ಹೃದಯ ಶಸ್ತ್ರಚಿಕಿತ್ಸೆ ನಡೆಯುವಾಗ ಕ್ರಿಸ್ ಕೇರ್ನ್ಸ್​ಗೆ ಸ್ಟ್ರೋಕ್,  ಸ್ವಾಧೀನ ಕಳೆದುಕೊಂಡ ಎರಡೂ ಕಾಲುಗಳು

ಆದರೆ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಕೇರ್ನ್ಸ್ ಹೆಸರು ಕೇಳಿ ಬಂದಾಗ ಅವರು ಮೈದಾನದಲ್ಲಿ ಮಾಡಿದ ಸಾಧನೆಗಳು ಮಂಕಾದವು. ಅರೋಪಗಳನ್ನು ಅವರು ಸಾರಾಸಗಟು ಅಲ್ಲಗಳೆದರಾದರೂ ಎರಡು ಬಾರಿ ಕೋರ್ಟಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೃದಯ ಶಸ್ತ್ರಚಿಕಿತ್ಸೆ ನಡೆಯುವಾಗ ಕ್ರಿಸ್ ಕೇರ್ನ್ಸ್​ಗೆ ಸ್ಟ್ರೋಕ್,  ಸ್ವಾಧೀನ ಕಳೆದುಕೊಂಡ ಎರಡೂ ಕಾಲುಗಳು
ಕ್ರಿಸ್​ ಕೇರ್ನ್ಸ್
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2021 | 4:33 PM

ನ್ಯೂಜಿಲೆಂಡ್ ಲೆಜೆಂಡರಿ ಕ್ರಿಕೆಟ್ ಆಟಗಾರ ಕ್ರಿಸ್ ಕೇರ್ನ್ಸ್ ಬಹಳ ತೊಂದರೆಯಲ್ಲಿದ್ದಾರೆ. ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸಂದರ್ಭದಲ್ಲಿ ಅವರಿಗೆ ಸ್ಟ್ರೋಕ್ ಆಗಿದ್ದರಿಂದ ಅವರ ಕಾಲುಗಳು ಪಾರ್ಶ್ವವಾಯುಗೆ ಒಳಗಾಗಿದ್ದು ಚೇತರಿಸಿಕೊಳ್ಳಲು ಸುದೀರ್ಘ ಸಮಯ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. 90 ರ ದಶಕ ಮತ್ತು ಶತಮಾನದ ಆರಂಭಿಕ ದಿನಗಳಲ್ಲಿ ವಿಶ್ವದ ಅಗ್ರಮಾನ್ಯ ಅಲ್-ರೌಂಡರ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಕೇರ್ನ್ಸ್ ಅವರು ಈ ತಿಂಗಳ ಆರಂಭದಲ್ಲಿ ಜೀವಕ್ಕೆ ಅಪಾಯವಾಗಬಹುದುದಾಗಿದ್ದ ಹೃದ್ರೋಗಕ್ಕೆ ತುತ್ತಾಗಿದದ್ದರು. ಅವರ ದೇಹದಲ್ಲಿ ಪ್ರಮುಖ ರಕ್ತನಾಳವೊಂದು ಹರಿದ ಕಾರಣ ಜೀವಕ್ಕೆ ಕುತ್ತು ಉಂಟಾಗಿತ್ತು. ಕ್ರಿಕೆಟ್ನಿಂದ ನಿವೃತ್ತರಾದ ನಂತರ ಆಸ್ಟ್ರೇಲಿಯಾದ ಕ್ಯಾನಬೆರ್ರಾನಲ್ಲಿ ವಾಸವಾಗಿರುವ ಕೇರ್ನ್ಸ್ ಅವರನ್ನು ಕೂಡಲೇ ಸಿಡ್ನಿಯ ಅಸ್ಪತ್ರೆಯೊಂದಕ್ಕೆ ದಾಖಲು ಮಾಡಿ ಹೃದಯದ ಆಪರೇಷನ್ ಮಾಡಲಾಯಿತಾದರೂ ಶಸ್ತ್ರಚಿಕಿತ್ಸೆ ನಡೆಯುವಾಗ ಅವರು ಸ್ಟ್ರೋಕ್ಗೆ ಒಳಗಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಕಾರಣದಿಂದಾಗಿ ಕೇರ್ನ್ಸ್ ಅವರು ಆಸ್ಟ್ರೇಲಿಯಾದ ಬೆನ್ನುಮೂಳೆಗೆ ಸಂಬಂಧಿಸಿದ ಆಸ್ಪ್ರತ್ರೆಯೊಂದರಲ್ಲಿ ಸುದೀರ್ಘವಾದ ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗಲಿದ್ದಾರೆ.

