Coronavirus cases in India: ಭಾರತದಲ್ಲಿ 39,361 ಹೊಸ ಕೊವಿಡ್ ಪ್ರಕರಣ ಪತ್ತೆ; ಪಾಸಿಟಿವಿಟಿ ದರ ಶೇ 3.41

| Updated By: ರಶ್ಮಿ ಕಲ್ಲಕಟ್ಟ

Updated on: Jul 26, 2021 | 10:29 AM

Covid 19: ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 416 ಜನರು ಕೊವಿಡ್ -19 ನಿಂದ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4,20,967 ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ 35,968 ರೋಗಿಗಳು ಸಹ ಚೇತರಿಸಿಕೊಂಡಿದ್ದಾರೆ.

Coronavirus cases in India: ಭಾರತದಲ್ಲಿ 39,361 ಹೊಸ ಕೊವಿಡ್ ಪ್ರಕರಣ ಪತ್ತೆ; ಪಾಸಿಟಿವಿಟಿ ದರ ಶೇ 3.41
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 39,361 ಹೊಸ ಕೊರೊನಾವೈರಸ್ ಸೋಂಕುಗಳು ದಾಖಲಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 4,11,189 ಕ್ಕೆ ತಲುಪಿದೆ. ಪ್ರಸ್ತುತ, ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ 1.31 ರಷ್ಟಿದ್ದು, ದೈನಂದಿನ ಸಕಾರಾತ್ಮಕ ದರವು ಐದು ಶೇಕಡಾಕ್ಕಿಂತ ಕಡಿಮೆ ಅಂದರೆ ಶೇ 3.41 ರಷ್ಟಿದೆ.

ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 416 ಜನರು ಕೊವಿಡ್ -19 ನಿಂದ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4,20,967 ಕ್ಕೆ ತಲುಪಿದೆ. ಭಾನುವಾರ 535 ಸಾವು  ದಾಖಲಾಗಿವೆ. ಇದೇ ಅವಧಿಯಲ್ಲಿ 35,968 ರೋಗಿಗಳು ಸಹ ಚೇತರಿಸಿಕೊಂಡಿದ್ದಾರೆ. ಇದು ಒಟ್ಟು 97.35 ಶೇಕಡಾ ದರದಲ್ಲಿ ಚೇತರಿಕೆಯ ಒಟ್ಟು ಸಂಖ್ಯೆಯನ್ನು 3,05,79,106 ಕ್ಕೆ ತಲುಪಿದೆ.


ಇಡೀ ದಿನದಲ್ಲಿ 11,54,444 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಒಟ್ಟು 45,74,44,011 ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಏತನ್ಮಧ್ಯೆ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಚಾಲನೆಯ ಭಾಗವಾಗಿ ಕಳೆದ 24 ಗಂಟೆಗಳಲ್ಲಿ ವೈರಸ್ ವಿರುದ್ಧ 43,51,96,001 ಡೋಸ್‌ಗಳನ್ನು ನೀಡಲಾಯಿತು.


ಈ ಹಿಂದೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 45.37 ಕೋಟಿ ಕೊವಿಡ್ -19 ಲಸಿಕೆ ಡೋಸ್​​ಗಳನ್ನು ಒದಗಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: 4 ತಿಂಗಳ ಬಳಿಕ ಇಂದಿನಿಂದ ಪದವಿ ಕಾಲೇಜುಗಳು ಆರಂಭ: ಕೊವಿಡ್ ಮಾರ್ಗಸೂಚಿ ಪಾಲನೆಗೇ ಆದ್ಯತೆ

ಇದನ್ನೂ ಓದಿ: Explainer: ಕೊವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಕಂಡುಬರುವ ಕೊರೊನಾವೈರಸ್ ಸೋಂಕು ಲಕ್ಷಣಗಳು