Frederique Overdijk: ಟಿ-20 ಕ್ರಿಕೆಟ್​ನಲ್ಲಿ ಪುರುಷರೂ ಮಾಡಿರದ ವಿಶ್ವ ದಾಖಲೆ ನಿರ್ಮಿಸಿದ 21 ವರ್ಷದ ಮಹಿಳಾ ಆಟಗಾರ್ತಿ

4 ಓವರ್‌ಗಳಲ್ಲಿ 7 ವಿಕೆಟ್ ಪಡೆದು ದಾಖಲೆ ಬರೆದ ಓವರ್‌ಡಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಈ ಹಿಂದೆ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ 6 ವಿಕೆಟ್ ಪಡೆದ ವಿಶ್ವ ದಾಖಲೆ ಇತ್ತು.

Frederique Overdijk: ಟಿ-20 ಕ್ರಿಕೆಟ್​ನಲ್ಲಿ ಪುರುಷರೂ ಮಾಡಿರದ ವಿಶ್ವ ದಾಖಲೆ ನಿರ್ಮಿಸಿದ 21 ವರ್ಷದ ಮಹಿಳಾ ಆಟಗಾರ್ತಿ
Frederique Overdijk
Follow us
TV9 Web
| Updated By: Vinay Bhat

Updated on: Aug 27, 2021 | 9:29 AM

ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ನೂತನ ವಿಶ್ವ ದಾಖಲೆಯೊಂದು (World Record) ನಿರ್ಮಾಣವಾಗಿದೆ. ಮಹಿಳಾ ಆಟಗಾರ್ತಿಯಿಂದ ಈ ಸಾಧನೆ ಮೂಡಿಬಂದಿದ್ದು, ಈವರೆಗೆ ಪುರುಷರು ಸಹ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ದಾಖಲೆ ಮಾಡಿಲ್ಲ. ನೆದರ್‌ಲ್ಯಾಂಡ್ಸ್‌ ತಂಡದ 21 ವರ್ಷದ ವೇಗದ ಬೌಲರ್ ಫ್ರೆಡೆರಿಕ್ ಓವರ್‌ಡಿಕ್ (Frederique Overdijk) ಟಿ-20 ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ 7 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಆಯೋಜಿಸಿದ ಯುರೋಪಿಯನ್ ಟಿ-20 ವಿಶ್ವಕಪ್​ನ (Europe Qualifier T20I World Cup) ಫ್ರಾನ್ಸ್ ಹಾಗೂ ನೆದರ್​ಲ್ಯಾಂಡ್ಸ್ ಮಹಿಳಾ ಕ್ವಾಲಿಫೈಯರ್ ಪಂದ್ಯದ ವೇಳೆ ಈ ದಾಖಲೆ ನಿರ್ಮಾಣವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡ ಫ್ರಾನ್ಸ್ ಸತತವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ಫ್ರೆಡೆರಿಕ್ ಓವರ್‌ಡಿಕ್ ಬೌಲಿಂಗ್​ಗೆ ತರಗೆಲೆಯಂತೆ ಫ್ರಾನ್ಸ್ ವಿಕೆಟ್​ಗಳು ಉರುಳಿದವು. ಪರಿಣಾಮ 17.3 ಓವರ್​ನಲ್ಲಿ ಕೇವಲ 33 ರನ್​ಗೆ ಫ್ರಾನ್ಸ್ ಆಲೌಟ್ ಆಯಿತು. ಫ್ರೆಡೆರಿಕ್ 4 ಓವರ್ ಬೌಲಿಂಗ್ ಮಾಡಿ 2 ಮೇಡನ್ ಸಹಿತಿ 3 ರನ್ ನೀಡಿ 7 ವಿಕೆಟ್ ಕಬಳಿಸಿದರು. 34 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ನೆದರ್​ಲ್ಯಾಂಡ್ ಕೇವಲ 3.3 ಓವರ್​ನಲ್ಲಿ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.

4 ಓವರ್‌ಗಳಲ್ಲಿ 7 ವಿಕೆಟ್ ಪಡೆದು ದಾಖಲೆ ಬರೆದ ಓವರ್‌ಡಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಈ ಹಿಂದೆ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ 6 ವಿಕೆಟ್ ಪಡೆದ ವಿಶ್ವ ದಾಖಲೆ ಇತ್ತು. ಓವರ್‌ಡಿಕ್ 6 ಬ್ಯಾಟ್ಸ್‌ಮನ್‌ಗಳನ್ನ ಹಿಂದಿಕ್ಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಶೇಷ ಎಂದರೆ ಇದು ಇವರ 8ನೇ ಟಿ-20 ಅಂತರರಾಷ್ಟ್ರೀಯ ಪಂದ್ಯವಾಗಿದ್ದು, ಈ ಮೊದಲು ಅವರು 7 ಪಂದ್ಯಗಳಲ್ಲಿ ಕೇವಲ 4 ವಿಕೆಟ್​ಗಳನ್ನಷ್ಟೆ ಕಿತ್ತಿದ್ದರು.

ಫ್ರೆಡೆರಿಕ್​ ಮೊದಲು ನೇಪಾಳದ ಅಂಜಲಿ ಚಂದ್ ಟಿ20 ಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದರು. ಡಿಸೆಂಬರ್ 2019ರಲ್ಲಿ, ಅವರು ಮಾಲ್ಡೀವ್ಸ್ ವಿರುದ್ಧ 2.1 ಓವರ್‌ಗಳಲ್ಲಿ ರನ್ ನೀಡಿ 6 ವಿಕೆಟ್ ಪಡೆದಿದ್ದರು. ಭಾರತದ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆಯನ್ನು ಜೂಲನ್ ಗೋಸ್ವಾಮಿ ಹೊಂದಿದ್ದಾರೆ. ವೇಗದ ಬೌಲರ್ ಜೂಲನ್ 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ 11 ರನ್ ನೀಡಿ 5 ವಿಕೆಟ್ ಪಡೆದಿದ್ದರು.

ಪುರುಷರ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಒಂದು ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ದಾಖಲೆ ಟೀಮ್ ಇಂಡಿಯಾದ ದೀಪಕ್ ಚಹಾರ್ ಹೆಸರಲ್ಲಿದೆ. ಇವರು 2013 ರಲ್ಲಿ ಬಾಂಗ್ಲಾದೇಶ ವಿರುದ್ಧ 7 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.

Tokyo 2020 Paralympics: ಮಹಿಳಾ ಸಿಂಗಲ್ಸ್​ನಲ್ಲಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ಭಾವಿನಾ

India vs England: ರೂಟ್ ದಾಖಲೆಯ ಶತಕ, ಇಂಗ್ಲೆಂಡ್ ಬೃಹತ್ ಮುನ್ನಡೆ: ಎರಡನೇ ದಿನದಾಟದ ಹೈಲೈಟ್ಸ್ ಇಲ್ಲಿದೆ

(ICC Womens T20 World Cup Europe Qualifier Netherlands bowler Frederique Overdijk posts world-record T20I)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