ಇಂಗ್ಲೆಂಡ್​ನ ಸರ್ವಕಾಲಿಕ ಶ್ರೇಷ್ಠ ‘ಲಾರ್ಡ್ ಟೆಡ್’ ತಮ್ಮ ಬದುಕಿನ ಇನ್ನಿಂಗ್ಸ್ ಅಂತ್ಯಗೊಳಿಸಿದರು

ಇಂಗ್ಲೆಂಡ್​ನ ಸರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಟೆಡ್ ಅವರು ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದರು ಮತ್ತು ಮಧ್ಯಮ ವೇಗದ ಬೌಲರ್ ಸಹ ಆಗಿದ್ದರು.

ಇಂಗ್ಲೆಂಡ್​ನ ಸರ್ವಕಾಲಿಕ ಶ್ರೇಷ್ಠ ‘ಲಾರ್ಡ್ ಟೆಡ್’ ತಮ್ಮ ಬದುಕಿನ ಇನ್ನಿಂಗ್ಸ್ ಅಂತ್ಯಗೊಳಿಸಿದರು
ಟೆಡ್​ ಡೆಕ್ಸ್​ಟರ್​
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 27, 2021 | 2:15 AM

ಇಂಗ್ಲೆಂಡ್ ನ ಲೆಜೆಂಡರಿ ಆಟಗಾರ ಮತ್ತು ಕ್ರಿಕೆಟ್ ವಲಯಗಳಲ್ಲಿ ಲಾರ್ಡ್ ಟೆಡ್ ಅಂತ ಖ್ಯಾತರಾಗಿದ್ದ ಟೆಡ್ ಡೆಕ್ಸ್ಟರ್ ಗುರುವಾರದಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಟೆಡ್ ವೂಲ್ವರ್ಹ್ಯಾಂಪ್ಟನ್ ನಲ್ಲಿ ಕೊನೆಯುಸಿರೆಳೆದರು ಅಂತ ಕುಟುಂಬದ ಮೂಲಗಳು ತಿಳಿಸಿವೆ.

ಇಂಗ್ಲೆಂಡ್​ನ ಸರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಟೆಡ್ ಅವರು ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದರು ಮತ್ತು ಮಧ್ಯಮ ವೇಗದ ಬೌಲರ್ ಸಹ ಆಗಿದ್ದರು. ಇಂಗ್ಲೆಂಡ್ ಪರ 1958 ರಿಂದ 1968 ರವರೆಗೆ 62 ಟೆಸ್ಟ್ಗಳನ್ನಾಡಿ 47.89 ರ ಸರಾಸರಿಯಲ್ಲಿ 9 ಶತಕ ಮತ್ತು 27 ಆರ್ಧ ಶತಕಗಳ ನೆರವಿನೊಂದಿಗೆ ಟೆಡ್ 4,502 ರನ್ ಗಳಿಸಿದ್ದರು. ಹಾಗೆಯೇ 34.83 ರ ಸರಾಸರಿಯಲ್ಲಿ 66 ವಿಕೆಟ್ ಸಹ ಪಡೆದರು. ಇನ್ನಿಂಗ್ಸೊಂದರಲ್ಲಿ 4/10 ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು. ಉತ್ತಮ ಲೀಡರ್ ಅಂತಲೂ ಗುರುತಿಸಿಕೊಂಡಿದ್ದ ಟೆಡ್ 30 ಟೆಸ್ಟ್​ಗಳಲ್ಲಿ ತನ್ನ ದೇಶದ ನಾಯಕತ್ವ ವಹಿಸಿದ್ದರು. ಇಂಗ್ಲೆಂಡ್​ನ ಕೆಲ ಮಾಜಿ ಮತ್ತು ಹಾಲಿ ಆಟಗಾರರು ಟೆಡ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇಂಗ್ಲೆಂಡ್ ಮಾಜಿ ಅಟಗಾರ ಮೈಕೆಲ್ ವಾನ್ ತನ್ನ ಟ್ವೀಟ್ ನಲ್ಲಿ, ‘ಬಹಳ ದುಃಖಕರ ಸುದ್ದಿ..ನನಗೆ ಮತ್ತು ನನ್ನಂಥ ಅನೇಕರಿಗೆ ಅವರು ಯಾವುದೇ ಅಹಂಭಾವವಿಲ್ಲದೆ ಸಲಹೆಗಳನ್ನು ನೀಡುತ್ತಿದ್ದರು. ತಮ್ಮ ಮೊಟಾರ್ ಬೈಕ್ ಮೇಲೆ ಅವರು ಲಂಚ್ಗಾಗಿ ಬರುವುದನ್ನು ನೋಡುವುದು ಮತ್ತು ಅವರ ಜೊತೆ ಕೂತು ಕ್ರಿಕೆಟ್ ಬಗ್ಗೆ ಹರಟುವುದು ಬಹಲ ಮಜವಾಗಿರುತಿತ್ತು,’ ಅಂತ ಹೇಳಿದ್ದಾರೆ.

