T20 ವಿಶ್ವಕಪ್ ಅರ್ಹತಾ ಪಂದ್ಯ: 20 ಓವರ್ನಲ್ಲಿ ಕೇವಲ 32 ರನ್..!
Germany W vs Ireland W: ಆರಂಭಿಕ ಆಟಗಾರ್ತಿ ಗ್ಯಾಬಿ ಲೂಯಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 60 ಎಸೆತಗಳಲ್ಲ 105 ರನ್ ಗಳಿಸಿದರು.
ಕ್ರಿಕೆಟ್ (Cricket) ಅಂಗಳದಲ್ಲಿ ಕೆಟ್ಟ ದಾಖಲೆಗಳು ಹೊಸದೇನಲ್ಲ. ಅದಾಗ್ಯೂ ಕೆಲವೊಂದು ಬಾರಿ ತಂಡಗಳು ತೋರಿಸುವ ಹೀನಾಯ ಪ್ರದರ್ಶನ ಅಚ್ಚರಿಗೆ ಕಾರಣವಾಗುತ್ತದೆ. ಅಂತಹದೊಂದು ಅಚ್ಚರಿಗೆ ಕಾರಣವಾಗಿದೆ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅರ್ಹತಾ (ICC T20 World Cup) ಪಂದ್ಯ. ಹೌದು, ಮಹಿಳಾ ಟಿ20 ವಿಶ್ವಕಪ್ ಯುರೋಪ್ ವಿಭಾಗದ ಅರ್ಹತಾ ಪಂದ್ಯದಲ್ಲಿ ಐರ್ಲೆಂಡ್ ಹಾಗೂ ಜರ್ಮನಿ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಮಹಿಳೆಯರು ಭರ್ಜರಿ ಪ್ರದರ್ಶನ ನೀಡಿದ್ದರು.
ಆರಂಭಿಕ ಆಟಗಾರ್ತಿ ಗ್ಯಾಬಿ ಲೂಯಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 60 ಎಸೆತಗಳಲ್ಲ 105 ರನ್ ಗಳಿಸಿದರು. ಈ ಸ್ಪೋಟಕ ಇನಿಂಗ್ಸ್‌ನಲ್ಲಿ ಗ್ಯಾಬಿ 11 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಸೆಂಚುರಿಯೊಂದಿಗೆ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಐರ್ಲೆಂಡ್‌ನ ಮೊದಲ ಮಹಿಳಾ ಆಟಗಾರ್ತಿ ಹೆಗ್ಗಳಿಕೆ ಗ್ಯಾಬಿ ಲೂಯಿಸ್ ಪಾಲಾಯಿತು. ಗ್ಯಾಬಿಗೆ ಉತ್ತಮ ಸಾಥ್ ನೀಡಿದ ರೆಬೆಕಾ ಸ್ಟೋಕೆಲ್ 30 ಎಸೆತಗಳಲ್ಲಿ 44 ರನ್ ಗಳಿಸಿದರು. ಅಂತಿಮವಾಗಿ ಐರ್ಲೆಂಡ್ ತಂಡವು ನಿಗದಿತ 20 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು.
ಈ ಬೃಹತ್ ಮೊತ್ತದ ಗುರಿ ಪಡೆದ ಜರ್ಮನಿ ತಂಡವು ಆಟವೇ ವಿಚಿತ್ರವಾಗಿತ್ತು. ಹೊಡಿಬಡಿ ಆಟವೆಂದೇ ಖ್ಯಾತಿ ಪಡೆದಿರುವ ಟಿ20 ಕ್ರಿಕೆಟ್ ಅನ್ನು ಜರ್ಮನಿ ಆಟಗಾರ್ತಿಯರು ಟೆಸ್ಟ್ ಪಂದ್ಯದಂತೆ ಆಡಿದ್ದರು. ಅಗ್ರ ಮೂರು ಬ್ಯಾಟ್ಸ್ಮನ್ಗಳು ಇಡೀ 120 ಎಸೆತಗಳಲ್ಲಿ 107 ಎಸೆತಗಳನ್ನು ಎದುರಿಸಿದ್ದರು. ಆದರೆ ಗಳಿಸಿದ್ದು ಮಾತ್ರ ಎರಡಂಕಿ ರನ್ ಅಷ್ಟೇ.
ಜರ್ಮನಿಯ ನಾಯಕಿ ಅನುರಾಧಾ 29 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದರು. ಹಾಗೆಯೇ ಓಪನರ್ ಅನ್ನಾ ಹೀಲಿ 20 ಎಸೆತಗಳಲ್ಲಿ 3 ರನ್ ಮತ್ತು ಕ್ರಿಸ್ಟಿನಾ ಗಾಗ್ 58 ಎಸೆತಗಳಲ್ಲಿ 14 ರನ್ ಮಾತ್ರ ಕಲೆಹಾಕಿದ್ದರು. ಈ ಇನಿಂಗ್ಸ್‌ನಲ್ಲಿ ಜರ್ಮನಿ ಬಾರಿಸಿದ್ದು ಕೇವಲ 1 ಬೌಂಡರಿ. ಹಾಗೆಯೇ ಬ್ಯಾಟ್ ಮೂಲಕ ಮೂಡಿಬಂದಿದ್ದು ಕೇವಲ 25 ರನ್ಗಳು ಮಾತ್ರ. ಉಳಿದ 7 ರನ್ಗಳು ಐರ್ಲೆಂಡ್ ಅತಿರಿಕ್ತವಾಗಿ ನೀಡಿರುವುದು ವಿಶೇಷ. ಅದರಂತೆ ಜರ್ಮನಿ ತಂಡವು ನಿಗದಿತ 20 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 32 ರನ್ ಮಾತ್ರ. ಇದರೊಂದಿಗೆ ಐರ್ಲೆಂಡ್ ಮಹಿಳಾ ತಂಡ 164 ರನ್ಗಳ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ: India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ
ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು
ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?
(Germany team just scored 32 runs in 20 overs vs ireland)