ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4529 ಮಂದಿ ಕೊವಿಡ್ ರೋಗಿಗಳು ಸಾವಿಗೀಡಾಗಿದ್ದು ಒಂದೇ ದಿನದಲ್ಲಿ ಗರಿಷ್ಠ ಸಾವು ಪ್ರಕರಣ ವರದಿ ಆಗಿದೆ. ಮಹಾರಾಷ್ಟ್ರದಲ್ಲಿ 1,300 ಕ್ಕೂ ಹೆಚ್ಚು ಸಾವು ವರದಿ ಆಗಿದೆ. ಕರ್ನಾಟಕದಲ್ಲಿ 525 ಸಾವುಗಳು ಸಂಭವಿಸಿದ್ದು, ತಮಿಳುನಾಡು 364 ಸಾವುಗಳನ್ನು ದಾಖಲಿಸಿದೆ. ದೇಶದಲ್ಲಿ 2.67 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ 33,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕ ಮತ್ತು ಕೇರಳದಲ್ಲಿ 30,000ಕ್ಕಿಂತ ಪ್ರಕರಣಗಳು ದಾಖಲಾಗಿವೆ. ತಿಂಗಳುಗಳಿಂದ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಮಹಾರಾಷ್ಟ್ರದಲ್ಲಿ 28,438 ಹೊಸ ಸೋಂಕು ಪ್ರಕರಗಳೊಂದಿಗೆ ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು ಮತ್ತಷ್ಟು 32.26 ಲಕ್ಷಕ್ಕೆ ಇಳಿದಿವೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 267,334 ಕೊವಿಡ್ ಪ್ರಕರಣಗಳು ದಾಖಲಾಗಿದ್ದು, 4,529 ಸಾವು ವರದಿ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದರೊಂದಿಗೆ ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 25,496,330 ಕ್ಕೆ ಏರಿದ್ದು ಸಾವಿನ ಸಂಖ್ಯೆ 283,248 ಕ್ಕೆ ಏರಿದೆ.
ಕಳೆದ ಎರಡು ವಾರಗಳಿಂದ ಸುಮಾರು 200 ಜಿಲ್ಲೆಗಳಲ್ಲಿ ಕೊವಿಡ್ ಪ್ರಕರಣಗಳು ಕುಸಿತ ಕಂಡಿವೆ. ಕಳೆದ 13 ವಾರಗಳಿಂದ ಸತತವಾಗಿ ಪ್ರಕರಣಗಳ ಸಂಖ್ಯೆ ಏರಿಕೆ ಆದ ನಂತರ ದೇಶದ ಒಟ್ಟಾರೆ ಪ್ರಕರಣದ ಪಾಸಿಟಿವಿಟಿ ದರ ಕಳೆದ ಏಳು ದಿನಗಳಲ್ಲಿ ಕುಸಿತವನ್ನು ದಾಖಲಿಸಿದೆ ಎಂದು ಸರ್ಕಾರ ಮಂಗಳವಾರ ಹೇಳಿದೆ.
ಏತನ್ಮಧ್ಯೆ ಮಹಾರಾಷ್ಟ್ರ ಹೊರತು ಪಡಿಸಿ ಹಲವಾರು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಕಡಿಮೆ ಆಗಿದೆ. ಅದೇ ವೇಳೆ ಅಮರಾವತಿ ಜಿಲ್ಲೆಯಲ್ಲಿ ಸೋಂಕುಗಳು ಹೆಚ್ಚಿವೆ. ಈ ವರ್ಷದ ಫೆಬ್ರವರಿಯಲ್ಲಿ ಎರಡನೇ ಅಲೆಯನ್ನು ವರದಿ ಮಾಡಿದ ಮಹಾರಾಷ್ಟ್ರದ ಮೊದಲ ಜಿಲ್ಲೆಗಳಲ್ಲಿ ಅಮರಾವತಿ ಕೂಡ ಒಂದು. ಮಾರ್ಚ್ ತಿಂಗಳಲ್ಲಿ 10 ದಿನಗಳ ಲಾಕ್ ಡೌನ್ ನಂತರ, ಇದು ಪ್ರಕರಣಗಳಲ್ಲಿ ಕುಸಿತ ಕಂಡದೆ. ಆದರೆ ರಾಜ್ಯದ ಅಂಕಿ ಅಂಶ ಪ್ರಕಾರ ಏಪ್ರಿಲ್ 9-15 ರಿಂದ ದಿನಕ್ಕೆ ಸರಾಸರಿ 148 ರಷ್ಟು ಏರಿಕೆ ಕಂಡಿದೆ. ಪ್ರತಿದಿನ 426 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಮೇ 8-14ರವರೆಗೆ 1,060 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.
