India vs England: ಶತಕದತ್ತ ಪೂಜಾರ, ಅರ್ಧಶತಕದತ್ತ ಕೊಹ್ಲಿ: ಇಂಗ್ಲೆಂಡ್​ಗೆ ಶುರುವಾಗಿದೆ ನಡುಕ: 4ನೇ ದಿನ ಏನಾಗಲಿದೆ?

ರನ್ ಹಸಿವಿವಿಂದ ಬಳಲುತ್ತಿದ್ದ ಚೇತೇಶ್ವರ್ ಪೂಜಾರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಂಗ್ಲರ ನಿದ್ದೆಗೆಡಿಸಿದ್ದಾರೆ. ಇಂಗ್ಲೆಂಡ್​ನ ಮಾರಕ ಬೌಲರ್​ಗಳ ದಾಳಿಯನ್ನು ದಿಟ್ಟ ತನದಿಂದ ಎದುರಿಸುತ್ತಿರುವ ಟೀಮ್ ಇಂಡಿಯಾ ಮೂರನೇ ಟೆಸ್ಟ್​ನಲ್ಲಿ ಮತ್ತೆ ಜೀವ ಪಡೆದುಕೊಂಡಿದೆ.

India vs England: ಶತಕದತ್ತ ಪೂಜಾರ, ಅರ್ಧಶತಕದತ್ತ ಕೊಹ್ಲಿ: ಇಂಗ್ಲೆಂಡ್​ಗೆ ಶುರುವಾಗಿದೆ ನಡುಕ: 4ನೇ ದಿನ ಏನಾಗಲಿದೆ?
Cheteshwar Pujara, Virat Kohli
Follow us
TV9 Web
| Updated By: Vinay Bhat

Updated on: Aug 28, 2021 | 8:54 AM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ (3rd Test) ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದ್ದು, ನಾಲ್ಕನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ (Team India) ಎರಡನೇ ಇನ್ನಿಂಗ್ಸ್​ನಲ್ಲಿ ಅಮೋಘ ಕಮ್​ಬ್ಯಾಕ್ ಮಾಡಿದೆ. ಅದರಲ್ಲೂ ಸಾಲು ಸಾಲು ಟೀಕೆಗಳನ್ನು ಮೆಟ್ಟಿನಿಂತಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಸೆಂಚುರಿಯತ್ತ ದಾಪುಗಾಲಿಡುತ್ತಿದ್ದರೆ, ಇತ್ತ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ನಾಯಕ ವಿರಾಟ್ ಕೊಹ್ಲಿ (Virat Kohli) ಅರ್ಧಶತಕದ ಅಂಚಿನಲ್ಲಿದ್ದಾರೆ. ಭಾರತದ ಫೈಟ್​ಬ್ಯಾಕ್ ಆಟವನ್ನು ಕಂಡು ಇಂಗ್ಲೆಂಡ್​ಗೆ ಮತ್ತೆ ತಲೆನೋವು ಶುರುವಾಗಿದೆ.

ಹೌದು, ಟೀಮ್ ಇಂಡಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 78 ರನ್​ಗೆ ಆಲೌಟ್ ಮಾಡಿ ಮೆರೆದಿದ್ದ ಇಂಗ್ಲೆಂಡ್​ಗೆ ಈಗ ನಡುಕ ಶುರುವಾಗಿದೆ. ಮೂರನೇ ಟೆಸ್ಟ್​ನ ಮೊದಲ ದಿನವೇ ಆಂಗ್ಲರು ಮೇಲುಗೈ ಸಾಧಿಸಿದರು. ಎರಡನೇ ದಿನ ಕೂಡ ಇಂಗ್ಲೆಂಡ್​ ಅಮೋಘ ಪ್ರದರ್ಶನ ನೀಡಿ ಪಂದ್ಯವನ್ನು ಬಹುತೇಕ ತನ್ನ ಹಿಡಿತಕ್ಕೆ ತಂದಿಟ್ಟಿತು. ಆದರೆ, ಮೂರನೇ ದಿನ ಅಂದುಕೊಂಡಂತೆ ಆಗಲಿಲ್ಲ.