ಮೂಲಗಳ ಪ್ರಕಾರ ಕೇರ್ನ್ಸ್ ಅವರ ಕುಟುಂಬದ ಸದಸ್ಯರು ಕ್ಯಾನ್ಬೆರ್ರಾಗೆ ಆಗಮಿಸಿದ್ದು ಅವರ ಚೇತರಿಕೆಗಾಗಿ ಸಾಧ್ಯವಿರುವುದೆಲ್ಲವನ್ನೂ ಮಾಡುತ್ತಿದ್ದಾರೆ.

ಆಸ್ಪತ್ರೆಯು ಹೊರಡಿಸಿರುವ ಹೇಳಿಕೆಯೊಂದರ ಪ್ರಕಾರ ಆಸ್ಪತ್ರೆಯ ಸಿಬ್ಬಂದಿ ಕೇರ್ನ್ಸ್ ಅವರಿಗೆ ಒದಗಿಸುತ್ತಿರುವ ಚಿಕಿತ್ಸೆಯ ಬಗ್ಗೆ ಕುಟುಂಬದ ಸದಸ್ಯರು ತೃಪ್ತರಾಗಿದ್ದಾರೆ ಮತ್ತು ಸಾರ್ವಜನಿಕರಿಂದ ಅವರಿಗೆ ಭಾರಿ ಬೆಂಬಲ ಸಿಗುತ್ತಿದೆ.

‘ಅವರು (ಕೇರ್ನ್ಸ್ ಕುಟುಂಬದ ಸದಸ್ಯರು) ತಮ್ಮ ಖಾಸಗಿತನವನ್ನು ಕಾಯ್ದುಕೊಳ್ಳಲು ನಾವು ಮಾಡಿರುವ ಏರ್ಪಾಡು ಸಹ ಅವರಿಗೆ ಮೆಚ್ಚಿಕೆಯಾಗಿದೆ,’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

1989 ರಿಂದ 2004 ರವರೆಗೆ 62 ಟೆಸ್ಟ್ ಪಂದ್ಯಗಳನ್ನಾಡಿದ ಕೇರ್ನ್ಸ್ 33.53 ಸರಾಸರಿಯಲ್ಲಿ 3,320 ರನ್ ಗಳಿಸಿದರು ಮತ್ತು 29.4 ಸರಾಸರಿಯಲ್ಲಿ 218 ವಿಕೆಟ್ ಪಡೆದರು. ಹಾಗೆಯೇ ಆಡಿದ 215 ಒಂದು ದಿನದ ಪಂದ್ಯಗಳಲ್ಲಿ 29.45 ಸರಾಸರಿಯಲ್ಲಿ 4,950 ರನ್ ಗಳಿಸಿ, 32.80 ಸರಾಸರಿಯಲ್ಲಿ 201 ವಿಕೆಟ್ಗಳನ್ನು ಪಡೆದರು.

ಟೆಸ್ಟ್​ಗಳಲ್ಲಿ ಅವರು 5 ಶತಕ ಮತ್ತು 27 ಅರ್ಧ ಶತಕ ಹಾಗೂ ಒಡಿಐಗಳಲ್ಲಿ 1 ಶತಕ ಮತ್ತು 10 ಅರ್ಧ ಶತಕ ಬಾರಿಸಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ಅವರು 87 ಸಿಕ್ಸ್ ಗಳನ್ನು ಬಾರಿಸಿದ್ದು ಆಗಿನ ಕಾಲಕ್ಕೆ ದಾಖಲೆಯಾಗಿತ್ತು.

ಆದರೆ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಕೇರ್ನ್ಸ್ ಹೆಸರು ಕೇಳಿ ಬಂದಾಗ ಅವರು ಮೈದಾನದಲ್ಲಿ ಮಾಡಿದ ಸಾಧನೆಗಳು ಮಂಕಾದವು. ಅರೋಪಗಳನ್ನು ಅವರು ಸಾರಾಸಗಟು ಅಲ್ಲಗಳೆದರಾದರೂ ಎರಡು ಬಾರಿ ಕೋರ್ಟಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೋರ್ಟ್ ಅವರನ್ನು ಎರಡೂ ಪ್ರಕರಣಗಳಲ್ಲಿ ನಿರ್ದೋಷಿ ಎಂದು ಸಾರಿತ್ತು, ಆದರೆ, ಆರೋಪಗಳಿಂದಾಗಿ ತನ್ನ ಖ್ಯಾತಿ ಮಣ್ಣುಗೂಡಿತು ಎಂದು ಕೇರ್ನ್ ಬಹಳ ಖೇದದಿಂದ ಹೇಳಿದ್ದರು.

ಇದನ್ನೂ ಓದಿ:  Frederique Overdijk: ಟಿ-20 ಕ್ರಿಕೆಟ್​ನಲ್ಲಿ ಪುರುಷರೂ ಮಾಡಿರದ ವಿಶ್ವ ದಾಖಲೆ ನಿರ್ಮಿಸಿದ 21 ವರ್ಷದ ಮಹಿಳಾ ಆಟಗಾರ್ತಿ