India reports 2,67,334 new #COVID19 cases, 3,89,851 discharges & 4529 deaths (highest in a single day) in last 24 hrs, as per Health Ministry.
Total cases: 2,54,96,330
Total discharges: 2,19,86,363
Death toll: 2,83,248
Active cases: 32,26,719Total vaccination: 18,58,09,302 pic.twitter.com/iXabFEM0M5
— ANI (@ANI) May 19, 2021
ಕೇರಳದಲ್ಲಿ ಕೊವಿಡ್ ಎರಡನೇ ಅಲೆ ಉತ್ತುಂಗಕ್ಕೇರಿದೆ. ರಾಜ್ಯದ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳು,ಸ್ವ ಸಹಾಯ ಗುಂಪುಗಳು ಮತ್ತು ಯುವ ಸಂಘಟನೆಗಳು, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸರ್ಕಾರದ ಜತೆ ಕೈ ಜೋಡಿಸಿವೆ. ಈ ಸಂಘಟನೆಗಳು ಆಹಾರ, ಪಲ್ಸ್ ಆಕ್ಸಿಮೀಟರ್‌ಗಳು, ಪಿಪಿಇ ಕಿಟ್‌ಗಳು, ಮತ್ತು ವಾಹನಗಳನ್ನು ಉಚಿತವಾಗಿ ಪೂರೈಸುತ್ತಾರೆ. ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಅಂತಿಮ ವಿಧಿಗಳಿಗೆ ಕೂಡಾ ಸ್ವಯಂ ಸೇವಕರು ಸಹಾಯ ಮಾಡುತ್ತಿದ್ದಾರೆ. ಕೊವಿಡ್ ನಿಯಂತ್ರಿಸಲು ಹೆಣಗಾಡುತ್ತಿರವ ರಾಜ್ಯ ಸರ್ಕಾರಕ್ಕೆ, ಸ್ಥಳೀಯ ಸಂಸ್ಥೆಗಳ ಸಕ್ರಿಯ ಬೆಂಬಲ ದೊಡ್ಡ ಉತ್ತೇಜನ ನೀಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಆಂಧ್ರಪ್ರದೇಶದಲ್ಲಿ 21,320 ಪ್ರಕರಣಗಳು ವರದಿ ಆಗಿದ್ದು 20,000 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದ ಐದನೇ ರಾಜ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ 19,428 ಪ್ರಕರಣಗಳು ಮತ್ತು ಒಡಿಶಾದಲ್ಲಿ 10,321 ಆಗಿದ್ದು ಬೇರೆ ಯಾವುದೇ ರಾಜ್ಯಗಳು ಇಂದು 10,000 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿಲ್ಲ.
ಎರಡೂವರೆ ತಿಂಗಳ ನಂತರ ಮುಂಬೈನಲ್ಲಿ 1,000ಕ್ಕಿಂತ ಕಡಿಮೆ ಪ್ರಕರಣ ದಾಖಲು
ಮುಂಬೈನಲ್ಲಿ ಮಂಗಳವಾರ 953 ಹೊಸ ಕೊರೊನವೈರಸ್ ಸೋಂಕು ಪ್ರಕರಣ ಮತ್ತು 44 ಸಾವುಗಳು ವರದಿ ಆಗಿದೆ. ಈ ಮೂಲಕ ರ ಪ್ರಕರಣಗಳ ಸಂಖ್ಯೆ 6,90,889 ಮತ್ತು ಸಾವಿನ ಸಂಖ್ಯೆ 14,352 ಕ್ಕೆ ತಲುಪಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಮಾರ್ಚ್ 2 ರ ನಂತರ ಮೊದಲ ಬಾರಿಗೆ ನಗರದಲ್ಲಿ 1,000 ಕ್ಕಿಂತ ಕಡಿಮೆ ಕೊವಿಡ್ 19 ಪ್ರಕರಣಗಳನ್ನು ವರದಿ ಮಾಡಿದೆ. ಏತನ್ಮಧ್ಯೆ ಪರೀಕ್ಷೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಸೋಮವಾರ ಸಂಜೆಯಿಂದ 17,920 ಪರೀಕ್ಷೆಗಳನ್ನು ನಡೆಸಲಾಗಿದ್ದು, ಪರೀಕ್ಷೆಗಳ ಸಂಖ್ಯೆ 59,34,165 ಆಗಿದೆ ಎಂದು ಬಿಎಂಸಿಯ ಡೇಟಾ ತೋರಿಸಿದೆ. ಕಳೆದ ವಾರದವರೆಗೆ ನಗರದಲ್ಲಿ ಪ್ರತಿದಿನ 20,000 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗುತ್ತಿತ್ತು.
ದೇಶದಲ್ಲಿ ಅತಿ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ತಮಿಳುನಾಡಿನಲ್ಲಿ
ಕಳೆದ ವರ್ಷ ಮಾರ್ಚ್‌ನಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ದೇಶದಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ತಮಿಳುನಾಡಿನಲ್ಲಿ ಮಂಗಳವಾರ ವರದಿ ಮಾಡಿದೆ. ಆದಾಗ್ಯೂ, ರಾಜ್ಯದಲ್ಲಿ ಹೊಸ ಪ್ರಕರಣಗಳ ಕುಸಿತವನ್ನು ಕಾಣುತ್ತಿದೆ. ಮೇ 15 ರಂದು 33,658 ಪ್ರಕರಣಗಳನ್ನು ವರದಿ ಆದ ನಂತರ ತಮಿಳುನಾಡಿನಲ್ಲಿ ಮೇ 16 ರಂದು 33,181 ಮತ್ತು ಮೇ 17 ರಂದು 33,075 ಪ್ರಕರಣಗಳು ವರದಿ ಆಗಿದೆ. ಮಂಗಳವಾರ, ಒಟ್ಟು 33,059 ಜನರಿಗೆ ಕೊವಿಡ್ ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆಯನ್ನು 16,64,350 ಕ್ಕೆ ತಲುಪಿದೆ. ಆದಾಗ್ಯೂ, ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ 364 ಜನರು ಈ ಕಾಯಿಲೆಗೆ ಬಲಿಯಾಗುವುದರೊಂದಿಗೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಮತ್ತೊಂದು ಆತಂಕಕಾರಿ ಪ್ರವೃತ್ತಿಯೆಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ,ಮಂಗಳವಾರದ ಹೊತ್ತಿಗೆ, ಆರೋಗ್ಯ ಕೇಂದ್ರಗಳಲ್ಲಿ ಮತ್ತು ಅವರ ಮನೆಗಳಲ್ಲಿ 2,42,949 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವುಗಳಲ್ಲಿ, ಸುಮಾರು ಮೂರನೇ ಒಂದು ಭಾಗದಷ್ಟು ಜನರು ಚೆನ್ನೈ ಪ್ರದೇಶದವರಾಗಿದ್ದಾರೆ. ಹಾಟ್ ಸ್ಪಾಟ್ ಪ್ರದೇಶವಾಗಿರವ ಚೆನ್ನೈನಲ್ಲಿ, ಕೊವಿಡ್ ಪಾಸಿಟಿವ್ ಆಗಿರುವ ಜನರ ಸಂಖ್ಯೆ ಸತತ ಮೂರನೇ ದಿನವೂ ಕಡಿಮೆಯಾಗಿದೆ. ಒಟ್ಟು 6,016 ಮಂದಿ ಸೋಂಕಿಗೆ ಒಳಗಾಗಿದ್ದರು, ಮತ್ತು ಇದರಲ್ಲಿ 74 ಮಂದಿ ವಿಕಲ ಚೇತನರಾಗಿದ್ದಾರೆ. ಕಾಂಚೀಪುರಂನಲ್ಲಿ, ಸೋಮವಾರಕ್ಕೆ ಹೋಲಿಸಿದರೆ ದೈನಂದಿನ ಸೋಂಕಿನ ಸಂಖ್ಯೆ (761) ಶೇ 38 ರಷ್ಟು ತೀವ್ರವಾಗಿ ಕುಸಿಯಿತು. ಆದರೆ ಸಾವಿನ ಸಂಖ್ಯೆ ಮಂಗಳವಾರ 19 ಕ್ಕೆ ಏರಿದೆ. ಇತರ ಎರಡು ನೆರೆಯ ಜಿಲ್ಲೆಗಳಾದ ಚೆಂಗಲ್‌ಪೇಟೆ (2,299) ಮತ್ತು ತಿರುವಳ್ಳೂರು (1,890) ಗಳಲ್ಲಿ ಪಾಸಿಟಿವ್ ಪ್ರಕರಣ ಕಡಿಮೆಯಾಗಿಲ್ಲ.
