Tokyo Paralympics: ಟೇಬಲ್ ಟೆನಿಸ್ನಲ್ಲಿ ಐತಿಹಾಸಿಕ ಸಾಧನೆ: ಫೈನಲ್ಗೆ ಲಗ್ಗೆಯಿಟ್ಟ ಭಾರತದ ಭಾವಿನಾ
Bhavina patel: ಈ ಮೂಲಕ ಭಾವಿನಾ ಐತಿಹಾಸಿಕ ದಾಖಲೆ ಮಾಡಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್ಗೆ ಲಗ್ಗೆಯಿಟ್ಟ ಮೊಟ್ಟ ಮೊದಲ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ -2020 (Tokyo Paralympics 2020) ರಲ್ಲಿ ಭಾಗವಹಿಸುತ್ತಿರುವ ಭಾರತೀಯ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಕ್ಲಾಸ್ -4 ರ ಕ್ವಾರ್ಟರ್ ಫೈನಲ್ನಲ್ಲಿ ಗೆದ್ದು ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದ ಭಾವಿನಾ ಸದ್ಯ ಸೆಮೀಸ್ನಲ್ಲಿ ರೋಚಕ ಗೆಲುವು ದಾಖಲಿಸಿ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. 2016ರ ರಿಯೋ ಒಲಿಂಪಿಕ್ ಪದಕ ವಿಜೇತೆ ಚೀನಾದ ಮಿಯಾ ಝಂಗ್ ಅವರನ್ನು3-2 ಅಂಕಗಳ ಅಂತರದಿಂದ ಸೋಲಿಸಿ ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ. ಮೊದಲ ಸೆಟ್ನಲ್ಲಿ ಭಾವಿನಾ 7-11ರ ಹಿನ್ನಡೆ ಅನುಭವಿಸಿದರೆ, ನಂತರ ಭರ್ಜರಿ ಕಮ್ಬ್ಯಾಕ್ ಮಾಡಿದರು. ಎರಡನೇ ಸೆಟ್ನಲ್ಲಿ 11-7, 11-4, 9-11 ಮತ್ತು ಅಂತಿಮ ಸೆಟ್ನಲ್ಲಿ 11-8 ಅಂತರದಲ್ಲಿ ಗೆದ್ದು ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
ಈ ಮೂಲಕ ಭಾವಿನಾ ಐತಿಹಾಸಿಕ ದಾಖಲೆ ಮಾಡಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್ಗೆ ಲಗ್ಗೆಯಿಟ್ಟ ಮೊಟ್ಟ ಮೊದಲ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ.
#IND Bhavina Patel’s dream run continues! ? One win away from here GOLD medal. India is proud of you ??#Paralympics #Praise4Para pic.twitter.com/0yScdLROny
— Doordarshan Sports (@ddsportschannel) August 28, 2021
ಇದಕ್ಕೂ ಮುನ್ನ ಕ್ಲಾಸ್ -4 ರ ಕ್ವಾರ್ಟರ್ ಫೈನಲ್ನಲ್ಲಿ ಗೆಲುವು ಸಾಧಿಸುವ ಮೂಲಕ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದ ಭಾವಿನಾ ಸರ್ಬಿಯಾದ ರಾಕೋವಿಕ್ ಅವರನ್ನು 3-0 ಅಂತರದಿಂದ ಸೋಲಿಸಿ ಗೆದ್ದರು. ಭಾವಿನಾ ಈ ಪಂದ್ಯವನ್ನು 11-5, 11-6, 11-7 ರಿಂದ ವಶಪಡಿಸಿಕೊಂಡರು.
ನಿನ್ನೆ ಮುಂಜಾನೆ ಭಾವಿನಾ ಬ್ರೆಜಿಲ್‌ನ ಒಲಿವೇರಾ ಅವರನ್ನು 16 ನೇ ಸುತ್ತಿನ ಪಂದ್ಯದ 20 ನೇ ಪಂದ್ಯದಲ್ಲಿ ಸೋಲಿಸಿದರು. ಭಾವಿನಾ ಮೊದಲ ಗೇಮ್ ಅನ್ನು 12-10, ಎರಡನೇ ಗೇಮ್ ಅನ್ನು 13-11 ಮತ್ತು ಮೂರನೇ ಗೇಮ್ ಅನ್ನು 11-6ರಿಂದ ಗೆದ್ದರು. ಈ ಸೆಮಿ ಫೈನಲ್ ಗೆಲುವಿನೊಂದಿಗೆ ಭಾವಿನಾ ಪಟೇಲ್ ದೇಶಕ್ಕಾಗಿ ಪದಕ ಗೆಲ್ಲಲು ಒಂದು ಹೆಜ್ಜೆ ಇದೆಯಷ್ಟೆ. ಒಳ್ಳೆಯ ವಿಷಯವೆಂದರೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾವಿನಾ ಅವರ ಫಾರ್ಮ್ ಉತ್ತಮವಾಗಿ ಕಾಣುತ್ತಿದೆ.
Published On - 7:12 am, Sat, 28 August 21