ಇಂಗ್ಲೆಂಡ್ ಮಾಜಿ ಆರಂಭ ಆಟಗಾರ ಮತ್ತು ಕಾಮೆಂಟೇಟರ್ ಮೈಕೆಲ್ ಆರ್ಥರ್ಟನ್ ಅವರು, ಟೆಡ್ ಡೆಕ್ಸ್ಟರ್ ಅವರು ತಮ್ಮ ಬ್ಯಾಟಿಂಗ್ನಲ್ಲಿ ತೋರುತ್ತಿದ್ದ ಗ್ರೇಸ್, ಶೈಲಿ ಮತ್ತು ಸೊಬಗನ್ನು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಇಂದು ತೋರುತ್ತಾರೆಂಬ ನಂಬಿಕೆ ಇಟ್ಟುಕೊಂಡಿದ್ದೇನೆ, ಎಂದು ಹೇಳಿದ್ದಾರೆ.

ಮಾಜಿ ಆಟಗಾರ, ಕಾಮೆಂಟೇಟರ್ ಮತ್ತು ಅಂಕಣಕಾರ ಮಾರ್ಕ್ ನಿಕೊಲಾಸ್ ಅವರು ತನ್ನ ಟ್ವೀಟ್ನಲ್ಲಿ, ‘ನನ್ನ ಬಾಲ್ಯದ ಹಿರೋ, ಶಿಕ್ಷಕ ಮತ್ತು ಸ್ನೇಹಿತ-ಟೆಡ್ ಡೆಕ್ಸ್ಟರ್ ಇನ್ನಿಲ್ಲ. ಶ್ರೇಷ್ಠ ಆಟಗಾರನಾಗಿದ್ದ ಟೆಡ್ ಕ್ರಿಕೆಟ್ ಅನ್ನು ಆಧುನಿಕತೆಗೆ ಎಳೆತರಲು, ಬೇರೆಯವರಿಗಿಂತ ಅಥವಾ ಬೇರೆಯವರೆಲ್ಲರಿಗಿಂತ ಜಾಸ್ತಿ ಶ್ರಮಿಸಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ 60 ರ ದಶಕದಲ್ಲಿ ಬೇರೆ ಬೇರೆ ರೀತಿಯ ಐಕಾನ್​ಗಳಾಗಿದ್ದ ಚಾರ್ಲೀ ವ್ಯಾಟ್ಸ್ ಮತ್ತು ಟೆಡ್ ನಮ್ಮನ್ನು ಆಗಲಿದ್ದಾರೆ, ನಿಜಕ್ಕೂ ವಿಷಾದಕರ,’ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಭಾರತೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ವಿದೇಶಿ ಲೀಗ್​ನತ್ತ ಮುಖ ಮಾಡಿದ ಮುಂಬೈ ಆಟಗಾರ

Published On - 2:11 am, Fri, 27 August 21

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