ತಮಿಳುನಾಡಿನಲ್ಲಿ ಎರಡನೇ ಅತಿ ಹೆಚ್ಚು ಪೀಡಿತ ಜಿಲ್ಲೆಯಾದ ಕೊಯಮತ್ತೂರಿನಲ್ಲಿ 3,071 ಹೊಸ ಪ್ರಕರಣಗಳು ದಾಖಲಾಗಿವೆ. ಆದರೆ ಚೇತರಿಕೆ ಸಂಖ್ಯೆ(1,305) ಅದರಲ್ಲಿ ಅರ್ಧದಷ್ಟು ಕೂಡ ಇರಲಿಲ್ಲ. ಅದಕ್ಕಾಗಿಯೇ ಅಲ್ಲಿ ಆಕ್ಸಿಜನ್ ಸಪೋರ್ಟ್ ಮತ್ತು ಐಸಿಯು ಹಾಸಿಗೆಗಳಿಗೆ ತೀವ್ರ ಕೊರತೆ ಇದೆ. ಮಂಗಳವಾರ ಸಂಜೆ ಇಡೀ ಜಿಲ್ಲೆಯಲ್ಲಿ ಇಂತಹ ಆರು ಹಾಸಿಗೆಗಳು ಮಾತ್ರ ಖಾಲಿಯಾಗಿವೆ. ಸೇಲಂ (650 ಪ್ರಕರಣಗಳು) ಮತ್ತು ವೆಲ್ಲೂರು (520 ಪ್ರಕರಣಗಳು) ನಂತಹ ಇತರ ಪ್ರಮುಖ ನಗರಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ, ಸೋಮವಾರ (63,101) ಕ್ಕೆ ಹೋಲಿಸಿದರೆ ಒಟ್ಟು 50,091 ಮಂದಿ ಮಂಗಳವಾರ ಲಸಿಕೆ ಪಡೆದಿದ್ದಾರೆ . ಈವರೆಗೆ ರಾಜ್ಯದಲ್ಲಿ ಒಟ್ಟು 70,13,735 ಜನರಿಗೆ ಲಸಿಕೆ ನೀಡಲಾಗಿದೆ.
200 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಕುಸಿತ
ಕಳೆದ ಎರಡು ವಾರಗಳಿಂದ ಸುಮಾರು 200 ಜಿಲ್ಲೆಗಳು ಪ್ರಕರಣಗಳ ಕುಸಿತವನ್ನು ವರದಿ ಮಾಡುತ್ತಿವೆ ಮತ್ತು ಕಳೆದ 13 ವಾರಗಳಿಂದ ಸತತವಾಗಿ ಹೆಚ್ಚಿದ ನಂತರ, ದೇಶದ ಒಟ್ಟಾರೆ ಪ್ರಕರಣದ ಪಾಸಿಟಿವಿಟಿ ದರ ಕಳೆದ ಏಳು ದಿನಗಳಲ್ಲಿ ಕುಸಿತವನ್ನು ದಾಖಲಿಸಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
ಸಾಂಕ್ರಾಮಿಕ ವಕ್ರರೇಖೆಯು ಸ್ಥಿರಗೊಳ್ಳುತ್ತಿದೆ” ಎಂದು ಭಾರತದ ಕೊವಿಡ್ -19 ಕಾರ್ಯಪಡೆಯ ಮುಖ್ಯಸ್ಥ ಡಾ.ವಿ.ಕೆ ಪೌಲ್ ಹೇಳಿದ್ದಾರೆ. ಇದರರ್ಥ ಸಾಂಕ್ರಾಮಿಕವು ಒಟ್ಟಾರೆಯಾಗಿ ಕುಗ್ಗುತ್ತಿದೆ ಎಂದು ಅವರು ಹೇಳಿದರು. ಫೆಬ್ರವರಿ 16-22ರ ನಂತರದ ಮೊದಲ ಏಳು ದಿನಗಗಳಿಗೆ ಹೋಲಿಸಿದರೆ ಹಿಂದಿನ ಏಳು ದಿನಗಳ ಅವಧಿಯಲ್ಲಿ ದೇಶವು ಪಾಸಿಟಿವಿಟಿ ಕುಸಿತವನ್ನು ವರದಿ ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಮೇ 11 ಮತ್ತು ಮೇ 17 ರ ನಡುವೆ ಪ್ರತಿದಿನ ಸರಾಸರಿ 18.45 ಲಕ್ಷ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದು ವಾರಕ್ಕೆ 16.9 ರಷ್ಟು ಸಕಾರಾತ್ಮಕತೆಯನ್ನು ನೀಡುತ್ತದೆ. ಆದಾಗ್ಯೂ, ಇವು ಆರಂಭಿಕ ಸಂಕೇತಗಳು ಎಂದು ಪೌಲ್ ಒತ್ತಿ ಹೇಳಿದ್ದಾರೆ. ನಿಯಂತ್ರಣ ಮತ್ತು ಪರೀಕ್ಷೆಯಲ್ಲಿನ ಯಾವುದೇ ತೃಪ್ತಿ ಹೊಸ ಉಲ್ಬಣಕ್ಕೆ ಕಾರಣವಾಗಬಹುದು ಎಂದಿದ್ದಾರೆ ಅವರು. ಅದಸಂಖ್ಯೆಯಲ್ಲಿನ ಕುಸಿತ ಒಂದು ಭಾಗವಾಗಿದೆ. ಆದರೆ ನಾವು ಸಕಾರಾತ್ಮಕ ದರದಲ್ಲಿ ಕುಸಿತವನ್ನು ಸಾಧಿಸುತ್ತಿರುವಾಗ ಎಂದು ನಾವು ಬಹಳ ಎಚ್ಚರದಿಂದಿರಬೇಕು ಎಂದು ಅವರು ಹೇಳಿದರು.
ಮರಣ ಸಂಖ್ಯೆಯಲ್ಲಿ ದೆಹಲಿಯನ್ನು ಹಿಂದಿಕ್ಕಿದ ಕರ್ನಾಟಕ
ಈ ತಿಂಗಳಲ್ಲಿ ಭಾರಿ ಪ್ರಮಾಣದ ಸಾವುನೋವುಗಳು ಕೇವಲ 17 ದಿನಗಳಲ್ಲಿ 6,790 ಸಾವು ಸಂಭವಿಸಿದ್ದು ಕರ್ನಾಟಕದಲ್ಲಿ ಕೊವಿಡ್ ರೋಗಿಗಳ ಮರಣ ಸಂಖ್ಯೆ ದೆಹಲಿಗಿಂತೂ ಹೆಚ್ಚಿದೆ. ಇದೀಗ ದೇಶದಲ್ಲಿ ಎರಡನೇ ಅತಿ ಹೆಚ್ಚು ಸಾವುಗಳನ್ನು ಹೊಂದಿರುವ ರಾಜ್ಯವಾಗಿದೆ ಕರ್ನಾಟಕ. ಕರ್ನಾಟಕದ ಒಟ್ಟಾರೆ ಪ್ರಕರಣದ ಸಾವಿನ ಪ್ರಮಾಣ (ಸಿಎಫ್‌ಆರ್) – ಸೋಂಕಿತರಲ್ಲಿ ಸಾವುಗಳು, ಇದು ರಾಷ್ಟ್ರೀಯ ಸರಾಸರಿ 1.1% ರ ವಿರುದ್ಧ 1% ಕ್ಕಿಂತ ಕಡಿಮೆ ಉಳಿದಿದೆ. ಮೇ 17 ರ ಹೊತ್ತಿಗೆ, ಕರ್ನಾಟಕದಲ್ಲಿ ಕೊವಿಡ್ ನಿಂದ ಮೃತಪಟ್ಟವರ ಸಂಖ್ಯೆ 22,313 ಆಗಿದೆ. ದೆಹಲಿಯಲ್ಲಿ 21,846 ಆಗಿದೆ. ಈ ರೀತಿ ಮುಂದುವರಿದರೆ ಕರ್ನಾಟಕದಲ್ಲಿ ಮೇ ಅತ್ಯಂತ ಮತ್ತಷ್ಟು ಗಂಭೀರ ಪರಿಸ್ಥಿತಿ ಎದುರಾಗಬಹುದು. ಇದುವರೆಗೆ ದಿನಕ್ಕೆ ಸರಾಸರಿ 400 ಸಾವುಗಳು ಸಂಭವಿಸಿವೆ. ಇದಕ್ಕೂ ಮುನ್ನ 14 ತಿಂಗಳ ಪೈಕಿ ಎಂಟು ತಿಂಗಳಲ್ಲಿ 400ರಷ್ಟೂ ಸಾವು ಸಂಭವಿಸಿರಲಿಲ್ಲ.
