Covid 19 Updates: ದೇಶದಲ್ಲಿ ಇಂದು ಮತ್ತೆ 40 ಸಾವಿರ ದಾಟಿದ ಕೊರೊನಾ ಕೇಸ್​​; 640 ಮಂದಿ ಸಾವು

| Updated By: Lakshmi Hegde

Updated on: Jul 28, 2021 | 11:07 AM

Coronavirus: ದೇಶದಲ್ಲಿ ನಿನ್ನೆ ಕೇವಲ 29,689 ಹೊಸ ಕೊರೊನಾ ಕೇಸ್​ಗಳು ದಾಖಲಾಗಿ, 416 ಮಂದಿ ಮೃತಪಟ್ಟಿದ್ದರು. ಕಳೆದ 132 ದಿನಗಳಲ್ಲಿ ಅಂದರೆ ಸುಮಾರು ನಾಲ್ಕೂವರೆ ತಿಂಗಳಲ್ಲೇ ದಾಖಲಾದ ಅತಿ ಕಡಿಮೆ ಸಂಖ್ಯೆಯಾಗಿದೆ.

Covid 19 Updates: ದೇಶದಲ್ಲಿ ಇಂದು ಮತ್ತೆ 40 ಸಾವಿರ ದಾಟಿದ ಕೊರೊನಾ ಕೇಸ್​​; 640 ಮಂದಿ ಸಾವು
ಕೊವಿಡ್ 19
Follow us on

ದೆಹಲಿ: ದೇಶದಲ್ಲಿ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ಕೇಸ್ (Coronavirus)​ಗಳಲ್ಲಿ ಏರಿಳಿತವಾಗುತ್ತಿದೆ. ನಿನ್ನೆ 30 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆಯಾಗಿದ್ದು, ಸ್ವಲ್ಪ ಖುಷಿ ಮೂಡಿಸಿತ್ತು. ಆದರೆ ಇಂದು ಮತ್ತೆ 43,654 ಹೊಸ ಪ್ರಕರಣಗಳು ದಾಖಲಾಗಿದ್ದು, ಮತ್ತೆ ಆತಂಕ ಮೂಡಿಸಿದೆ. ಹಾಗೇ, 24ಗಂಟೆಯಲ್ಲಿ 640 ಮಂದಿ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು (Corona Active Cases) 3,99,436ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಒಟ್ಟು ಸಂಖ್ಯೆ 4,22,022. ಇನ್ನು ಇದುವರೆಗೆ 44,61,56,659 ಮಂದಿಗೆ ಕೊರೊನಾ ಲಸಿಕೆ (Corona Vaccine) ಹಾಕಲಾಗಿದೆ. ಹಾಗೇ, 24 ಗಂಟೆಯಲ್ಲಿ 41,678 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 3,06,63,147ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ನಿನ್ನೆ ಕೇವಲ 29,689 ಹೊಸ ಕೊರೊನಾ ಕೇಸ್​ಗಳು ದಾಖಲಾಗಿ, 416 ಮಂದಿ ಮೃತಪಟ್ಟಿದ್ದರು. ಕಳೆದ 132 ದಿನಗಳಲ್ಲಿ ಅಂದರೆ ಸುಮಾರು ನಾಲ್ಕೂವರೆ ತಿಂಗಳಲ್ಲೇ ದಾಖಲಾದ ಅತಿ ಕಡಿಮೆ ಸಂಖ್ಯೆಯಾಗಿದೆ. ಹಾಗೇ ಎರಡನೇ ಅಲೆಯ ಅತಿಭೀಕರ ಉತ್ತುಂಗವನ್ನು ನೋಡಿದ ದೇಶಕ್ಕೆ ಒಂದು ಸಣ್ಣ ಭರವಸೆಯನ್ನು ಮೂಡಿಸುವ ಅಂಕಿಸಂಖ್ಯೆಯಾಗಿತ್ತು. ಆದರೆ ಇಂದು ಮತ್ತೆ 40 ಸಾವಿರಕ್ಕೂ ಹೆಚ್ಚಿನ ಕೊರೊನಾ ಕೇಸ್​ಗಳು ದಾಖಲಾಗಿದ್ದು, ಮತ್ತೆ ಆತಂಕ ಮೂಡಿಸಿದೆ. ಅದರಲ್ಲೂ ಏಳು ರಾಜ್ಯಗಳಿಂದ ಒಟ್ಟು 22 ಜಿಲ್ಲೆಗಳಲ್ಲಿಯೇ ಕೊರೊನಾ ಪ್ರಮಾಣ ಹೆಚ್ಚಾಗಿದೆ. ದೇಶದಲ್ಲಿ ಸದ್ಯ 62 ಜಿಲ್ಲೆಗಳಲ್ಲಿ ಪ್ರತಿದಿನ 100ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಕೇಂದ್ರ ಆರೊಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ

ಪ್ರವಾಹಕ್ಕೆ ಹೆದರಿ ಒದ್ದಾಡುತ್ತಿದ್ದ ಶ್ವಾನವನ್ನು ರಕ್ಷಿಸಿದ ರಕ್ಷಣಾ ಸಿಬ್ಬಂದಿ; ನೆಟ್ಟಿಗರಿಂದ ಶ್ಲಾಘನೆ

India reports 43,654 fresh COVID 19 cases in 24 hours