ರನ್ ಹಸಿವಿವಿಂದ ಬಳಲುತ್ತಿದ್ದ ಚೇತೇಶ್ವರ್ ಪೂಜಾರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಂಗ್ಲರ ನಿದ್ದೆಗೆಡಿಸಿದ್ದಾರೆ. ಇಂಗ್ಲೆಂಡ್​ನ ಮಾರಕ ಬೌಲರ್​ಗಳ ದಾಳಿಯನ್ನು ದಿಟ್ಟ ತನದಿಂದ ಎದುರಿಸುತ್ತಿರುವ ಟೀಮ್ ಇಂಡಿಯಾ ಮೂರನೇ ಟೆಸ್ಟ್​ನಲ್ಲಿ ಮತ್ತೆ ಜೀವ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ಹಾಗೂ ಪೂಜಾರ ಟೊಂಕಕಟ್ಟಿ ನಿಂತಿದ್ದು ರೂಟ್ ಪಡೆಯಲ್ಲಿ ಆತಂಕ ಮನೆಮಾಡಿದೆ.

ಇಂಗ್ಲೆಂಡ್ ತಂಡವನ್ನು 432 ರನ್​ಗೆ ಆಲೌಟ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 34 ರನ್ ಗಳಿಸಿರುವಾಗ ಕೆ. ಎಲ್ ರಾಹುಲ್(8) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ಎಚ್ಚರಿಕೆಯ ಜೊತೆಯಾಟ ಆಡಿದ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಬಾರಿ ಕೊಂಚ ಬಿರುಸಿನ ಆಟವಾಡಿದ ಹಿಟ್​ಮ್ಯಾನ್ 7 ಬೌಂಡರಿ, 1 ಸಿಕ್ಸರ್ ಬಾರಿಸಿ 59 ರನ್ ಗಳಿಸಿದರು.

ಎರಡು ವಿಕೆಟ್ ಕಳೆದುಕೊಂಡಾಗ ಕುಗ್ಗದ ಭಾರತ ಮತ್ತೆ ಎದ್ದುನಿಂತಿತು. ಪೂಜಾರ ತಮ್ಮದೇ ಶೈಲಿಯ ಎಚ್ಚರಿಕೆಯ ಬ್ಯಾಟಿಂಗ್ ಮುಂದುವರೆಸಿದರೆ, ನಾಯಕ ವಿರಾಟ್ ಕೊಹ್ಲಿ ಇವರಿಗೆ ಅತ್ಯುತ್ತಮ ಸಾಥ್ ನೀಡಿದರು. 3ನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿದೆ. 139 ರನ್​ಗಳ ಹಿನ್ನಡೆಯಲ್ಲಿದೆ. ಪೂಜಾರ 180 ಎಸೆತಗಳಲ್ಲಿ 91 ರನ್ ಬಾರಿಸಿ ಮತ್ತು ಕೊಹ್ಲಿ 94 ಎಸೆತಗಳಲ್ಲಿ 45 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್​ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಇಬ್ಬರು ಸ್ಟಾರ್ ಬ್ಯಾಟ್ಸ್​ಮನ್​ಗಳೇ ಭಾರತಕ್ಕಿಂದು ಆಸರೆಯಾಗಿ ನಿಂತಿದ್ದಾರೆ. ಈ ಜೋಡಿ 99 ರನ್​ಗಳ ಮುರಿಯದ ಜೊತೆಯಾಟ ಆಡುತ್ತಿದ್ದು, ಇಂದು ನಾಲ್ಕನೇ ದಿನ ಕೂಡ ಇದೇ ಲಯದಲ್ಲಿ ಆಡಿದರೆ ಪಂದ್ಯ ಭಾರತದ ಕಡೆ ವಾಲಲಿದೆ. ಹೀಗಾಗಿ ಇಂದಿನ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ.

Rohit Sharma: ರೋಹಿತ್ ಸಿಡಿಸಿದ ಅಪ್ಪರ್​​ಕಟ್ ಸಿಕ್ಸರ್ ನೋಡಿದ್ರಾ?: ಹಿಟ್​ಮ್ಯಾನ್ ಶಾಟ್​ಗೆ ಕ್ರಿಕೆಟ್ ದಿಗ್ಗಜ ಫಿದಾ

Tokyo Paralympics: ಟೇಬಲ್ ಟೆನಿಸ್​ನಲ್ಲಿ ಐತಿಹಾಸಿಕ ಸಾಧನೆ: ಫೈನಲ್​ಗೆ ಲಗ್ಗೆಯಿಟ್ಟ ಭಾರತದ ಭಾವಿನಾ

(Virat Kohli and Cheteshwar Pujara showing intent india vs england 3rd test fourth day will decide)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್