Tokyo 2020 Paralympics: ಮಹಿಳಾ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಭಾರತದ ಭಾವಿನಾ
Bhavina Patel: ರೌಂಡ್ 16ರ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ನಡೆದ ಬ್ರೆಜಿಲ್ನ ಜೊಯ್ಸ್ ಒಲಿವೆರಾ ವಿರುದ್ಧದ ಪಂದ್ಯದಲ್ಲಿ 3-0 ಅಂತರದಿಂದ ಗೆದ್ದು ಬೀಗಿದ ಭಾವಿನಾ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ (Tokyo 2020 Paralympics) ನಲ್ಲಿ ಭಾರತ ಆರಂಭದಲ್ಲಿ ಹಿನ್ನಡೆ ಅನುಭವಿಸಿತಾದರೂ ನಂತರದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡುತ್ತಿದೆ. ಇಂದು ಮೂರನೇ ದಿನ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದ್ದು ಮಹಿಳಾ ಸಿಂಗಲ್ಸ್ನಲ್ಲಿ ಟೆಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ (BhavinaPatel) ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ರೌಂಡ್ 16ರ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ನಡೆದ ಬ್ರೆಜಿಲ್ನ ಜೊಯ್ಸ್ ಒಲಿವೆರಾ ವಿರುದ್ಧದ ಪಂದ್ಯದಲ್ಲಿ 3-0 ಅಂತರದಿಂದ ಗೆದ್ದು ಬೀಗಿದ ಭಾವಿನಾ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾವಿನಾ ಎದುರಾಳಿಗೆ ಒಂದು ಸೆಟ್ನಲ್ಲೂ ಗೆಲ್ಲಲು ಅವಕಾಶ ಕೊಡಲಿಲ್ಲ.
#ParaTableTennis Update: @BhavinaPatel6 seizes the Pre-Quarterfinals against #BRA Joyce Oliveira with dominating score sets: 12-10, 13-11, 11-6
She cruises into the #Paralympics Quarterfinals to be played at 3.50 PM IST today!
All Cheers to our Champ?
— Doordarshan Sports (@ddsportschannel) August 27, 2021
ಮೊದಲ ಸುತ್ತಿನಲ್ಲಿ ಭಾವಿನಾ 12-10 ಅಂಕಗಳ ಮುನ್ನಡೆ ಸಾಧಿಸಿದರೆ ಎರಡನೇ ಸೆಟ್ನಲ್ಲಿ 13-11 ಮತ್ತು ಅಂತಿಮ ಸೆಟ್ನಲ್ಲಿ 11-6 ಮುನ್ನಡೆ ಸಾಧಿಸಿ 3-0 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಇಂದು ಮಧ್ಯಾಹ್ನ 3:50ಕ್ಕೆ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.
ಪ್ಯಾರಾಲಿಂಪಿಕ್ಸ್ನ ಮೊದಲ ದಿನ ನಡೆದ ಟೆಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾ ಅವರು ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ನಂತರ ನಡೆದ ಎರಡನೇ ಗುಂಪಿನ ಎ ಪಂದ್ಯದಲ್ಲಿ ಭಾವಿನಾ ಗ್ರೇಟ್ ಬ್ರಿಟನ್ನ ಮೆಗನ್ ಶಾಕ್ಲೆಟನ್ ವಿರುದ್ಧ 3-1 ಅಂತರದಿಂದ ಗೆದ್ದು ಬೀಗಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದರು.