Coronavirus cases in India: ದೇಶದಲ್ಲಿ 80,834 ಹೊಸ ಕೊವಿಡ್ ಪ್ರಕರಣ, ಏಪ್ರಿಲ್ ತಿಂಗಳಿನಿಂದೀಚೆಗೆ ಅತೀ ಕಡಿಮೆ ಪ್ರಕರಣ ದಾಖಲು

| Updated By: ರಶ್ಮಿ ಕಲ್ಲಕಟ್ಟ

Updated on: Jun 13, 2021 | 10:47 AM

Covid 19: ಕಳೆದ 24 ಗಂಟೆಗಳಲ್ಲಿ 84,332 ಹೊಸ ಸೋಂಕುಗಳು ದಾಖಲಾದ ನಂತರ ಭಾರತದ ಕೊವಿಡ್ -19 ಒಟ್ಟು ಪ್ರಕರಣಗಳ ಸಂಖ್ಯೆ 2,93,59,155 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Coronavirus cases in India: ದೇಶದಲ್ಲಿ 80,834 ಹೊಸ ಕೊವಿಡ್ ಪ್ರಕರಣ, ಏಪ್ರಿಲ್ ತಿಂಗಳಿನಿಂದೀಚೆಗೆ ಅತೀ ಕಡಿಮೆ ಪ್ರಕರಣ ದಾಖಲು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 80,834 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದೆ. ಇದು ಏಪ್ರಿಲ್ 1 ರಿಂದ ದೈನಂದಿನ ಪ್ರಕರಣಗಳಲ್ಲಿ ಅತಿ ಕಡಿಮೆ ಏರಿಕೆಯಾಗಿದೆ. ತಮಿಳುನಾಡು 15,000 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದ್ದು , ಕೇರಳದಲ್ಲಿ 14,000 ಪ್ರಕರಣಗಳು ವರದಿ ಆಗಿವೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 10.26 ಲಕ್ಷಕ್ಕೆ ಇಳಿದಿದೆ. ಶನಿವಾರ 3,300 ಕ್ಕೂ ಹೆಚ್ಚು ಸಾವು ವರದಿಯಾಗಿವೆ. ದೆಹಲಿಯಲ್ಲಿ ಶನಿವಾರ 213 ಹೊಸ ಕೊವಿಡ್ -19 ಪ್ರಕರಣಗಳು ದಾಖಲಾಗಿವೆ. ಇದು ಮೂರು ತಿಂಗಳಲ್ಲಿ ಅತಿ ಕಡಿಮೆ. ಶನಿವಾರ 28 ಹೊಸ ಸಾವು ಪ್ರಕರಣ ಸಂಭವಿಸಿದ್ದು ಸಕಾರಾತ್ಮಕತೆಯ ಪ್ರಮಾಣವು ಶೇಕಡಾ 0.30 ಕ್ಕೆ ಇಳಿದಿದೆ ಎಂದು ಇಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ. ಇಲ್ಲಿ ಒಟ್ಟು ಸಾವಿನ ಸಂಖ್ಯೆ 24,800 ಆಗಿದೆ.

ಕಳೆದ 24 ಗಂಟೆಗಳಲ್ಲಿ 84,332 ಹೊಸ ಸೋಂಕುಗಳು ದಾಖಲಾದ ನಂತರ ಭಾರತದ ಕೊವಿಡ್ -19 ಒಟ್ಟು ಪ್ರಕರಣಗಳ ಸಂಖ್ಯೆ 2,93,59,155 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಎರಡು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ಇದು ಮೊದಲ ಬಾರಿಗೆ ದೈನಂದಿನ ಪ್ರಕರಣಗಳು 90,000 ಕ್ಕಿಂತ ಕಡಿಮೆಯಾಗಿದೆ. ಶುಕ್ರವಾರ ದೇಶಾದ್ಯಂತ 91,702 ಕೊವಿಡ್ -19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು 10.80 ಲಕ್ಷಕ್ಕೆ ಇಳಿದಿವೆ.

ಏತನ್ಮಧ್ಯೆ, ಕೋವಿಡ್ -19 ರ ಹರಡುವಿಕೆಯನ್ನು ನಿರ್ಣಯಿಸಲು ರಾಷ್ಟ್ರಮಟ್ಟದ ಸಿರೊ ಸಮೀಕ್ಷೆಗಳನ್ನು ಪ್ರಾರಂಭಿಸುವುದಾಗಿ ಐಸಿಎಂಆರ್ ಹೇಳಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ಅವುಗಳನ್ನು ನಡೆಸಲು ಪ್ರೋತ್ಸಾಹಿಸಬೇಕು ಎಂದಿದೆ. ದೇಶದ ಕೊರೊನಾವೈರಸ್ ಪರಿಸ್ಥಿತಿ ಸ್ಥಿರವಾಗುತ್ತಿದೆ ಎಂದು ತೋರುತ್ತದೆ, ಜನರು ಸೂಕ್ತ ನಡವಳಿಕೆ ಮತ್ತು ಸಾಮಾಜಿಕ ಅಂತರ ನಿಯಮಗಳನ್ನು ಅನುಸರಿಸುತ್ತಾರೆ ಎಂದು ಸಚಿವಾಲಯ ಹೇಳಿದೆ.


ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಗಾಗಿ ತುರ್ತು ಬಳಕೆಯ ಅಧಿಕಾರವನ್ನು ಯುಎಸ್‌ನ ಆಹಾರ ಮತ್ತು ಔ ಷಧ ಆಡಳಿತ ತಿರಸ್ಕರಿಸಿದೆ, ಬದಲಿಗೆ ಲಸಿಕೆ ತಯಾರಕರ ಅಮೆರಿಕದ ಪಾಲುದಾರ ಬಯೋಲಾಜಿಕ್ಸ್ ಪರವಾನಗಿ ಅರ್ಜಿ (ಬಿಎಲ್‌ಎ) ಗೆ ಅರ್ಜಿ ಸಲ್ಲಿಸಬೇಕು ಎಂದು ಶಿಫಾರಸು ಮಾಡಿದೆ.

2021 ಜೂನ್ 12 ರವರೆಗೆ 37,81,32,474 ಮಾದರಿಗಳನ್ನು ಪರೀಕ್ಷಿಸಲಾಗಿದೆ , ಇವುಗಳಲ್ಲಿ 19,00,312 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಯಿತು  ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಟ್ವೀಟ್ ಮಾಡಿದೆ.

ಚೇತರಿಕೆ ಪ್ರಕರಣಗಳು ಸತತ 31 ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಂದ ಹೆಚ್ಚಿವೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 2,80,43,446 ಕ್ಕೆ ಏರಿದರೆ, ಸಾವಿನ ಪ್ರಮಾಣವು ಶೇಕಡಾ 1.26 ಕ್ಕೆ ಏರಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.

ಒಟ್ಟಾರೆಯಾಗಿ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ 25,31,95,048 ಕೊವಿಡ್ -19 ಲಸಿಕೆ ಡೋಸ್ಗಳನ್ನು ಇಲ್ಲಿಯವರೆಗೆ ನೀಡಲಾಗಿದೆ.

ಭಾರತದ ಕೊವಿಡ್ ಪ್ರಕರಣಗಳ ಸಂಖ್ಯೆ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದೆ, ಅಕ್ಟೋಬರ್ 11 ರಂದು 70 ಲಕ್ಷ ದಾಟಿದೆ. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ. ಮೇ 4 ರಂದು ಇ ಕೋಟಿಯ ಮೈಲಿಗಲ್ಲು ದಾಟಿದೆ.

3,303 ಹೊಸ ಸಾವು ಪ್ರಕರಣಗಳ ಪೈರಿ ಮಹಾರಾಷ್ಟ್ರದಿಂದ 1,966, ತಮಿಳುನಾಡಿನಿಂದ 374, ಕೇರಳದಿಂದ 171 ಮತ್ತು ಕರ್ನಾಟಕದಿಂದ 144 ಸಾವುಗಳು ಸೇರಿವೆ.

ದೇಶದಲ್ಲಿ ಈವರೆಗೆ ಒಟ್ಟು 3,70,384 ಸಾವುಗಳು ಸಂಭವಿಸಿವೆ. ಇದರಲ್ಲಿ ಮಹಾರಾಷ್ಟ್ರದಿಂದ 1,08,333, ಕರ್ನಾಟಕದಿಂದ 32,788, ತಮಿಳುನಾಡಿನಿಂದ 29,280, ದೆಹಲಿಯಿಂದ 24,800, ಉತ್ತರ ಪ್ರದೇಶದಿಂದ 21,735, ಪಶ್ಚಿಮ ಬಂಗಾಳದಿಂದ 16,812, ಪಂಜಾಬ್‌ನಿಂದ 15,503 ಮತ್ತು 13,311 ಛತ್ತೀಸ್‌ಗಡದಿಂದ ವರದಿ ಆಗಿದೆ.
ಶೇಕಡಾ 70 ಕ್ಕಿಂತ ಹೆಚ್ಚು ಸಾವುಗಳು ಕೊಮೊರ್ಬಿಡಿಟಿಗಳಿಂದಾಗಿ ಸಂಭವಿಸಿವೆ ಎಂದು ಸಚಿವಾಲಯ ಒತ್ತಿ ಹೇಳಿತು.

ಇದನ್ನೂ  ಓದಿ:  Post Covid: ದೀರ್ಘಕಾಲಿಕ ಕೊವಿಡ್​ ಲಕ್ಷಣಗಳಿಂದ ಹೊರಬರಲು ಸರಳ ವಿಧಾನಗಳು

( India reported 3,303 deaths and 80,834 new cases of coronavirus lowest since April 1)

Published On - 10:39 am, Sun, 13 June 21