Cheteshwar Pujara: 968 ದಿನಗಳ ಬಳಿಕ ಪೂಜಾರ ಬ್ಯಾಟ್​ನಿಂದ- 645 ದಿನಗಳ ಬಳಿಕ ಕೊಹ್ಲಿ ಬ್ಯಾಟ್​ನಿಂದ ಸಿಡಿಯುವುದೇ ಶತಕ?

Virat Kohli: ಪೂಜಾರ ಜೊತೆ ವಿರಾಟ್ ಕೊಹ್ಲಿ ಬ್ಯಾಟ್​ನಿಂದಲೂ 2019ರ ಪಿಂಕ್ ಬಾಲ್ ಟೆಸ್ಟ್ ಬಳಿಕ ಒಂದೇ ಒಂದು ಶತಕ ಬಂದಿಲ್ಲ. ಸದ್ಯ ಎರಡನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ 45 ರನ್ ಗಳಿಸಿದ್ದು, 645 ದಿನಗಳ ಬಳಿಕ ​ನಿಂದ ಶತಕ ಬಾರಿಸುವ ಸೂಚನೆ ನೀಡಿದ್ದಾರೆ.

Cheteshwar Pujara: 968 ದಿನಗಳ ಬಳಿಕ ಪೂಜಾರ ಬ್ಯಾಟ್​ನಿಂದ- 645 ದಿನಗಳ ಬಳಿಕ ಕೊಹ್ಲಿ ಬ್ಯಾಟ್​ನಿಂದ ಸಿಡಿಯುವುದೇ ಶತಕ?
Cheteshwar Pujara and Virat Kohli
Follow us
TV9 Web
| Updated By: Vinay Bhat

Updated on: Aug 28, 2021 | 10:58 AM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ರೋಚಕ ಹಂತಕ್ಕೆ ತಲುಪಿದ್ದು, ನಾಲ್ಕನೇ ದಿನದಾಟ ಉಭಯ ತಂಡಗಳಿಗೆ ಮುಖ್ಯವಾಗಿದೆ. ಕ್ರೀಸ್ ಕಚ್ಚಿ ನಿಂತಿರುವ ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ನಾಯಕ ವಿರಾಟ್ ಕೊಹ್ಲಿ (Virat Kohli) ವಿಕೆಟ್ ಆಂಗ್ಲರಿಗೆ ಮುಖ್ಯವಾಗಿದ್ದರೆ, ಕೊಹ್ಲಿ-ಪೂಜಾರ ಆಟ ಟೀಮ್ ಇಂಡಿಯಾಕ್ಕೆ ಮಾತ್ರವಲ್ಲದೆ ವೈಯಕ್ತಿಕವಾಗಿ ಇವರಿಬ್ಬರಿಗೂ ಮುಖ್ಯವಾಗಿದೆ. ಹೀಗಾಗಿ ನಾಲ್ಕನೇ ದಿನದಾಟ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಸತತ ಕಳಪೆ ಆಟದಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಪೂಜಾರ ತಮ್ಮ ಬ್ಯಾಟ್ ಮೂಲಕ ತಕ್ಕ ಉತ್ತರ ನೀಡಿದ್ದಾರೆ. 180 ಎಸೆತಗಳಲ್ಲಿ ಬರೋಬ್ಬರಿ 15 ಬೌಂಡರಿ ಬಾರಿಸಿ 91 ರನ್ ಗಳಿಸಿರುವ ಪೂಜಾರ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪೂಜಾರ ಕೇವಲ 9 ರನ್ ಬಾರಿಸಿದರೆ ಟೆಸ್ಟ್ ಕ್ರಿಕೆಟ್​ನಲ್ಲಿ 19ನೇ ಶತಕ ಪೂರೈಸಲಿದ್ದಾರೆ.

ಪೂಜಾರ ಬ್ಯಾಟ್​​ನಿಂದ ಕೊನೆಯ ಶತಕ ಸಿಡಿದಿದ್ದು 2019 ಜನವರಿಯ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್​ನಲ್ಲಿ. ಅದಾದ ಬಳಿಕ ಕಳೆದ 35 ಇನ್ನಿಂಗ್ಸ್​ನಿಂದ ಪೂಜಾರರಿಂದ ಸೆಂಚುರಿ ಬಂದಿಲ್ಲ. ಸದ್ಯ 968 ದಿನಗಳ ಬಳಿಕ ಪೂಜಾರ ಶತಕ ಸಿಡಿಸುವ ಅವಕಾಶ ಹೊಂದಿದ್ದಾರೆ. ನಿವೃತ್ತಿ ಘೋಷಿಸಿ ಎಂದು ಕೂಗಾಡಿದವರಿಗೆ ಪೂಜಾರ ಬ್ಯಾಟ್ ಎತ್ತಿ ತೋರುವ ಸಮಯ ಇದಾಗಿದೆ.

