ಕಾಶಿ ವಿಶ್ವನಾಥ ಮಂದಿರ ಮತ್ತು ಗ್ಯಾನ್ವಪಿ ಮಸೀದಿ ಸ್ಥಳದ ಸರ್ವೆ ನಡೆಸಲು ತಡೆಯಾಜ್ಞೆ ನೀಡಿದ ಅಲಹಾಬಾದ್ ಹೈಕೋರ್ಟ್
ಮಸೀದಿಯ ಜಾಗ ಸಂಪೂರ್ಣವಾಗಿ ಕಾಶೀ ವಿಶ್ವನಾಥ ದೇವಾಲಯಕ್ಕೆ ಸೇರಿದ್ದೆಂದು ವಾರಾಣಾಸಿಯ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಪ್ರಯಾಗ್ರಾಜ್: ಕಾಶಿ ವಿಶ್ವನಾಥ ಮಂದಿರ ಮತ್ತು ಗ್ಯಾನ್ವಪಿ ಮಸೀದಿಯ ಇರುವ ಸ್ಥಳದ ಸಮಗ್ರ ಸರ್ವೇ ನಡೆಸುವಂತೆ ಏಪ್ರಿಲ್ 8, 2021ರಂದು ವಾರಣಾಸಿ ಕೋರ್ಟ್ ನೀಡಿದ್ದ ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ. ಅಲ್ಲದೇ ವಿಶ್ವನಾಥ ಮಂದಿರ ಮತ್ತು ಗ್ಯಾನ್ವಪಿ ಮಸೀದಿ ವ್ಯಾಜ್ಯಕ್ಕೆ ಸಂಬಂಧಿಸಿ ತಮ್ಮ ನಿಲುವನ್ನು ತಿಳಿಸುವಂತೆ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಸೂಚನೆ ನೀಡಿದೆ.
ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಸಹ ಹಲವು ವಿಚಾರಣೆಗಳನ್ನು ನಡೆಸುತ್ತಿದೆ. ಇದೇ ಕಾರಣದಿಂದ ಈವರೆಗೂ ಹೈಕೋರ್ಟ್ ಯಾವುದೇ ತೀರ್ಪು ನೀಡಿಲ್ಲ. ಹೀಗಾಗಿ ಹೈಕೋರ್ಟ್ ಈ ವಿಷಯದ ಬಗ್ಗೆ ತೀರ್ಮಾನಿಸುವವರೆಗೂ ವಾರಣಾಸಿ ನ್ಯಾಯಾಲಯವು ಯಾವುದೇ ಆದೇಶ ನೀಡಬಾರದು ಎಂದು ಸಹ ಅಲಹಾಬಾದ್ ಹೈಕೋರ್ಟ್ ಸೂಚಿಸಿದೆ. ಅಲಹಾಬಾದ್ ಹೈಕೋರ್ಟ್ ಪ್ರಕಟಿಸಿರುವ ಆದೇಶ ಒಟ್ಟು 26 ಪುಟಗಳನ್ನು ಒಳಗೊಂಡಿದೆ.
ಕಾಶೀ ವಿಶ್ವನಾಥ ದೇವಾಲಯದ ಪಕ್ಕದಲ್ಲೇ ಇರುವ ಗ್ಯಾನವಪಿ ಮಸೀದಿಯನ್ನು ತೆರವುಗೊಳಿಸಬೇಕು. ಮಸೀದಿಯ ಜಾಗ ಸಂಪೂರ್ಣವಾಗಿ ಕಾಶೀ ವಿಶ್ವನಾಥ ದೇವಾಲಯಕ್ಕೆ ಸೇರಿದ್ದೆಂದು ವಾರಾಣಾಸಿಯ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ಆಧಾರದ ಮೇಲೆ ವಾರಾಣಾಸಿಯ ಸಿವಿಲ್ ಕೋರ್ಟ್ ಮಸೀದಿ ಜಾಗದ ಉತ್ಖನನಕ್ಕೆ ಪುರಾತತ್ವ ಇಲಾಖೆಗೆ ಆದೇಶ ನೀಡಿತ್ತು.
ಈ ಉತ್ಖನನದ ವೇಳೆ ಏನಾದರೂ, ಗ್ಯಾನವಾಪಿ ಮಸೀದಿ ಕೆಳಭಾಗದಲ್ಲಿ ದೇವಾಲಯದ ಅವಶೇಷ ಪತ್ತೆಯಾದರೆ, ಮಸೀದಿಯನ್ನು ದೇವಾಲಯಕ್ಕೆ ಬಿಟ್ಟುಕೊಡಬೇಕೆಂಬ ಕೂಗಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ಹೇಳಲಾಗಿತ್ತು. ಹೀಗಾಗಿ ಗ್ಯಾನವಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸುವ ಉತ್ಖನನ ಭಾರಿ ಮಹತ್ವ ಪಡೆದುಕೊಂಡಿತ್ತು.
ಇದನ್ನೂ ಓದಿ:
ಅಯೋಧ್ಯೆ ಮತ್ತು ಕಾಶಿಯಂತೆ ಮಥುರಾದಲ್ಲೂ ಮಂದಿರ-ಮಸೀದಿ ವಿವಾದ, ಉತ್ಖನನ ನಡೆಸಲು ಕೋರ್ಟ್ ಆದೇಶ
Explainer: ಮಂದಿರವೋ? ಮಸೀದಿಯೋ? ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಲಿವೆಯೇ ಈ ಪ್ರಕರಣಗಳು?
(Allahabad High Court stays Varanasi Courts order on ASI Survey on Kashi Vishwanath Temple and Gyanvapi Mosque issue)
Published On - 10:09 pm, Thu, 9 September 21