ಮತ್ತೊಮ್ಮೆ ಮೈದಾನಕ್ಕೆ ಎಂಟ್ರಿಕೊಟ್ಟ ಅನಾಮಿಕ; ಇಸಿಬಿ ವಿರುದ್ಧ ವಿಮಾನ ಹಾರಿಸಿ ಪ್ರತಿಭಟನೆ; ಇದು 3ನೇ ದಿನದ ಹೈಲೈಟ್ಸ್

Ind vs Eng: ಇಸಿಬಿಯನ್ನು ವಜಾಗೊಳಿಸಿ ಎಂಬ ಸಂದೇಶದೊಂದಿಗೆ ವಿಮಾನವೊಂದು ಮೈದಾನದ ಮೇಲೆ ಹಾರಾಟ ನಡೆಸಿತು. ಈ ಮಧ್ಯೆ ಇನ್ನೊಂದು ಘಟನೆ ಮೈದಾನದಲ್ಲಿ ಸಂಭವಿಸಿತು.

ಮತ್ತೊಮ್ಮೆ ಮೈದಾನಕ್ಕೆ ಎಂಟ್ರಿಕೊಟ್ಟ ಅನಾಮಿಕ; ಇಸಿಬಿ ವಿರುದ್ಧ ವಿಮಾನ ಹಾರಿಸಿ ಪ್ರತಿಭಟನೆ; ಇದು 3ನೇ ದಿನದ ಹೈಲೈಟ್ಸ್
ಮತ್ತೊಮ್ಮೆ ಮೈದಾನಕ್ಕೆ ಎಂಟ್ರಿಕೊಟ್ಟ ಅನಾಮಿಕ
Follow us
TV9 Web
| Updated By: ಪೃಥ್ವಿಶಂಕರ

Updated on: Aug 27, 2021 | 10:19 PM

ಭಾರತ ಮತ್ತು ಇಂಗ್ಲೆಂಡ್ ನಡುವೆ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ, ಶುಕ್ರವಾರ ಮತ್ತೊಮ್ಮೆ ಆಟವನ್ನು ಹೊರತುಪಡಿಸಿ ಕೆಲವು ಕಾರಣಗಳಿಗಾಗಿ ಸುದ್ದಿಯಾಗಿದೆ. ಇಸಿಬಿಯನ್ನು ವಜಾಗೊಳಿಸಿ ಎಂಬ ಸಂದೇಶದೊಂದಿಗೆ ವಿಮಾನವೊಂದು ಮೈದಾನದ ಮೇಲೆ ಹಾರಾಟ ನಡೆಸಿತು. ಈ ಮಧ್ಯೆ ಇನ್ನೊಂದು ಘಟನೆ ಮೈದಾನದಲ್ಲಿ ಸಂಭವಿಸಿತು. ಪಂದ್ಯದ ಸಮಯದಲ್ಲಿ, ಪ್ಯಾಡ್ ಮತ್ತು ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬರು ಪ್ರವೇಶಿಸಿದರು. ಈ ವ್ಯಕ್ತಿ ಮೈದಾನದಲ್ಲಿ ಬರುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ಆತನನ್ನು ತಡೆದು ಮೈದಾನದಿಂದ ಹೊರಗೆ ಕರೆದೊಯ್ದರು. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು ಇದರಲ್ಲಿ ಭದ್ರತಾ ಸಿಬ್ಬಂದಿಗಳು ಆತನನ್ನು ಹೊರಗೆ ಸಾಗಿಸಲು ಎಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು.

ಮೈದಾನ ಪ್ರವೇಶಿಸಿದ ವ್ಯಕ್ತಿ ಟೆಸ್ಟ್ ಕಿಟ್ ಧರಿಸಿದ್ದ. ಆತನ ಟಿ-ಶರ್ಟ್ ಹಿಂಭಾಗದಲ್ಲಿ ಜಾರ್ವೂ ಎಂದು ಬರೆಯಲಾಗಿತ್ತು. ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಮೈದಾನಕ್ಕೆ ಬಂದಿದ್ದು ಇದೇ ಜಾರ್ವೂ. ಆತ ಭಾರತೀಯ ತಂಡದ ಜರ್ಸಿ ಧರಿಸಿ ಮತ್ತು ಬಿಸಿಸಿಐ ಲೋಗೋ ತೋರಿಸಿ ಭದ್ರತಾ ಸಿಬ್ಬಂದಿಯನ್ನು ಹೆದರಿಸುತ್ತಿದ್ದರು. ನಂತರ ಆತನನ್ನು ಮೈದಾನದಿಂದ ಹೊರಹಾಕಲಾಗಿತ್ತು. ಇಂದು ಕೂಡ ದಿನದ ಕೊನೆಯ ಸೆಷನ್‌ನ ಆರಂಭದಲ್ಲಿ, ರೋಹಿತ್ ಶರ್ಮಾ ಔಟಾದ ತಕ್ಷಣ, ಜಾರ್ವೂ ಮೈದಾನಕ್ಕೆ ಎಂಟ್ರಿಕೊಟ್ಟು ವಿರಾಟ್ ಕೊಹ್ಲಿ ಬದಲಿಗೆ ಬ್ಯಾಟಿಂಗ್ ಮಾಡಲು ಆರಂಭಿಸಿದರು. ಆದರೆ ಭದ್ರತಾ ಸಿಬ್ಬಂದಿ ಅವನಿಗೆ ಹೊರಹೋಗುವ ಮಾರ್ಗವನ್ನು ತೋರಿಸಿದರು.