ಕರ್ನಾಟಕಕ್ಕಿಂತ ಮಹಾರಾಷ್ಟ್ರ ಮಾತ್ರ ಹೆಚ್ಚು ಸಾವುಗಳನ್ನು (82,000 ಕ್ಕಿಂತ ಹೆಚ್ಚು) ವರದಿ ಮಾಡಿದೆ. ಈ ಎರಡು ರಾಜ್ಯಗಳು ದೆಹಲಿಯೊಂದಿಗೆ ಭಾರತದಲ್ಲಿ ಇದುವರೆಗಿನ ಸಾವಿನ ಸಂಖ್ಯೆ 2.8 ಲಕ್ಷದ ಪೈಕಿ ಸುಮಾರು 46% ನಷ್ಟಿದೆ. ದೆಹಲಿ ಮತ್ತು ಮಹಾರಾಷ್ಟ್ರದ ಒಟ್ಟಾರೆ ಸಿಎಫ್ಆರ್ ಕರ್ನಾಟಕಕ್ಕಿಂತ ಹೆಚ್ಚಾಗಿದೆ.
ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೇರಳ ಮೂರನೇ ಸ್ಥಾನದಲ್ಲಿದ್ದು ಇಲ್ಲಿ ಸಾವಿನ ಸಂಖ್ಯೆ 7,000 ಕ್ಕಿಂತ ಕಡಿಮೆ. ಹೆಚ್ಚು ಕೋವಿಡ್ ಸಾವು ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಮತ್ತು ಉತ್ತರ ಪ್ರದೇಶ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನವನ್ನು ಪಡೆದಿವೆ.
ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಲಾ 1,000 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದ್ದರೆ, ಅಗ್ರ ಐದು ರಾಜ್ಯಗಳನ್ನು ಹೊರತುಪಡಿಸಿ ಕೇವಲ ಮೂರು ಮಾತ್ರ 10,000 ಕ್ಕೂ ಹೆಚ್ಚು ಸಾವುಗಳನ್ನು ಹೊಂದಿವೆ. ಇದಕ್ಕೆ ವಿರುದ್ಧವಾಗಿ, ಐದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು – ಅರುಣಾಚಲ ಪ್ರದೇಶ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿ 100 ಕ್ಕಿಂತ ಕಡಿಮೆ ಸಾವುಗಳನ್ನು ವರದಿ ಮಾಡಿದೆ.
17 ಜಿಲ್ಲೆಗಳಲ್ಲಿ, ಒಟ್ಟು ಸಾವು ಪ್ರಕರಣದ 43.6% ನಷ್ಟಿರುವ ಬೆಂಗಳೂರು, ಮೇ 17 ರ ವೇಳೆಗೆ 9,722 ಸಾವು ವರದಿ ಮಾಡಿದೆ, ನಂತರದ ಸ್ಥಾನಗಳಲ್ಲಿ ಮೈಸೂರು (1,410), ಬಳ್ಳಾರಿ (1,090), ದಕ್ಷಿಣ ಕನ್ನಡ (819) ಮತ್ತು ಧಾರವಾಡ (803) ಇವೆ. ಈ ಐದು ಜಿಲ್ಲೆಗಳಲ್ಲಿ ರಾಜ್ಯದ ಎಲ್ಲಾ ಸಾವುಗಳಲ್ಲಿ 62% ಕ್ಕಿಂತ ಹೆಚ್ಚು ವರದಿಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಈಗ 100 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ವರದಿಯಾಗಿದೆ. ನಾಲ್ಕು ಜಿಲ್ಲೆಗಳಾದ ಗದಗ, ಯಾದಗಿರಿ, ಕೊಡಗು ಮತ್ತು ಚಿತ್ರದುರ್ಗದಲ್ಲಿ 200 ಕ್ಕಿಂತ ಕಡಿಮೆ ಸಾವುಗಳು ವರದಿ ಆಗಿದೆ.
ಬೆಂಗಳೂರು ಅತಿ ಹೆಚ್ಚು ಸಾವು
ಏಪ್ರಿಲ್ 14 ರಿಂದ ಮೇ 12 ರವರೆಗಿನ ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು 28 ದಿನಗಳ ಕೊವಿಡ್ ಮರಣ ಪ್ರಮಾಣವು 82% ನಷ್ಟು ಚಲಿಸುವ ಬೆಳವಣಿಗೆಯ ದರವನ್ನು (ಎಂಜಿಆರ್) ದಾಖಲಿಸಿದೆ ಎಂದು ಜೀವನ್ ರಕ್ಷೆ ನಡೆಸಿದ ಧ್ಯಯನವು ಕಂಡು ಹಿಡಿದಿದೆ. ಆರು ದೊಡ್ಡ ಭಾರತೀಯ ನಗರಗಳಲ್ಲಿ ದಾಖಲಾದ 17,000 ಸಾವುಗಳಲ್ಲಿ ನಗರವು 24% ನಷ್ಟಿದೆ.
ಬೆಂಗಳೂರು ದೆಹಲಿಯ ಹಿಂದೆ ಇದ್ದು ದೆಹಲಿಯಲ್ಲಿ 50% ಸಾವುಗಳನ್ನು ದಾಖಲಿಸಿದೆ. ಎಂಜಿಆರ್ ವಿಷಯದಲ್ಲಿ, ರಾಷ್ಟ್ರ ರಾಜಧಾನಿ 76% ರೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇದರರ್ಥ ಸಾವಿನ ದ್ವಿಗುಣಗೊಳಿಸುವ ಅವಧಿ ಇತರ ಮಹಾ ನಗರಗಳಿಗಿಂತ ಕಡಿಮೆಯಾಗಿದೆ. ಸೋಂಕಿತ ಜನರನ್ನು ಮೊದಲೇ ಪತ್ತೆಹಚ್ಚಲು ಮತ್ತು ಅದಕ್ಕೆ ತಕ್ಕಂತೆ ಸೂಕ್ತವಾದ ವೈದ್ಯಕೀಯ ಸಹಾಯ ಒದಗಿಸಲು ಎರಡೂ ನಗರಗಳು ತುಲನಾತ್ಮಕವಾಗಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿವೆ ಎಂದು ಇದು ಸೂಚಿಸುತ್ತದೆ ಎಂದಿವೆ ಅಧ್ಯಯನ ವರದಿ.
12 ಮೇ 12 ಕ್ಕೆ ಕೊನೆಗೊಂಡ ವಾರದಲ್ಲಿ, ಆರು ನಗರಗಳಲ್ಲಿ 5,534 ಸಾವುಗಳು ಸಂಭವಿಸಿವೆ. ಇವುಗಳಲ್ಲಿ 35% ಬೆಂಗಳೂರಿನಲ್ಲಿದ್ದವು (1,958). ವಾರದಲ್ಲಿ ಸರಾಸರಿ ದೈನಂದಿನ ಸಾವುಗಳು: ದೆಹಲಿ (321), ಬೆಂಗಳೂರು (280), ಚೆನ್ನೈ (72), ಮುಂಬೈ (66), ಕೋಲ್ಕತಾ (34) ಮತ್ತು ಅಹಮದಾಬಾದ್ (18). ಪಾಸಿಟಿವ್ ಪ್ರಕರಣಗಳು, ಸಕ್ರಿಯ ಪ್ರಕರಣಗಳು ಮತ್ತು ಮರಣದ ಏಳು ದಿನಗಳ ಎಂಜಿಆರ್ ಅನ್ನು ಕಡಿಮೆ ಮಾಡಿದ ಏಕೈಕ ಮೆಗಾ ನಗರ ಮುಂಬೈ ಆಗಿದೆ.
ಇದನ್ನೂ ಓದಿ: ಕೊವಿಡ್ ಸಂಕಷ್ಟದಲ್ಲಿ ಸಹಾಯಕ್ಕೆ ನಿಂತ ಚಂದನವನದ ತಾರೆಯರು; ರಿಯಲ್ ಲೈಫ್ನಲ್ಲೂ ಇತರರಿಗೆ ಮಾದರಿ
Cyclone Yaas: ತೌಕ್ತೆ ಬೆನ್ನಲ್ಲೇ ಮತ್ತೊಂದು ಚಂಡಮಾರುತ; ಮೇ 23ರ ಸುಮಾರಿಗೆ ಏಳಲಿದೆ ಯಾಸ್
Published On - 10:44 am, Wed, 19 May 21