AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರ ಕಣಿವೆಯ ಭಯೋತ್ಪಾದನೆ ಶೀಘ್ರವೇ ಅಂತ್ಯಗೊಳ್ಳಲಿದೆ: ಫಾರೂಕ್​ ಅಬ್ದುಲ್ಲಾ

ನನಗೆ ನವಭಾರತ ನೋಡಲು ತುಂಬ ಇಷ್ಟ. ಇದು ಎಲ್ಲರ ಭಾರತವಾಗಿರಬೇಕು. ದೇವರು ಇರುವುದು ದೇವಸ್ಥಾನದಲ್ಲಾಗಲೀ, ಮಸೀದಿಯಲ್ಲಾಗಲಿ ಅಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಕಾಶ್ಮೀರ ಕಣಿವೆಯ ಭಯೋತ್ಪಾದನೆ ಶೀಘ್ರವೇ ಅಂತ್ಯಗೊಳ್ಳಲಿದೆ: ಫಾರೂಕ್​ ಅಬ್ದುಲ್ಲಾ
ಫಾರೂಕ್​ ಅಬ್ದುಲ್ಲಾ
TV9 Web
| Edited By: |

Updated on:Aug 28, 2021 | 11:32 AM

Share

ಕಾಶ್ಮೀರ ಕಣಿವೆಯಲ್ಲಿರುವ ಭಯೋತ್ಪಾದನೆ (Terrorism) ಅತಿಶೀಘ್ರದಲ್ಲೇ ಭಯೋತ್ಪಾದನೆ ಕೊನೆಗೊಳ್ಳಲಿದೆ ಎಂದು ನ್ಯಾಷನಲ್​ ಕಾನ್ಫರೆನ್ಸ್​ ಅಧ್ಯಕ್ಷ ಫಾರೂಕ್​ ಅಬ್ದುಲ್ಲಾ(Farooq Abdullah) ಆಶಯ ವ್ಯಕ್ತಪಡಿಸಿದ್ದಾರೆ. ಗಂಧೇರ್​ಬಾಲ್​ ಜಿಲ್ಲೆಯ ಸೋನಾಮಾರ್ಗ್​​ನಲ್ಲಿ ನಡೆದ ಭದ್ರತೆ ಮತ್ತು ಶಕ್ತಿ ಎಂಬ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಶೀಘ್ರದಲ್ಲೇ ಕೊನೆಗಾಣಲಿದೆ. ನಾವು ಬದುಕಬೇಕು ಮತ್ತು ದೇಶವನ್ನು ಉಳಿಸಬೇಕು..ಎಂದು ಹೇಳಿದರು.

ಜಮ್ಮು-ಕಾಶ್ಮೀರ ಭೂಮಿಯ ಮೇಲಿನ ಸ್ವರ್ಗ. ಆದರೂ ಇಂದಿಗೂ ಜನರು ಇಲ್ಲಿಗೆ ಬರಲು ಭಯಪಡುತ್ತಾರೆ. ಇಲ್ಲಿ ನಡೆಯುತ್ತಿರುವ ಹಿಂಸಾಚಾರ, ಭಯೋತ್ಪಾದನೆಗೆ ಜನರು ಅಂಜುತ್ತಿದ್ದಾರೆ. ನಾವಿಲ್ಲಿ ಬಂದರೆ ವಾಪಸ್ ಮನೆಗೆ ಹೋಗುತ್ತೇವೆ ಎಂಬ ನಂಬಿಕೆಯೇ ಅವರಲ್ಲಿ ಇಲ್ಲ. ಹಾಗಾಗಿ ಇದು ಸ್ವರ್ಗವಾದರೂ ಜನ ಬರಲು ಇಚ್ಛಿಸುವುದಿಲ್ಲ ಎಂದು ಹೇಳಿದರು.

ನನಗೆ ನವಭಾರತ ನೋಡಲು ತುಂಬ ಇಷ್ಟ. ಇದು ಎಲ್ಲರ ಭಾರತವಾಗಿರಬೇಕು. ದೇವರು ಇರುವುದು ದೇವಸ್ಥಾನದಲ್ಲಾಗಲೀ, ಮಸೀದಿಯಲ್ಲಾಗಲಿ ಅಲ್ಲ. ಆ ಅಲ್ಲಾ ನಮ್ಮೆಲ್ಲರಲ್ಲಿ ಇದ್ದಾನೆ. ನಾವು ಒಟ್ಟಾಗಿ ಬದುಕಬೇಕು ಮತ್ತು ಒಟ್ಟಿಗೆ ಬೆಳೆಯಬೇಕು ಎಂಬುದು ನನ್ನ ಹೃತ್ಪೂರ್ವಕ ಹಾರೈಕೆ. ಪ್ರತಿಯೊಬ್ಬರ ಕಷ್ಟಕ್ಕೂ ನಿಲ್ಲುವ ದೇಶವಾಗಿ ಭಾರತ ರೂಪುಗೊಂಡಿದೆ. ಅಮೆರಿಕದಂತ ಶ್ರೀಮಂತ ರಾಷ್ಟ್ರಗಳೇ ಕೊವಿಡ್​ 19 ಸೋಂಕಿನಿಂದ ತತ್ತರಿಸಿದವು. ಆದರೆ ಬಡತನವಿದ್ದರೂ ಭಾರತ ತುಂಬ ಯಶಸ್ವಿಯಾಗಿ ಅದನ್ನು ನಿಭಾಯಿಸಿತು ಎಂದು ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: Cheteshwar Pujara: 968 ದಿನಗಳ ಬಳಿಕ ಪೂಜಾರ ಬ್ಯಾಟ್​ನಿಂದ- 645 ದಿನಗಳ ಬಳಿಕ ಕೊಹ್ಲಿ ಬ್ಯಾಟ್​ನಿಂದ ಸಿಡಿಯುವುದೇ ಶತಕ?

ಟ್ವಿಟರ್ ಡೌನ್ ಆಗಿದೆ ಎಂದು ದೂರಿದ ಬಳಕೆದಾರರು; ಕಾರಣವೇನು?

Published On - 11:31 am, Sat, 28 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