸರು ನೋಂದಣಿ ಪ್ರಕ್ರಿಯೆ ಬುಧವಾರ ಸಂಜೆ 4 ಗಂಟೆಗೆ ಆರಂಭವಾಗಿತ್ತು.

ಆದಾಗ್ಯೂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊವಿಡ್ ಎರಡನೇ ಅಲೆ ಗಂಭೀರ ಪರಿಣಾಮ ಬೀರಿದ್ದು ಕಳೆದ 10 ದಿನಗಳಲ್ಲಿ ಇಲ್ಲಿ 3,094 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ. ದೆಹಲಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ  24 ಗಂಟೆಗಳಲ್ಲಿ  25,986 ಹೊಸ ಪ್ರಕರಣಗಳು ಪತ್ತೆಯಾಗಿವೆ. 20,458 ಮಂದಿ ಚೇತರಿಸಿಕೊಂಡಿದ್ದು 368 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ  99,752, ಒಟ್ಟು ಸಾವಿನ ಸಂಖ್ಯೆ  14,616, ಈವರೆಗೆ ಚೇತರಿಸಿಕೊಂಡವರ ಸಂಖ್ಯೆ  9,39,333 ಆಗಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 985 ಸಾವು, ಸಕ್ರಿಯ ಪ್ರಕರಣಗಳ ಸಂಖ್ಯೆ 6.73 ಲಕ್ಷ
ಮಹಾರಾಷ್ಟ್ರದಲ್ಲಿ ಬುಧವಾರ 985 ಮಂದಿ ಸಾವಿಗೀಡಾಗಿದ್ದು, ಅತೀ ಹೆಚ್ಚು ಸಾವು ದಾಖಲೆಯಾದ ದಿನವಾಗಿದೆ. 63,309 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 61,181 ಮಂದಿ ಚೇತರಿಸಿಕೊಂಡಿದ್ದಾರೆ . ಇಲ್ಲಿ ಒಟ್ಟು 6,73,481 ಸಕ್ರಿಯ ಪ್ರಕರಣಗಳಿವೆ

ದೇಶದಾದ್ಯಂತವಿರುವ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳ ಸಂಖ್ಯೆ ಜಾಸ್ತಿ ಆಗಿದ್ದು ಕಳೆದ 9 ದಿನಗಳಲ್ಲಿ ವೈದ್ಯಕೀಯ ಆಕ್ಸಿಜನ್ ಗೆ ಬೇಡಿಕೆ ಶೇ 67ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಏಪ್ರಿಲ್ 15ರ ಹೊತ್ತಿಗೆ 12 ರಾಜ್ಯಗಳಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದ್ದು ಏಪ್ರಿಲ್ 24ರ ಹೊತ್ತಿಗೆ 22 ರಾಜ್ಯಗಳು ಆಕ್ಸಿಜನ್ ಗಾಗಿ ಬೇಡಿಕೆಯೊಡ್ಡಿವೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್  ಗೆಹ್ಲೋಟ್  ಅವರಿಗೆ ಕೊವಿಡ್  ದೃಢಪಟ್ಟಿದೆ.  ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ,ಅವರೀಗ ಐಸೋಲೇಷನ್​ನಲ್ಲಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.


ಭಾರತಕ್ಕೆ ಅಮೆರಿಕ ಸಹಾಯ ಹಸ್ತ
ಕೊವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೀಡಾಗಿರುವ ಭಾರತಕ್ಕೆ ಅಮೆರಿಕ ಸಹಾಯ ಹಸ್ತ ಚಾಚಿದೆ. ಭಾರತಕ್ಕೆ ನೆರವು ನೀಡುವ ಬಗ್ಗೆ ಶ್ವೇತಭವನ ಬುಧವಾರ ಹೇಳಿಕೋ ನೀಡಿತ್ತು. 1,000 ಆಕ್ಸಿಜನ್ ಸಿಲಿಂಡರ್,1.5 N95 ಮಾಸ್ಕ್, 10 ಲಕ್ಷ ರಾಪಿಡ್ ಡಯಾಗ್ನಸ್ಟಿಕ್ ಟೆಸ್ಟ್ ಸರಬರಾಜು ಮಾಡಲಿದೆ ಎಂದು ಅಮೆರಿಕ ಹೇಳಿದೆ.

ಬ್ರಿಟನ್​ನಿಂದಲೂ ಬಂತು ಆಕ್ಸಿಜನ್  ಸಾಂದ್ರಕ 

ಬ್ರಿಟನ್​ನಿಂದ 120 ಆಕ್ಸಿದಜನ್  ಸಾಂದ್ರಕಗಳನ್ನು ಹೊತ್ತ ವಿಮಾನ ಇಂದು ಬೆಳಗ್ಗೆ ದೆಹಲಿ ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ  ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.


ಭಾರತೀಯ  ವೈದ್ಯಕೀಯ  ಸಂಶೋಧನಾ  ಮಂಡಳಿ  (ICMR) ಅಂಕಿ ಅಂಶಗಳ ಪ್ರಕಾರ  ಏಪ್ರಿಲ್ 28ರವರೆಗೆ 28,44,71,979 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 17,68,190 ಮಾದರಿಗಳನ್ನು  ನಿನ್ನೆ  ಪರೀಕ್ಷೆಗೊಳಪಡಿಸಲಾಗಿದೆ .


ರಷ್ಯಾದಿಂದ ಆಕ್ಸಿಜನ್ ಸಾಂದ್ರಕ 

#WATCH | Two flights from Russia, carrying 20 oxygen concentrators, 75 ventilators, 150 bedside monitors, and medicines totalling 22 MT, arrived at Delhi airport earlier this morning. pic.twitter.com/L2JRu3WLZs

20 ಆಕ್ಸಿಜನ್ ಸಾಂದ್ರಕ, 75 ವೆಂಟಿಲೇಟರ್, 150  ಬೆಡ್ ಸೈಟ್ ಮಾನಿಟರ್ ,  22 ಮೆಟ್ರಿಕ್ ಟನ್ ಔಷಧಿ ಹೊತ್ತು  ರಷ್ಯಾದಿಂದ ಎರಡು ವಿಮಾನಗಳು ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದಿವೆ.

ಇದನ್ನೂ ಓದಿ: Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು

Published On - 10:49 am, Thu, 29 April 21