ಇತ್ತ ವಿರಾಟ್ ಕೊಹ್ಲಿ ಕೂಡ ಶತಕದ ಬರ ಎದುರಿಸುತ್ತಿದ್ದಾರೆ. ಪ್ರತಿ ಸರಣಿಯಲ್ಲೂ ಸೆಂಚುರಿ ಬಾರಿಸುತ್ತಿದ್ದ ರನ್ ಮೆಶಿನ್ ಬ್ಯಾಟ್​ನಿಂದ 2019ರ ಪಿಂಕ್ ಬಾಲ್ ಟೆಸ್ಟ್ ಬಳಿಕ ಒಂದೇ ಒಂದು ಶತಕ ಬಂದಿಲ್ಲ. ಸದ್ಯ ಎರಡನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ 45 ರನ್ ಗಳಿಸಿದ್ದು, ಶತಕ ಬಾರಿಸುವ ಸೂಚನೆ ನೀಡಿದ್ದಾರೆ. ಹೀಗಾದಲ್ಲಿ 645 ದಿನಗಳ ಬಳಿಕ ಕೊಹ್ಲಿ ಬ್ಯಾಟ್​ನಿಂದ ಶತಕ ಮೂಡಿಬರಲಿದೆ.

ಇಂಗ್ಲೆಂಡ್ ತಂಡವನ್ನು 432 ರನ್​ಗೆ ಆಲೌಟ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 34 ರನ್ ಗಳಿಸಿರುವಾಗ ಕೆ. ಎಲ್ ರಾಹುಲ್(8) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ಎಚ್ಚರಿಕೆಯ ಜೊತೆಯಾಟ ಆಡಿದ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಬಾರಿ ಕೊಂಚ ಬಿರುಸಿನ ಆಟವಾಡಿದ ಹಿಟ್​ಮ್ಯಾನ್ 7 ಬೌಂಡರಿ, 1 ಸಿಕ್ಸರ್ ಬಾರಿಸಿ 59 ರನ್ ಗಳಿಸಿದರು.

ಎರಡು ವಿಕೆಟ್ ಕಳೆದುಕೊಂಡಾಗ ಕುಗ್ಗದ ಭಾರತ ಮತ್ತೆ ಎದ್ದುನಿಂತಿತು. ಪೂಜಾರ ತಮ್ಮದೇ ಶೈಲಿಯ ಎಚ್ಚರಿಕೆಯ ಬ್ಯಾಟಿಂಗ್ ಮುಂದುವರೆಸಿದರೆ, ನಾಯಕ ವಿರಾಟ್ ಕೊಹ್ಲಿ ಇವರಿಗೆ ಅತ್ಯುತ್ತಮ ಸಾಥ್ ನೀಡಿದರು. 3ನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿದೆ. 139 ರನ್​ಗಳ ಹಿನ್ನಡೆಯಲ್ಲಿದೆ. ಪೂಜಾರ 180 ಎಸೆತಗಳಲ್ಲಿ 91 ರನ್ ಬಾರಿಸಿ ಮತ್ತು ಕೊಹ್ಲಿ 94 ಎಸೆತಗಳಲ್ಲಿ 45 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್​ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಇಬ್ಬರು ಸ್ಟಾರ್ ಬ್ಯಾಟ್ಸ್​ಮನ್​ಗಳೇ ಭಾರತಕ್ಕಿಂದು ಆಸರೆಯಾಗಿ ನಿಂತಿದ್ದಾರೆ. ಈ ಜೋಡಿ 99 ರನ್​ಗಳ ಮುರಿಯದ ಜೊತೆಯಾಟ ಆಡುತ್ತಿದೆ.

India vs England: ಶತಕದತ್ತ ಪೂಜಾರ, ಅರ್ಧಶತಕದತ್ತ ಕೊಹ್ಲಿ: ಇಂಗ್ಲೆಂಡ್​ಗೆ ಶುರುವಾಗಿದೆ ನಡುಕ: 4ನೇ ದಿನ ಏನಾಗಲಿದೆ?

India vs England: ವಿರಾಟ್ ಕೊಹ್ಲಿಗೆ ಬೇಕು ಕೇವಲ 11 ರನ್: ಸೃಷ್ಟಿಯಾಗಲಿದೆ ಹೊಸ ದಾಖಲೆ

(India vs England Will Cheteshwar Pujara score 100 after 968 daysand Virat Kohli gets century after 645 days)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್