ವಿಮಾನ ಕ್ರೀಡಾಂಗಣದ ಮೇಲೆ ಹಾದುಹೋಯಿತು ಮೂರನೇ ದಿನವೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಅಹಿತಕರ ಘಟನೆಯನ್ನು ಎದುರಿಸಬೇಕಾಯಿತು. ಪಂದ್ಯದ ಸಮಯದಲ್ಲಿ, ವಿಮಾನವೊಂದು ಮೈದಾನದ ಮೇಲೆ ಹಾದುಹೋಯಿತು. ಅದರ ಮೇಲೆ ಇಸಿಬಿ ವಿರುದ್ಧ ಸಂದೇಶವನ್ನು ಬರೆಯಲಾಗಿತ್ತು. ಈ ಸಂದೇಶವು ಇಸಿಬಿಗೆ ವಿರುದ್ಧವಾಗಿತ್ತು ಮತ್ತು ಅದರಲ್ಲಿ ಬೇಡಿಕೆಯನ್ನು ಇಡಲಾಗಿತ್ತು. ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ, ಎರಡನೇ ಸೆಷನ್ ಸಮಯದಲ್ಲಿ, ಒಂದು ವಿಮಾನವು ಮೈದಾನದ ಮೇಲೆ ಹಾರಾಡಿತು, ಅದರಲ್ಲಿ ಇಸಿಬಿ ತೆಗೆಯಿರಿ, ಟೆಸ್ಟ್ ಕ್ರಿಕೆಟ್ ಉಳಿಸಿ” ಎಂದು ಬರೆಯಲಾಗಿತ್ತು. ಭಾರತದ ಎರಡನೇ ಇನ್ನಿಂಗ್ಸ್‌ನ 25 ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.

ಇಸಿಬಿ ವಿರುದ್ಧ ವಿಮಾನ ಹಾರಿಸಿ ಪ್ರತಿಭಟನೆ

ರೋಹಿತ್ ಔಟಾಗಿದ್ದಾರೆ ಭಾರತದ ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಎರಡನೇ ವಿಕೆಟ್ಗೆ 82 ರನ್ಗಳ ಜೊತೆಯಾಟ ನೀಡಿದರು. ಆದರೆ, ದಿನದ ಕೊನೆಯ ಅವಧಿಯಲ್ಲಿ ರೋಹಿತ್ ಮತ್ತು ಪೂಜಾರ ಜೊತೆಯಾಟ ಮುರಿಯಿತು. ಮೂರನೇ ಸೆಶನ್‌ನಲ್ಲಿ, ಒಲ್ಲಿ ರಾಬಿನ್ಸನ್ ರೋಹಿತ್‌ನನ್ನು lbw ಬಲೆಗೆ ಬೀಳಿಸಿದರು. ರೋಹಿತ್ ತಮ್ಮ ಇನ್ನಿಂಗ್ಸ್‌ನಲ್ಲಿ 156 ಎಸೆತಗಳನ್ನು ಎದುರಿಸಿದರು ಮತ್ತು ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು. ರೋಹಿತ್ ನಿರ್ಗಮನದ ನಂತರ, ಪೂಜಾರ ಓವರ್‌ಟನ್ ಎಸೆತವನ್ನು ಬೌಂಡರಿಗೆ ಹೊಡೆಯುವ ಮೂಲಕ ತನ್ನ ಅರ್ಧಶತಕವನ್ನು ಪೂರೈಸಿದರು. ಇದು ಈ ಸರಣಿಯಲ್ಲಿ ಪೂಜಾರ ಅವರ ಮೊದಲ ಅರ್ಧ ಶತಕವಾಗಿದೆ.