AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಎಂಕೆ ಸರ್ಕಾರಕ್ಕೆ ಗಣೇಶನ ಹಬ್ಬದ ಗಿಫ್ಟ್​​ ಕೊಟ್ಟ ಕೇಂದ್ರ; ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥ ತಮಿಳುನಾಡಿಗೆ ಹೊಸ ಗವರ್ನರ್​

R.N. Ravi, Governor of Tamil Nadu: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರಕ್ಕೆ ಕೇಂದ್ರ ಸರ್ಕಾರ ಗಣೇಶನ ಹಬ್ಬದ ಗಿಫ್ಟ್​​ ಕೊಟ್ಟಿದೆ. ನಾಗಾಲ್ಯಾಂಡ್​​ ಗವರ್ನರ್​, ಮಾಜಿ ಐಪಿಎಸ್, ಕೇಂದ್ರದ ಮಧ್ಯಸ್ಥಿಕೆದಾರ ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥ ಆರ್​ ಎನ್​ ರವಿ ತಮಿಳುನಾಡಿಗೆ ಹೊಸ ಗವರ್ನರ್​ ಆಗಿ ನೇಮಕಗೊಂಡಿದ್ದಾರೆ.

ಡಿಎಂಕೆ ಸರ್ಕಾರಕ್ಕೆ ಗಣೇಶನ ಹಬ್ಬದ ಗಿಫ್ಟ್​​ ಕೊಟ್ಟ ಕೇಂದ್ರ; ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥ ತಮಿಳುನಾಡಿಗೆ ಹೊಸ ಗವರ್ನರ್​
ಡಿಎಂಕೆ ಸರ್ಕಾರಕ್ಕೆ ಗಣೇಶನ ಹಬ್ಬದ ಗಿಫ್ಟ್​​ ಕೊಟ್ಟ ಕೇಂದ್ರ; ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥ ತಮಿಳುನಾಡಿಗೆ ಹೊಸ ಗವರ್ನರ್​
TV9 Web
| Updated By: ಸಾಧು ಶ್ರೀನಾಥ್​|

Updated on:Sep 10, 2021 | 9:41 AM

Share

ನವದೆಹಲಿ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರಕ್ಕೆ ಕೇಂದ್ರ ಸರ್ಕಾರ ಗಣೇಶನ ಹಬ್ಬದ ಗಿಫ್ಟ್​​ ಕೊಟ್ಟಿದೆ. ನಾಗಾಲ್ಯಾಂಡ್​​ ಗವರ್ನರ್​, ಮಾಜಿ ಐಪಿಎಸ್, ಕೇಂದ್ರದ ಮಧ್ಯಸ್ಥಿಕೆದಾರ ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥ ಆರ್​ ಎನ್​ ರವಿ ತಮಿಳುನಾಡಿಗೆ ಹೊಸ ಗವರ್ನರ್​ ಆಗಿ ನೇಮಕಗೊಂಡಿದ್ದಾರೆ.

ಆಡಳಿತಾರೂಢ ಡಿಎಂಕೆ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಆಗಾಗ ತಿಕ್ಕಾಟ ಜೋರಾಗಿ ಕೇಳಿಬರುವ ಹಿನ್ನೆಲೆಯಲ್ಲಿ ಅತ್ಯುನ್ನತ ಮಾಜಿ ಪೊಲೀಸ್​ ಅಧಿಕಾರಿಯನ್ನು ಅದರಲ್ಲೂ ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥನನ್ನು (R.N. Ravi ) ತಮಿಳುನಾಡಿಗೆ ಹೊಸ ಗವರ್ನರ್​ ಆಗಿ ನೇಮಕ ಮಾಡಿರುವುದು ಕುತೂಹಲಕಾರಿಯಾಗಿದೆ.

ಗುರುವಾರ ರಾತ್ರಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ (President Ram Nath Kovind) ಈ ಸಂಬಂಧ ವರ್ಗಾವಣೆ ಆಜ್ಞಗೆ ಸಹಿ ಹಾಕಿದ್ದಾರೆ. ಇದಲ್ಲದೆ ಇನ್ನೂ ಕೆಲ ರಾಜ್ಯಪಾಲರುಗಳನ್ನು ಸಹ ವರ್ಗ/ ಆಯ್ಕೆ ಮಾಡಲಾಗಿದೆ.

ಈ ಮಧ್ಯೆ, ಉತ್ತರಾಖಂಡದ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ( Baby Rani Maurya) ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಮುಂದಿನ ವರ್ಷ ಉತ್ತರಾಖಂಡದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು ಬೇಬಿ ರಾಣಿ ಮೌರ್ಯ ಸಕ್ರಿಯ ರಾಜಕೀಯಕ್ಕೆ ಮರಳಲು ಉದ್ದೇಶಿಸಿದ್ದು, ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಿತರೆ ಬದಲಾವಣೆಗಳಲ್ಲಿ ಪಂಜಾಬ್​ ರಾಜ್ಯಪಾಲರಾಗಿಯೂ ಹೆಚ್ಚುವರಿ ಜವಾಬ್ದಾರಿ ಹೊತ್ತಿದ್ದ ತಮಿಳುನಾಡು ಹಾಲಿ ಗವರ್ನರ್​ ಬನ್ವರಿಲಾಲ್ ಪುರೋಹಿತ್ (Banwarilal Purohit) ಅವರನ್ನು ಪೂರ್ಣ ಪ್ರಮಾಣದಲ್ಲಿ ಪಂಜಾಬ್​ ರಾಜ್ಯಪಾಲರಾಗಿ ನೇಮಿಸಲಾಗಿದೆ.

Also read: 3 ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ ತಮಿಳುನಾಡು ವಿಧಾನಸಭೆ; ಹೊರನಡೆದ ಬಿಜೆಪಿ, ಎಐಎಡಿಎಂಕೆ ಶಾಸಕರು

(former IB chief Governor of Nagaland R.N. Ravi transferred as the next Governor of Tamil Nadu)

Published On - 9:03 am, Fri, 10 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