ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 21,257 ಹೊಸ ಕೊವಿಡ್ -19 (Covid 19) ಪ್ರಕರಣಗಳು ಪತ್ತೆಯಾಗಿದ್ದು ಇದು ಗುರುವಾರದ ಅಂಕಿ ಅಂಶಕ್ಕಿಂತ ಕೇವಲ ಶೇ 5 ಕಡಿಮೆ ಆಗಿದೆ. ಅದೇ ಅವಧಿಯಲ್ಲಿ 271 ಸಾವು ವರದಿ ಆಗಿದೆ. ಭಾರತದಲ್ಲಿ ಸಕ್ರಿಯ ಕೊವಿಡ್ -19 ಪ್ರಕರಣಗಳು ಒಟ್ಟು ಸೋಂಕು ಪ್ರಕರಣಗಳ ಶೇಕಡಾ 0.71 ರಷ್ಟಿದೆ, ಮಾರ್ಚ್ 2020 ರ ನಂತರ ಅತಿ ಕಡಿಮೆ-ಪ್ರಸ್ತುತ ಪ್ರಕರಣಗಳ ಸಂಖ್ಯೆ 2,40,221 ಆಗಿದೆ, ಇದು 205 ದಿನಗಳಲ್ಲಿ ಕಡಿಮೆ. ರಾಷ್ಟ್ರೀಯ ಕೊವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.96 ರಷ್ಟಿದೆ, ಇದು ಮಾರ್ಚ್ 2020 ರಿಂದ ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 24,963 ಮಂದಿ ಚೇತರಿಸಿಕೊಂಡಿದ್ದು ಭಾರತದಲ್ಲಿ ಒಟ್ಟು ಚೇತರಿಕೆಯ ಸಂಖ್ಯೆಯನ್ನು 3,32,25,221 ಕ್ಕೆ ತಲುಪಿದೆ.
ದೈನಂದಿನ ಧನಾತ್ಮಕ ದರ- 1.53 ಶೇಕಡಾ ಆಗಿದ್ದು ಕಳೆದ 39 ದಿನಗಳಲ್ಲಿ ಶೇಕಡಾ 3 ಕ್ಕಿಂತ ಕಡಿಮೆ. ಸಾಪ್ತಾಹಿಕ ಧನಾತ್ಮಕ ದರವು ಭಾರತದಲ್ಲಿ ಶೇಕಡಾ 1.64 ರಷ್ಟಿದೆ. ಭಾರತದಲ್ಲಿ ಇದುವರೆಗೆ 93.17 ಕೋಟಿಗೂ ಹೆಚ್ಚು ಕೊವಿಡ್ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಭಾರತದ ವಯಸ್ಕ ಜನಸಂಖ್ಯೆಯ 71 ಪ್ರತಿಶತದಷ್ಟು ಜನರು ಕನಿಷ್ಠ ಒಂದು ಡೋಸ್ ಕೊವಿಡ್ -19 ಲಸಿಕೆಯನ್ನು ಪಡೆದಿದ್ದಾರೆ ಎಂದು ಸರ್ಕಾರ ಹೇಳಿದೆ, ಆದರೆ 27 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.
ಕೇರಳದಲ್ಲಿ 12,288 ಹೊಸ ಕೊವಿಡ್ -19 ಸೋಂಕುಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 1,18,744 ಕ್ಕೆ ತಲುಪಿದೆ. ಕಳೆದ ವಾರ ಭಾರತದ ಶೇ 56 ರಷ್ಟು ಕೊವಿಡ್ ಪ್ರಕರಣಗಳು ಕೇರಳದಿಂದ ವರದಿಯಾಗಿವೆ ಎಂದು ಕೇಂದ್ರ ಹೇಳಿದೆ.
India reports 21,257 fresh infections in the last 24 hours, active caseload at 2,40,221; lowest in 205 days: Ministry of Health and Family Welfare pic.twitter.com/QrQpMyee8N
— ANI (@ANI) October 8, 2021
ನಾಲ್ಕು ಸದಸ್ಯರ ಕೇಂದ್ರ ತಂಡವು ಮಿಜೋರಾಂನಲ್ಲಿ ಕೊವಿಡ್ -19 ಪರಿಸ್ಥಿತಿ ಪರಿಶೀಲಿಸಲು ಮಧ್ಯೆ ಪ್ರವೇಶಿಸಿದೆ. ಮಿಜೋರಾಂ ಬುಧವಾರ ಒಂದು ಲಕ್ಷ ಕೊವಿಡ್ ಪ್ರಕರಣಗಳನ್ನು ದಾಟಿದೆ. ಐದು ರಾಜ್ಯಗಳಾದ ಮಿಜೋರಾಂ, ಕೇರಳ, ಸಿಕ್ಕಿಂ, ಮಣಿಪುರ ಮತ್ತು ಮೇಘಾಲಯ ವಾರಕ್ಕೆ ಐದು ಶೇಕಡಾಕ್ಕಿಂತ ಹೆಚ್ಚಿನ ಧನಾತ್ಮಕ ದರವನ್ನು ವರದಿ ಮಾಡುತ್ತಿವೆ.
ಪಶ್ಚಿಮ ಬಂಗಾಳದಲ್ಲಿ 13 ಹೊಸ ಕೊವಿಡ್ ಸಾವು ವರದಿ ಆಗಿದ್ದು ಸಾವಿನ ಸಂಖ್ಯೆಯನ್ನು 18,876 ಕ್ಕೆ ಏರಿದೆ.ಇಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 15,74,017ಕ್ಕೆ ತಲುಪಿದೆ. ದೆಹಲಿಯಲ್ಲಿ 44 ಕೊವಿಡ್ -19 ಪ್ರಕರಣಗಳು ಮತ್ತು ರೋಗದಿಂದ ದೈನಂದಿನ ಶೂನ್ಯ ಸಾವುಗಳು ದಾಖಲಾಗಿವೆ, ಆದರೆ ಧನಾತ್ಮಕ ದರವು ಶೇಕಡಾ 0.07 ರಷ್ಟು ದಾಖಲಾಗಿದೆ.
ಇದನ್ನೂ ಓದಿ: Covid Vaccine: ಸದ್ಯದಲ್ಲೇ ಭಾರತದಲ್ಲಿ 100 ಕೋಟಿ ಕೊವಿಡ್ ಲಸಿಕೆ ಗುರಿ ಪೂರ್ತಿಯಾಗಲಿದೆ; ಪ್ರಧಾನಿ ಮೋದಿ ವಿಶ್ವಾಸ
Published On - 10:44 am, Fri, 8 October 21