ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 46,759 ಕೊರೊನಾವೈರಸ್ ಪ್ರಕರಣಗಳು ಮತ್ತು 509 ಸಾವುಗಳನ್ನು ವರದಿ ಆಗಿದೆ. ಇದರೊಂದಿಗೆ ದೇಶದ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 3.26 ಕೋಟಿಗೆ (3,26,49,947) ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4.37 ಲಕ್ಷಕ್ಕೆ (4,37,370) ತಲುಪಿದೆ. ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ ಎಂದು ಎಚ್ಚರಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಾಗರೂಕರಾಗಿರಲು ಶುಕ್ರವಾರ ಮನವಿ ಮಾಡಿದ್ದಾರೆ. ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ಜಿಪಿಜಿಐ) 26 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ಈ ಸಾಂಕ್ರಾಮಿಕ ರೋಗದಿಂದ ಜಗತ್ತು ತತ್ತರಿಸಿದೆ. ಕೊವಿಡ್ ಸೋಂಕಿನ ವಿರುದ್ಧದ ನಮ್ಮ ಹೋರಾಟದಲ್ಲಿ ಎಸ್‌ಜಿಪಿಜಿಐ ನಂತಹ ವೈದ್ಯಕೀಯ ಸಂಸ್ಥೆಗಳು ಪಟ್ಟುಬಿಡದೆ ಕೆಲಸ ಮಾಡಿವೆ ಎಂದಿದ್ದಾರೆ.
ನಿನ್ನೆ ಭಾರತವು ತನ್ನ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನದ ಅಡಿಯಲ್ಲಿ 1,00,64,032 ಲಸಿಕೆ ಡೋಸ್ ನೀಡಿದೆ. ವ್ಯಾಕ್ಸಿನೇಷನ್ ಡ್ರೈವ್ ಆರಂಭವಾದ ನಂತರ ಒಂದೇ ದಿನದಲ್ಲಿ ಸಾಧಿಸಿದ ಗರಿಷ್ಠ ವ್ಯಾಕ್ಸಿನೇಷನ್ ಇದಾಗಿದೆ.
India reports 46,759 new #COVID19 cases, 31,374 recoveries and 509 deaths in the last 24 hrs, as per Health Ministry.
Total cases: 3,26,49,947
Total recoveries: 3,18,52,802
Active cases: 3,59,775
Death toll: 4,37,370Total vaccinated: 62,29,89,134 (1,03,35,290 in last 24 hours) pic.twitter.com/6Hxp7d1Td5
— ANI (@ANI) August 28, 2021
ಇನ್ನೊಂದು ಮಹತ್ವದ ಸಾಧನೆಯಲ್ಲಿ ಭಾರತದ ಕೊವಿಡ್ -19 ಲಸಿಕೆ ವ್ಯಾಪ್ತಿಯು ಇಂದು ಸಂಜೆ 7 ರ ತಾತ್ಕಾಲಿಕ ವರದಿಯ ಪ್ರಕಾರ 62 ಕೋಟಿ (62,09,43,580) ಮೈಲಿಗಲ್ಲನ್ನು ದಾಟಿದೆ.
ಏತನ್ಮಧ್ಯೆ ಕಳೆದ 24 ಗಂಟೆಗಳಲ್ಲಿ 32,801 ಹೊಸ ಪ್ರಕರಣಗಳೊಂದಿಗೆ ಕೇರಳವು ಸತತ ಮೂರನೇ ದಿನವಾದ ಶುಕ್ರವಾರ 30,000ಕ್ಕಿಂತ ಹೆಚ್ಚು ದೈನಂದಿನ ಕೊರೊನಾಸೋಂಕುಗಳನ್ನು ದಾಖಲಿಸಿದೆ. 179 ಹೊಸ ಸಾವುಗಳೊಂದಿಗೆ, ರಾಜ್ಯದಲ್ಲಿ ಸಾವಿನ ಸಂಖ್ಯೆ 20,313 ಕ್ಕೆ ಏರಿದೆ. ಪರೀಕ್ಷಾ ಧನಾತ್ಮಕ ದರವು 19.22 ಶೇಕಡಾ ದಾಖಲಾಗಿದೆ.
Of the 46,759 new #COVID19 cases and 509 deaths reported in India in the last 24 hours, Kerala recorded 32,801 COVID positive cases and 179 deaths yesterday.
— ANI (@ANI) August 28, 2021
ಇನ್ನೊಂದು ಬೆಳವಣಿಗೆಯಲ್ಲಿ ದೆಹಲಿ ಸರ್ಕಾರವು ಸೆಪ್ಟೆಂಬರ್ 1 ರಿಂದ ಹಂತ ಹಂತವಾಗಿ ಶಾಲೆಗಳನ್ನು ಮತ್ತೆ ತೆರೆಯಲು ನಿರ್ಧರಿಸಿದೆ. 9 ರಿಂದ 12 ನೇ ತರಗತಿಯ ತರಗತಿಗಳು ಸೆಪ್ಟೆಂಬರ್ 1 ರಿಂದ ಆರಂಭವಾಗಲಿದ್ದು, 6 ರಿಂದ 8 ನೇ ತರಗತಿಗಳು ಸೆಪ್ಟೆಂಬರ್ 8 ರಿಂದ ಆರಂಭವಾಗಲಿವೆ.