ಕೊವಿಡ್ ಸಂಕಷ್ಟದಲ್ಲಿ ಸಹಾಯಕ್ಕೆ ನಿಂತ ಚಂದನವನದ ತಾರೆಯರು; ರಿಯಲ್​ ಲೈಫ್​ನಲ್ಲೂ ಇತರರಿಗೆ ಮಾದರಿ

ಸ್ಯಾಂಡಲ್​ವುಡ್​ನ ಸ್ಟಾರ್​ಗಳು ನೊಂದವರ ನೆರವಿಗೆ ನಿಂತಿದ್ದಾರೆ. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​, ಆಸರೆ ಎನ್ನುವ ತಂಡದ ಜತೆ ತಮ್ಮ ಹುಡುಗರನ್ನ ಬಿಟ್ಟು ಊಟ ಹಂಚುತ್ತಿದ್ದಾರೆ. ಸದ್ಯ ನಾಗವಾರ, ಮಾನ್ಯತಾಟೆಕ್ ಪಾರ್ಕ್ ಬಳಿ ಶಿವಣ್ಣನ ತಂಡದವರು ಆಹಾರದ ಪೊಟ್ಟಣ ಹಂಚುತ್ತಿದ್ದಾರೆ.

ಕೊವಿಡ್ ಸಂಕಷ್ಟದಲ್ಲಿ ಸಹಾಯಕ್ಕೆ ನಿಂತ ಚಂದನವನದ ತಾರೆಯರು; ರಿಯಲ್​ ಲೈಫ್​ನಲ್ಲೂ ಇತರರಿಗೆ ಮಾದರಿ
ಕಾರ್ಮಿಕರಿಗೆ ರೇಶನ್ ಕಿಟ್ ವಿತರಿಸಿದ ನಟ ಉಪೇಂದ್ರ
Follow us
preethi shettigar
|

Updated on: May 19, 2021 | 10:09 AM

ಕೊರೊನಾ ಎರಡನೇ ಅಲೆಯಿಂದಾಗಿ ಕರುನಾಡೇ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಜೀವವನ್ನೇ ತೆಗೆದು ಹಾಕುತ್ತಿರುವ ಸೊಂಕು ಒಂದು ಕಡೆಯಾದರೆ ಬದುಕನ್ನೇ ಸ್ತಬ್ಧ ಮಾಡಿರುವ ಲಾಕ್​ಡೌನ್ ಮತ್ತೊಂದು ಕಡೆ. ಹೀಗಾಗಿ ಜನರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇದೀಗ, ನೊಂದವರ ನೆರವಿಗಾಗಿ ಕಲಾವಿದರು ಕೈ ಜೋಡಿಸಿದ್ದು, ಸಿನಿಮಾಗಳಲ್ಲಿ ಮಾತ್ರ ಹೀರೋಗಳಲ್ಲ. ನಿಜ ಜೀವನದಲ್ಲೂ ಇತರರಿಗೆ ಮಾದರಿ ಎನ್ನುವಂತೆ ನಡೆದುಕೊಂಡಿದ್ದಾರೆ. ಸದ್ಯ ಚಂದನವನದ ತಾರೆಯರ ನೆರವಿನ ಕೈಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್​ವುಡ್​ನ ಸ್ಟಾರ್​ಗಳು ನೊಂದವರ ನೆರವಿಗೆ ನಿಂತಿದ್ದಾರೆ. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​, ಆಸರೆ ಎನ್ನುವ ತಂಡದ ಜತೆ ತಮ್ಮ ಹುಡುಗರನ್ನ ಬಿಟ್ಟು ಊಟ ಹಂಚುತ್ತಿದ್ದಾರೆ. ಸದ್ಯ ನಾಗವಾರ, ಮಾನ್ಯತಾಟೆಕ್ ಪಾರ್ಕ್ ಬಳಿ ಶಿವಣ್ಣನ ತಂಡದವರು ಆಹಾರದ ಪೊಟ್ಟಣ ಹಂಚುತ್ತಿದ್ದಾರೆ.

ಇನ್ನು ಕಿಚ್ಚ ಸುದೀಪ್ ಮೊದಲು ಮಾನವನಾಗು ಎನ್ನುವ ಮಾತಿನಂತೆ ಕೈ ತುತ್ತು ನೀಡುತ್ತಿದ್ದಾರೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬೆಳಗ್ಗೆ ಕಿಚ್ಚನ ಕೈ ತುತ್ತು ಎಂಬ ವಾಹನ ಓಡಾಡುತ್ತಿರುತ್ತದೆ. ಅಗತ್ಯ ಔಷಧ, ಊಟ ಸೇರಿದಂತೆ ಹಲವು ರೀತಿಯ ವ್ಯವಸ್ಥೆಯನ್ನು ಕಿಚ್ಚನ ಈ ತಂಡ ಮಾಡುತ್ತಿದೆ.

ರಿಯಲ್​ ಸ್ಟಾರ್ ಉಪೇಂದ್ರ ಕೂಡ ಸಿನಿಮಾ ರಂಗದ ಕಾರ್ಮಿಕರಿಗೆ ರೇಶನ್ ಕಿಟ್ ವಿತರಿಸುತ್ತಿದ್ದಾರೆ. ಜತೆಗೆ,  ರೈತರ ಬೆಳೆಗಳನ್ನ ಖುದ್ದು ಖರೀದಿಸಿ, ಜನರಿಗೆ ಹಂಚುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ನಟ ಭುವನ್, ನಟಿ ರಾಗಿಣಿ, ಸಂಜನಾ, ಶುಭಾ ಪೂಂಜಾ, ಹರ್ಷಿಕಾ ಜತೆ  ಹಲವು ಕಲಾವಿದರು ನೆರವಿನ ಹಸ್ತ ಚಾಚಿದ್ದಾರೆ.

ragini help

ನಟಿ ರಾಗಿಣಿ ಫುಡ್ ಕಿಟ್ ವಿತರಿಸುತ್ತಿರುವುದು

ಒಟ್ಟಿನಲ್ಲಿ ರೀಲ್​ನಲ್ಲಿ ಮಾತ್ರವಲ್ಲ ರಿಯಲ್​ ಲೈಫ್​​ನಲ್ಲಿ ಹಲವು ಸ್ಟಾರ್​​ಗಳು ನೊಂದವರಿಗೆ ನೆರವಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿ ದೇವರುಗಳ ಜತೆಗೆ ನಿಂತಿದ್ದಾರೆ. ನಿಜಕ್ಕೂ ಸಿನಿಮಾ ಸ್ಟಾರ್​ಗಳ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು.

ಇದನ್ನೂ ಓದಿ:

‘ಕಿರಿಕ್​ ಪಾರ್ಟಿ ಹಿಂದಿ ರಿಮೇಕ್​ನಲ್ಲಿ ನಾನು ನಟಿಸಲ್ಲ’; ರಶ್ಮಿಕಾ ಖಡಕ್​ ನಿರ್ಧಾರಕ್ಕಿದೆ ಬಲವಾದ ಕಾರಣ

ಬಿಗ್​ ಬಾಸ್​ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್​ ಕಿಟ್​ ನೀಡಿದ ನಟಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?