Coronavirus cases in India: ದೇಶದಲ್ಲಿ 34,973 ಹೊಸ ಕೊವಿಡ್ ಪ್ರಕರಣ ಪತ್ತೆ, 260 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Sep 10, 2021 | 10:47 AM

Covid 19: ಕೊರೊನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಹಾರಾಷ್ಟ್ರವು ಸತತ ಎರಡನೇ ವರ್ಷವೂ ಅದ್ದೂರಿಯಲ್ಲದ ಗಣೇಶ ಚತುರ್ಥಿ ಆಚರಣೆಗೆ ಸಾಕ್ಷಿಯಾಗುತ್ತಿದೆ. ಮುಂಬೈನಲ್ಲಿ ನಗರ ಪೊಲೀಸರು ಸೆಪ್ಟೆಂಬರ್ 10 ಮತ್ತು 19 ರ ನಡುವೆ ನಾಲ್ಕಕ್ಕಿಂತ ಹೆಚ್ಚು ಜನರ ಕೂಟಗಳು ಮತ್ತು ಮೆರವಣಿಗೆಗಳನ್ನು ನಿಷೇಧಿಸಿದ್ದಾರೆ.

Coronavirus cases in India: ದೇಶದಲ್ಲಿ 34,973 ಹೊಸ ಕೊವಿಡ್ ಪ್ರಕರಣ ಪತ್ತೆ, 260 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ 24 ಗಂಟೆಗಳಲ್ಲಿ 34,973 ಕೊರೊನಾವೈರಸ್ ಪ್ರಕರಣಗಳು (Coronavirus) ಮತ್ತು 260 ಸಾವುಗಳು ವರದಿಯಾಗಿವೆ. ಒಟ್ಟು ಹೊಸ ಪ್ರಕರಣಗಳ ಪೈಕಿ ಕೇರಳದಲ್ಲಿ 26,200 ಹೊಸ ಕೊವಿಡ್ ಪ್ರಕರಣಗಳು ದಾಖಲೆಯಾಗಿದೆ. ಮಹಾರಾಷ್ಟ್ರದಲ್ಲಿ ನಿನ್ನೆಯಿಂದ 4,912 ಪ್ರಕರಣಗಳು ದಾಖಲಾಗಿವೆ. ದೇಶದಲ್ಲೀಗ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 3,31,74,954 ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು 3,90,646 ಕ್ಕೆ ಇಳಿದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅದೇ ವೇಳೆ ಸಾವಿನ ಸಂಖ್ಯೆ 4,42,009 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿನ ಶೇಕಡಾ 1.18 ರಷ್ಟಿದ್ದು, ರಾಷ್ಟ್ರೀಯ ಕೊವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.49 ರಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಏತನ್ಮಧ್ಯೆ, ಕೊರೊನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಹಾರಾಷ್ಟ್ರವು ಸತತ ಎರಡನೇ ವರ್ಷವೂ ಅದ್ದೂರಿಯಲ್ಲದ ಗಣೇಶ ಚತುರ್ಥಿ ಆಚರಣೆಗೆ ಸಾಕ್ಷಿಯಾಗುತ್ತಿದೆ. ಮುಂಬೈನಲ್ಲಿ ನಗರ ಪೊಲೀಸರು ಸೆಪ್ಟೆಂಬರ್ 10 ಮತ್ತು 19 ರ ನಡುವೆ ನಾಲ್ಕಕ್ಕಿಂತ ಹೆಚ್ಚು ಜನರ ಕೂಟಗಳು ಮತ್ತು ಮೆರವಣಿಗೆಗಳನ್ನು ನಿಷೇಧಿಸಿದ್ದಾರೆ. ಗಣೇಶ ಪಂಡಲ್‌ಗಳಿಗೆ ಭೇಟಿ ನೀಡುವ ಬದಲು ಭಕ್ತರಿಗೆ ವರ್ಚುವಲ್ ದರ್ಶನಗಳಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.


ಶಾಲೆಗಳು ಮತ್ತೆ ತೆರೆಯುತ್ತಿರುವ ಹೊತ್ತಲ್ಲಿ ಸೋಂಕಿನ ಬೆದರಿಕೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ನೀತಿ ಆಯೋಗದ ಸದಸ್ಯ ಸದಸ್ಯ ಆರೋಗ್ಯ ವಿ.ಕೆ ಪೌಲ್ “ಮಕ್ಕಳಿಗೆ ಲಸಿಕೆ ಹಾಕುವುದರಿಂದ ಶಾಲೆಗಳನ್ನು ಪುನಃ ತೆರೆಯುವ ಸ್ಥಿತಿಯಲ್ಲ. ಈ ಮಾನದಂಡವು ಪ್ರಪಂಚದಲ್ಲಿ ಎಲ್ಲಿಯೂ ಸ್ವೀಕಾರಾರ್ಹವಲ್ಲ, ಆದಾಗ್ಯೂ, ಸಿಬ್ಬಂದಿಗಳ ವ್ಯಾಕ್ಸಿನೇಷನ್ ಅಪೇಕ್ಷಣೀಯವಾಗಿದೆ ಎಂದಿದ್ದಾರೆ.

ಥಾಣೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,53,920 ಕ್ಕೆ ಏರಿಕೆ
286 ಹೊಸ ಕೊರೊನಾವೈರಸ್ ಪ್ರಕರಣಗಳ ಸೇರ್ಪಡೆಯೊಂದಿಗೆ, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,53,920 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಇನ್ನೂ ಮೂವರು ರೋಗಿಗಳು ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 11,333 ಕ್ಕೆ ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ, ಕೊವಿಡ್ -19 ಪ್ರಕರಣಗಳ ಸಂಖ್ಯೆ 1,34,992 ಆಗಿದ್ದು, ಸಾವಿನ ಸಂಖ್ಯೆ 3,294 ಎಂದು ಮತ್ತೊಂದು ಅಧಿಕಾರಿ ತಿಳಿಸಿದ್ದಾರೆ.

ಗಣೇಶ ಚತುರ್ಥಿ ಆಚರಣೆ ವೇಳೆ ಕೊವಿಡ್ -19 ನಿಯಮಗಳನ್ನು ಅನುಸರಿಸಿ: ರಾಷ್ಟ್ರಪತಿ


ಗಣೇಶ ಚತುರ್ಥಿಯ ಸಂಭ್ರಮ ಶುಕ್ರವಾರದಿಂದ ಆರಂಭವಾಗುತ್ತಿದ್ದಂತೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಜನರಿಗೆ ಶುಭ ಹಾರೈಸಿದರು ಮತ್ತು ದೇಶಾದ್ಯಂತ ಜಾರಿಗೆ ತರಲಾದ ಕೊವಿಡ್ -19 ಪ್ರೋಟೋಕಾಲ್‌ಗಳನ್ನು ಅನುಸರಿಸುವಂತೆ ಪ್ರತಿಯೊಬ್ಬರನ್ನು ಕೋರಿದರು. “ಗಣಪತಿ ಬಪ್ಪಾ ಮೋರ್ ಯಾ! ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು. ಕೊವಿಡ್ -19 ವಿರುದ್ಧ ವಿಘ್ನನಾಶಕ ಗಣೇಶ ನಮ್ಮ ಪ್ರಯತ್ನಗಳನ್ನು ಯಶಸ್ವಿಗೊಳಿಸಲಿ ಮತ್ತು ಎಲ್ಲರನ್ನೂ ಸಂತೋಷ ಮತ್ತು ಶಾಂತಿಯಿಂದ ಆಶೀರ್ವದಿಸಲಿ ಎಂದು ನಾನು ಬಯಸುತ್ತೇನೆ. ಬನ್ನಿ, ಹಬ್ಬವನ್ನು ಆಚರಿಸುವಾಗ ನಾವೆಲ್ಲರೂ ಕೊವಿಡ್ ನಿಯಮಗಳನ್ನು ಅನುಸರಿಸೋಣ” ಎಂದು ಎಂದು ರಾಷ್ಟ್ರಪತಿ ಕೋವಿಂದ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

10 ದಿನಗಳ ಗಣೇಶ ಚತುರ್ಥಿ ಉತ್ಸವವನ್ನು ಕೊವಿಡ್ -19 ನಿರ್ಬಂಧಗಳು ಮತ್ತು ಪ್ರೋಟೋಕಾಲ್‌ಗಳ ನಡುವೆ ಆಚರಿಸಲಾಗುತ್ತದೆ.

 ಇದನ್ನೂ ಓದಿ:  ಭಾರತದ ಕೊವಿಡ್ -19 ಪ್ರಕರಣಗಳಲ್ಲಿ ಶೇ 68.59ರಷ್ಟು ಪ್ರಕರಣ ಕೇರಳದಲ್ಲಿದೆ: ಕೇಂದ್ರ ಆರೋಗ್ಯ ಸಚಿವಾಲಯ

ಇದನ್ನೂ ಓದಿ: ಕೊವಿಡ್ ಸಾವು ನಿಯಂತ್ರಿಸುವಲ್ಲಿ ಲಸಿಕೆಯ ಮೊದಲ ಡೋಸ್ ಶೇ 96.6 ಮತ್ತು 2ನೇ ಡೋಸ್ ಶೇ 97.5 ಪರಿಣಾಮಕಾರಿ: ಕೇಂದ್ರ

(India reports 34,973 new coronavirus cases Active cases in country decline to 3,90,646)

Published On - 10:40 am, Fri, 10 September 21