India vs England: ರೂಟ್ ದಾಖಲೆಯ ಶತಕ, ಇಂಗ್ಲೆಂಡ್ ಬೃಹತ್ ಮುನ್ನಡೆ: ಎರಡನೇ ದಿನದಾಟದ ಹೈಲೈಟ್ಸ್ ಇಲ್ಲಿದೆ

ನಂತರ ಶುರುವಾಗಿದ್ದು ನಾಯಕ ಜೋ ರೂಟ್ ಹಾಗೂ ಡೇವಿಡ್ ಮಲನ್ ಆಟ. ರೂಟ್ ಆಟಕ್ಕೆ ಬ್ರೇಕ್ ಹಾಕಲು ಭಾರತೀಯ ಬೌಲರ್​ಗಳು ಈ ಬಾರಿ ಕೂಡ ವಿಫಲವಾದರು. ಅಬ್ಬರದ ಶತಕ ಬಾರಿಸಿದ ರೂಟ್ ತಂಡಕ್ಕೆ ಬಲವಾಗಿ ನಿಂತರು.

India vs England: ರೂಟ್ ದಾಖಲೆಯ ಶತಕ, ಇಂಗ್ಲೆಂಡ್ ಬೃಹತ್ ಮುನ್ನಡೆ: ಎರಡನೇ ದಿನದಾಟದ ಹೈಲೈಟ್ಸ್ ಇಲ್ಲಿದೆ
India vs England
Follow us
TV9 Web
| Updated By: Vinay Bhat

Updated on: Aug 27, 2021 | 8:09 AM

ಲೀಡ್ಸ್: ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಭಾರತ (India) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ನಾಯಕ ಜೋ ರೂಟ್ (Joe Root) ಅವರ ದಾಖಲೆಯ ಶತಕದ ನೆರವಿನಿಂದ ಇಂಗ್ಲೆಂಡ್ 423 ರನ್ ಕಲೆಹಾಕಿದ್ದು, 345 ರನ್​ಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪಿಚ್‌ನ ಸಂಪೂರ್ಣ ಲಾಭ ಪಡೆದ ಆತಿಥೇಯ ಇಂಗ್ಲೆಂಡ್‌ ತಂಡ ಮೂರನೇ ಟೆಸ್ಟ್‌ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇತ್ತ ಟೀಮ್ ಇಂಡಿಯಾ (Team India) ಈ ಪಂದ್ಯವನ್ನು ಬಹುತೇಕ ಕೈಚೆಲ್ಲಿದೆ.

ಮೊದಲ ದಿನವೇ ಆರಂಭಿಕ ಬ್ಯಾಟ್ಸ್‌ಮನ್‌ಗಳ ಶತಕದ ಜೊತೆಯಾಟದ ಫಲವಾಗಿ 42 ರನ್‌ಗಳ ಮುನ್ನಡೆ ಗಳಿಸಿದ್ದ ಇಂಗ್ಲೆಂಡ್‌, ಎರಡನೇ ದಿನ ಇಬ್ಬರೂ ಓಪನರ್‌ಗಳನ್ನು ಕಳೆದುಕೊಂಡರೂ ಒಟ್ಟು ಮುನ್ನಡೆಯನ್ನು 104 ರನ್‌ಗಳಿಗೆ ವಿಸ್ತರಿಸಿತು. 153 ಎಸೆತಗಳನ್ನು ಎದುರಿಸಿದ ಎಡಗೈ ಬ್ಯಾಟ್ಸ್‌ಮನ್‌ ರೋರಿ ಬರ್ನ್ಸ್‌, 6 ಫೋರ್‌ ಮತ್ತು 1 ಸಿಕ್ಸರ್‌ನೊಂದಿಗೆ 61 ರನ್‌ಗಳಿಸಿ ಉತ್ತಮವಾಗಿ ಬ್ಯಾಟ್‌ ಮಾಡಿದರು. ಆದರೆ, ವೇಗಿ ಮೊಹಮ್ಮದ್‌ ಶಮಿ ಎದುರು ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ ಸೇರಿದರು. ಇದರ ಬೆನ್ನಲ್ಲೇ ದಾಳಿಗಿಳಿದ ರವೀಂದ್ರ ಜಡೇಜಾ, 195 ಎಸೆತಗಳಲ್ಲಿ 12 ಫೋರ್‌ಗಳೊಂದಿಗೆ 68 ರನ್‌ ಗಳಿಸಿದ್ದ ಹಸೀಬ್‌ ಹಮೀದ್ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು.

ನಂತರ ಶುರುವಾಗಿದ್ದು ನಾಯಕ ಜೋ ರೂಟ್ ಹಾಗೂ ಡೇವಿಡ್ ಮಲನ್ ಆಟ. ರೂಟ್ ಆಟಕ್ಕೆ ಬ್ರೇಕ್ ಹಾಕಲು ಭಾರತೀಯ ಬೌಲರ್​ಗಳು ಈ ಬಾರಿ ಕೂಡ ವಿಫಲವಾದರು. ಅಬ್ಬರದ ಶತಕ ಬಾರಿಸಿದ ರೂಟ್ ತಂಡಕ್ಕೆ ಬಲವಾಗಿ ನಿಂತರು. ಇವರಿಗೆ ಮಲನ್ ಅತ್ಯುತ್ತಮ ಸಾಥ್ ನೀಡಿದರು. ಈ ಜೋಡಿ 3ನೇ ವಿಕೆಟ್​ಗೆ 139 ರನ್​ಗಳ ಜೊತೆಯಾಟ ಆಡಿತು. ಮಲನ್ 128 ಎಸೆತಗಳಲ್ಲಿ 70 ರನ್ ಬಾರಿಸಿದರು. ರೂಟ್ 165 ಎಸೆತಗಳಲ್ಲಿ 121 ರನ್ ಸಿಡಿಸಿರು.

ನಂತರ ಬಂದ ಜಾನಿ ಬೈರ್​​ಸ್ಟೋ (29), ಜಾಸ್ ಬಟ್ಲರ್ (7), ಮೊಯೀನ್ ಅಲಿ (8) ಹಾಗೂ ಸ್ಯಾಮ್ ಕುರ್ರನ್ (15) ಬೇಗನೆ ನಿರ್ಗಮಿಸಿದರು. ಪರಿಣಾಮ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 423 ರನ್ ಗಳಿಸಿತು. 345 ರನ್​ಗಳ ಮುನ್ನಡೆ ಪಡೆದುಕೊಂಡಿತು. ಭಾರತ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ತಲಾ 2 ಮತ್ತು ಜಸ್​ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು. ಮೂರನೇ ದಿನಕ್ಕೆ ಕ್ರೈಗ್ ಓವರ್​ಟನ್ 25 ರನ್ ಹಾಗೂ ಓಲಿ ರಾಬಿನ್ಸನ್ ಖಾತೆ ತೆರೆಯದೆ ಕ್ರೀಸ್​ನಲ್ಲಿದ್ದಾರೆ.

ಜೋ ರೂಟ್ ವಿಶೇಷ ದಾಖಲೆ:

ಈ ಸರಣಿಯ ಮೂರು ಪಂದ್ಯಗಳಲ್ಲಿಯೂ ಜೋ ರೂಟ್ ಶತಕವನ್ನು ಬಾರಿಸಿದ್ದಾರೆ. ಈ ಶತಕದ ಸಾಧನೆಯೊಂದಿಗೆ ಜೋ ರೂಟ್ ದಿಗ್ಗಜ ಕ್ರಿಕೆಟಿಗರ ದಾಖಲೆಯನ್ನು ಮುರಿದಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಈಗ ಜೋ ರೂಟ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಆಲೆಸ್ಟರ್ ಕುಕ್ ದಾಖಲೆಯನ್ನು ಮೀರಿ ನಿಂತಿದ್ದಾರೆ.

ಇನ್ನೂ ಈ ಶತಕದ ಮೂಲಕ ಜೋ ರೂಟ್ ಮತ್ತೊಂದು ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಒಂದೇ ವರ್ಷದಲ್ಲಿ ಎರಡು ಬಾರಿ ಸತತ 3 ಪಂದ್ಯಗಳಲ್ಲಿ ಶತಕ ಸಿಡಿಸಿದ ಪ್ರಥಮ ಆಟಗಾರ ಎನಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಸರಣಿಯ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು 50+ ರನ್‌ಗಳನ್ನು ಬಾರಿಸಿದ ನಾಯಕ ಎನಿಸಿದ್ದಾರೆ. ಈ ದಾಖಲೆಯಲ್ಲಿ ಅವರು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಸರಿಗಟ್ಟಿದ್ದಾರೆ.

India vs England: ಟೀಮ್ ಇಂಡಿಯಾದ ಈ ವೈಫಲ್ಯಕ್ಕೆ ಅತಿಯಾದ ಕ್ರಿಕೆಟ್ ಕಾರಣ: ಸಲ್ಮಾನ್ ಬಟ್

ಇಂಗ್ಲೆಂಡ್​ನ ಸರ್ವಕಾಲಿಕ ಶ್ರೇಷ್ಠ ‘ಲಾರ್ಡ್ ಟೆಡ್’ ತಮ್ಮ ಬದುಕಿನ ಇನ್ನಿಂಗ್ಸ್ ಅಂತ್ಯಗೊಳಿಸಿದರು

(India vs England Joe Roots record century gives England 345 runs lead test almost out of Indias grip)

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