Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19: ಭಾರತದಲ್ಲಿ ಕೊರೊನಾ ಮತ್ತಷ್ಟು ಇಳಿಕೆ; ಒಂದೇ ದಿನ 25,920 ಹೊಸ ಪ್ರಕರಣಗಳು ದಾಖಲು, 492 ಜನರ ಸಾವು

India Covid Update: ದೇಶದಲ್ಲಿ ಶುಕ್ರವಾರ ಕೊರೊನಾ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆಯಾಗಿದೆ. ದೇಶದಲ್ಲಿ ಲಸಿಕಾ ಅಭಿಯಾನವು ಚುರುಕಿನಿಂದ ನಡೆಯುತ್ತಿದ್ದು, ಇದುವರೆಗೆ 174.64 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

Covid 19: ಭಾರತದಲ್ಲಿ ಕೊರೊನಾ ಮತ್ತಷ್ಟು ಇಳಿಕೆ; ಒಂದೇ ದಿನ 25,920 ಹೊಸ ಪ್ರಕರಣಗಳು ದಾಖಲು, 492 ಜನರ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Feb 18, 2022 | 9:54 AM

ಭಾರತದಲ್ಲಿ ಕೊರೊನಾ ಪ್ರಕರಣಗಳಲ್ಲಿ (Corona Cases) ಇಳಿಕೆ ಕಂಡುಬರುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 25,920 ಹೊಸ ಪ್ರಕರಣಗಳು (New Corona Cases) ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರಕ್ಕಿಂತ ಇಂದು (ಫೆ.18) 4,837 ಕಡಿಮೆ ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಇಂದು 492 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. 66,254 ಜನರು ಒಂದು ದಿನದ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಚೇತರಿಕೆ ಪ್ರಮಾಣ ಶೇ.98.12ರಷ್ಟಿದೆ. ಪ್ರಸ್ತುತ ದೇಶದಲ್ಲಿ 2,92,092 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ದರ 2.07% ಇದೆ. ದೇಶದಲ್ಲಿ ಇದುವರೆಗೆ ಒಟ್ಟು 4,27,80,235 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 5,10,905 ಜನರು ಸೋಂಕಿನಿಂದ ನಿಧನ ಹೊಂದಿದ್ದಾರೆ. ಲಸಿಕಾ ಅಭಿಯಾನದ ಅಡಿಯಲ್ಲಿ 174.64 ಕೋಟಿ ಡೋಸ್ ಲಸಿಕೆಯನ್ನು ಈವರೆಗೆ (Vaccination) ನೀಡಲಾಗಿದೆ.

ಈ ಕುರಿತು ಎಎನ್​ಐ ಹಂಚಿಕೊಂಡಿರುವ ಮಾಹಿತಿ:

ಭಾರತದಲ್ಲಿ ಒಮಿಕ್ರಾನ್ ರೂಪಾಂತರ ಕಾಣಿಸಿಕೊಂಡಾಗ ಕೇಂದ್ರವು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿತ್ತು. ಇದರಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಗೆ ಅನುಗುಣವಾಗಿ ಕೊರೊನಾ ನಿಯಮಾವಳಿಗಳನ್ನು ರೂಪಿಸಿದ್ದವು. ಇದೀಗ ದೇಶದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ನಿಯಮಗಳನ್ನು ಸಡಿಲಿಸಿ, ಮತ್ತೆ ಬದಲಾವಣೆ ಮಾಡುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಬುಧವಾರ ಪತ್ರ ಬರೆದಿದ್ದರು.

ಕರ್ನಾಟಕದಲ್ಲಿ ಗುರುವಾರ 1,579 ಜನರಿಗೆ ಕೊರೊನಾ ದೃಢ:

ಕರ್ನಾಟಕ ರಾಜ್ಯದಲ್ಲಿ ಗುರುವಾರ (ಫೆಬ್ರವರಿ 17) ಹೊಸದಾಗಿ 1,579 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಈವರೆಗೆ 39,33,115 ಜನರಿಗೆ ಕೊರೊನಾ ದೃಢಪಟ್ಟಂತಾಗಿದಗ್ದು, ಸೋಂಕಿತರ ಪೈಕಿ 38,73,580 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಗುರುವಾರ ಕೊರೊನಾ ಸೋಂಕಿನಿಂದ 23 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕೊವಿಡ್ ನಿಯಂತ್ರಣಕ್ಕೆ ವಿಧಿಸಿದ್ದ ನಿಷೇಧಾಜ್ಞೆ ಮುಂದುವರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಫೆ.28ರವರೆಗೂ ನಿಷೇಧಾಜ್ಞೆ ಮುಂದುವರಿಸಿ ಆದೇಶ ನೀಡಲಾಗಿದೆ. ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್ ಈ ಬಗ್ಗೆ ಆದೇಶ ನೀಡಿದ್ದಾರೆ. ಕೊವಿಡ್​ ನಿಬಂಧನೆಗಳು ಯಥಾವತ್​ ಮುಂದುವರಿಯಲಿವೆ. ಯಾವುದೇ ರೀತಿಯ ಧರಣಿ, ಮೆರವಣಿಗೆಗೆ ಅವಕಾಶವಿಲ್ಲ. ನಿಬಂಧನೆಗಳನ್ನ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಎಂದು ಹೇಳಲಾಗಿದೆ.

ಇದನ್ನೂ ಓದಿ:

‘ಸೂರ್ಯನ ಕೆಳಗೂ ಕತ್ತಲೆಯಿದೆ’; ಹೆದ್ದಾರಿಯ ಕುರಿತು ತಪ್ಪು ಮಾಹಿತಿ ಹಂಚಿಕೊಂಡ ತೇಜಸ್ವಿ ಸೂರ್ಯ ವಿರುದ್ಧ ಅಖಿಲೇಶ್ ಯಾದವ್ ವ್ಯಂಗ್ಯ

ಬಾಲಭವನದಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಹಿಸಲು ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ, ನೇರ ಸಂದರ್ಶನ

Published On - 9:51 am, Fri, 18 February 22

ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು