AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big news: ಯುವೆಂಟಸ್ ಕ್ಲಬ್ ತೊರೆದು ಮ್ಯಾಂಚೆಸ್ಟರ್ ಸಿಟಿಗೆ ಸೇರಲಿದ್ದಾರೆ ಫುಟ್ಬಾಲ್ ಚತುರ ಕ್ರಿಸ್ಟಿಯಾನೊ ರೊನಾಲ್ಡೊ!

Cristiano Ronaldo: ರೊನಾಲ್ಡೊ ಬೆಳಿಗ್ಗೆ ತಂಡದ ಜೊತೆ ತರಬೇತಿ ಕೂಡ ಮಾಡಲಿಲ್ಲ. ಈಗ ರೊನಾಲ್ಡೊ ಇಂಗ್ಲೀಷ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಸಿಟಿಗೆ ಸೇರಬಹುದು ಎಂದು ವರದಿಗಳಿವೆ.

Big news: ಯುವೆಂಟಸ್ ಕ್ಲಬ್ ತೊರೆದು ಮ್ಯಾಂಚೆಸ್ಟರ್ ಸಿಟಿಗೆ ಸೇರಲಿದ್ದಾರೆ ಫುಟ್ಬಾಲ್ ಚತುರ ಕ್ರಿಸ್ಟಿಯಾನೊ ರೊನಾಲ್ಡೊ!
ಕ್ರಿಸ್ಟಿಯಾನೊ ರೊನಾಲ್ಡೊ
TV9 Web
| Updated By: ಪೃಥ್ವಿಶಂಕರ|

Updated on:Aug 27, 2021 | 8:26 PM

Share

ವಿಶ್ವ ಫುಟ್ಬಾಲ್ ಕೆಲವು ದಿನಗಳ ಹಿಂದಷ್ಟೇ ದೊಡ್ಡ ಬದಲಾವಣೆಯನ್ನು ಕಂಡಿತು. ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾದೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಮುರಿದು ಪಿಎಸ್‌ಜಿಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದರು. ಈಗ ವಿಶ್ವ ಫುಟ್ಬಾಲ್, ಇನ್ನೊಬ್ಬ ಸ್ಟಾರ್ ಆಟಗಾರನ ಕ್ಲಬ್ನಲ್ಲಿ ಬದಲಾವಣೆ ಕಾಣಬಹುದು. ಪೋರ್ಚುಗಲ್ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇಟಲಿಯ ಖ್ಯಾತ ಕ್ಲಬ್ ಯುವೆಂಟಸ್ ತೊರೆಯುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಯುವೆಂಟಸ್ ತರಬೇತುದಾರ ಮಾಸ್ಸಿಮಿಲಿಯಾನೊ ಅಲೆಗ್ರಿ, ಕ್ರಿಸ್ಟಿಯಾನೊ ನಿನ್ನೆ ನನಗೆ ಜುವೆಂಟಸ್ ಪರ ಆಡಲ್ಲ ಎಂದು ಹೇಳಿದರು ಎಂದಿದ್ದಾರೆ.

ಈ ಕಾರಣಕ್ಕಾಗಿ ರೊನಾಲ್ಡೊ ಎಂಪೋಲಿ ವಿರುದ್ಧದ ಸರಣಿ ಎ (ಇಟಾಲಿಯನ್ ಫುಟ್ಬಾಲ್ ಲೀಗ್) ಪಂದ್ಯದಲ್ಲಿ ಆಡುವುದಿಲ್ಲ ಎಂದು ಅಲ್ಲೆಗ್ರಿ ಹೇಳಿದರು. ಜೊತೆಗೆ ರೊನಾಲ್ಡೊ ಬೆಳಿಗ್ಗೆ ತಂಡದ ಜೊತೆ ತರಬೇತಿ ಕೂಡ ಮಾಡಲಿಲ್ಲ. ಈಗ ರೊನಾಲ್ಡೊ ಇಂಗ್ಲೀಷ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಸಿಟಿಗೆ ಸೇರಬಹುದು ಎಂದು ವರದಿಗಳಿವೆ. ಪ್ರೀಮಿಯರ್ ಲೀಗ್ ವಿಜೇತ ಕ್ಲಬ್ ಸಿಟಿ ಕೂಡ ರೊನಾಲ್ಡೊ ಬಗ್ಗೆ ಆಸಕ್ತಿ ತೋರಿಸುತ್ತಿದೆ.

ಮುನ್ನಡೆಯುತ್ತಾ ಇರುತ್ತದೆ ಈ ಬಗ್ಗೆ ಮಾತನಾಡಿದ ಅಲ್ಲೆಗ್ರಿ, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ನಾನು ನಿರಾಶೆಗೊಂಡಿಲ್ಲ. ರೊನಾಲ್ಡೊ ತನ್ನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಂತಹ ಸಂಗತಿಗಳು ಜೀವನದಲ್ಲಿ ನಡೆಯುತ್ತಲೇ ಇರುತ್ತವೆ. ಸಿವೊರಿ, ಪಾಲ್ತಿನಿ, ಡೆಲ್ ಪಿಯೆರೊ, ಜಿಡಾನೆ, ಬಫನ್ ಜುವೆಂಟಸ್ ಪರ ಆಡಿದ್ದಾರೆ. ಅವರು ಮೂರು ವರ್ಷಗಳ ಕಾಲ ಇಲ್ಲಿಯೇ ಇದ್ದರು, ಅವರು ಸಹ ತಂಡಕ್ಕೆ ಕೊಡುಗೆ ನೀಡಿದರು. ಹಾಗೆಯೇ ರೊನಾಲ್ಡೊ ತನ್ನನ್ನು ಜುವೆಂಟಸ್‌ಗೆ ಲಭ್ಯವಾಗುವಂತೆ ಮಾಡಿದರು. ಈಗ ತಂಡ ಬಿಟ್ಟು ಹೊರಡುತ್ತಿದ್ದಾನೆ. ಜೀವನ ಹಾಗೇನೆ ನಡೀತಾ ಹೋಗುತ್ತೆ ಎಂದಿದ್ದಾರೆ.

ತರಬೇತುದಾರ ಮತ್ತು ಕ್ಲಬ್ ನಿರ್ದೇಶಕ ಪಾವೆಲ್ ನೆಡ್ವೆಡ್ ಹೇಳಿದ ನಂತರವೂ ರೊನಾಲ್ಡೊ ಡ್ರೆಸ್ಸಿಂಗ್ ರೂಂನಲ್ಲಿರುವ ತನ್ನ ಲಾಕರ್ ಕೊಠಡಿಯನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಸ್ಕೈ ಸ್ಪೋರ್ಟ್ಸ್ ಗುರುವಾರ ವರದಿ ಮಾಡಿದೆ. ಜೊತೆಗೆ ರೊನಾಲ್ಡೊ ತರಬೇತಿಗೂ ಹಾಜರಾಗಿಲ್ಲ ಮತ್ತು ತನ್ನ ಸಹ ಆಟಗಾರರಿಗೆ ವಿದಾಯ ಹೇಳಲು ಲಾ ತರಬೇತಿ ಕೇಂದ್ರಕ್ಕೆ ಬಂದಿದ್ದರು ಎಂದು ವರದಿಯಾಗಿದೆ.

ಸ್ಪ್ಯಾನಿಷ್ ಕ್ಲಬ್‌ನಿಂದ ಬಂದವರು ರೊನಾಲ್ಡೊ ಈ ಮೊದಲು ಸ್ಪೇನ್‌ನ ಖ್ಯಾತ ಕ್ಲಬ್ ರಿಯಲ್ ಮ್ಯಾಡ್ರಿಡ್‌ನಲ್ಲಿ ಆಡುತ್ತಿದ್ದರು. ಅವರು 2009 ರಲ್ಲಿ ಸ್ಪ್ಯಾನಿಷ್ ಕ್ಲಬ್‌ಗೆ ಸೇರಿದರು ಮತ್ತು 2018 ರವರೆಗೆ ಈ ಕ್ಲಬ್‌ನೊಂದಿಗೆ ಇದ್ದರು. ಜೊತೆಗೆ ಈ ಕ್ಲಬ್‌ನಲ್ಲಿರುವಾಗಲೇ ರೊನಾಲ್ಡೊ ಲಾ ಲೀಗ್ ಪ್ರಶಸ್ತಿಗಳನ್ನು ಗೆದ್ದರು. ಮ್ಯಾಡ್ರಿಡ್ ಮೊದಲು, ರೊನಾಲ್ಡೊ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಭಾಗವಾಗಿದ್ದರು. ಅವರು 2003 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ತಮ್ಮ ವೃತ್ತಿಪರ ಫುಟ್‌ಬಾಲ್ ವೃತ್ತಿಜೀವನವನ್ನು ಆರಂಭಿಸಿದರು.

Published On - 7:47 pm, Fri, 27 August 21