India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ

Mohammed Siraj: ಲಾರ್ಡ್ಸ್​​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ವೇಳೆ ಕೂಡ ಇಂಗ್ಲೆಂಡ್ ಪ್ರೇಕ್ಷಕರು ಇಂತಹ ಪುಂಡಾಟ ನಡೆಸಿದ್ದರು. ಬೌಂಡರಿ ಬಳಿ ಫೀಲ್ಡಿಂಗ್​ನಲ್ಲಿದ್ದ ಕೆಎಲ್ ರಾಹುಲ್ ಮೇಲೆ ಬಾಟಲ್ ಕಾರ್ಕ್​ಗಳನ್ನು ಎಸೆದು ಕೆಣಕಿದ್ದರು.

India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ
Siraj
Follow us
| Updated By: ಝಾಹಿರ್ ಯೂಸುಫ್

Updated on: Aug 28, 2021 | 2:28 PM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ (3rd Test) ಪಂದ್ಯ ನಾಲ್ಕನೇ ದಿನದಾಟದತ್ತ ಸಾಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಮ್ ಇಂಡಿಯಾ (Team India) ಕೇವಲ 78 ರನ್​ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಮೊದಲ ದಿನವೇ ಬೌಲಿಂಗ್ ಕೂಡ ಮಾಡಿದ್ದರು. ಅತ್ತ ಕೇವಲ 78 ರನ್​ಗಳಿಗೆ ಸರ್ವಪತನ ಕಂಡಿದ್ದ ಟೀಮ್ ಇಂಡಿಯಾವನ್ನು ಇಂಗ್ಲೆಂಡ್ (England) ಪ್ರೇಕ್ಷಕರು ಹೀಯಾಳಿಸಿದ್ದರು. ಅದರಲ್ಲೂ ಬೌಂಡರಿ ಲೈನ್​ ಬಳಿಯಿದ್ದ ಮೊಹಮ್ಮದ್ ಸಿರಾಜ್ (Mohammed Siraj) ಅವರೊಂದಿಗೆ ನಿಮ್ಮ ಸ್ಕೋರ್ ಎಷ್ಟು ಎಂದು ಪದೇ ಪದೇ ಪಶ್ನಿಸಿ ವ್ಯಂಗ್ಯವಾಡಿದ್ದರು. ಈ ವೇಳೆ 1-0 ಎಂದೇಳುವ ಮೂಲಕ ಖಡಕ್ ತಿರುಗೇಟು ನೀಡಿದ್ದರು ಸಿರಾಜ್. ಆದರೆ ಇಂಗ್ಲೆಂಡ್ ಪ್ರೇಕ್ಷಕರ ಈ ದುರ್ವತನೆ ಅಲ್ಲಿಗೆ ಮುಗಿದಿರಲಿಲ್ಲ.

ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್ ಮೇಲೆ ಬಾಲ್ ಎಸೆದಿದ್ದಾರೆ. ಆರಂಭದಲ್ಲಿ ವಾಗ್ದಾಳಿ ನಡೆಸುತ್ತಿದ್ದ ಇಂಗ್ಲೆಂಡ್ ಪ್ರೇಕ್ಷಕರು ಬಳಿಕ ಪಾಸ್ಟಿಕ್​ ಚೆಂಡೆಸೆಯುವ ಮೂಲಕ ಕೆಣಕಿದ್ದಾರೆ. ಈ ವಿಷಯವನ್ನು ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಬಹಿರಂಗಪಡಿಸಿದ್ದು, ಪ್ರೇಕ್ಷಕರ ಇಂತಹ ವರ್ತನೆಯಿಂದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿರಾಸೆಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಆಟದ ವೇಳೆ ವಾಗ್ದಾಳಿಗಳು ಸಹಜ. ಆದರೆ ಫೀಲ್ಡರ್​ಗಳ ಮೇಲೆ ವಸ್ತುಗಳನ್ನು ಎಸೆಯುವುದು ಖಂಡಿತ ತಪ್ಪು. ಇದು ಕ್ರಿಕೆಟ್​ ವಿಚಾರದಲ್ಲಿ ಒಳ್ಳೆಯದಲ್ಲ ಎಂದು ಪಂತ್ ಹೇಳಿದರು.

ಇನ್ನು ಲಾರ್ಡ್ಸ್​​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ವೇಳೆ ಕೂಡ ಇಂಗ್ಲೆಂಡ್ ಪ್ರೇಕ್ಷಕರು ಇಂತಹ ಪುಂಡಾಟ ನಡೆಸಿದ್ದರು. ಬೌಂಡರಿ ಬಳಿ ಫೀಲ್ಡಿಂಗ್​ನಲ್ಲಿದ್ದ ಕೆಎಲ್ ರಾಹುಲ್ ಮೇಲೆ ಬಾಟಲ್ ಕಾರ್ಕ್​ಗಳನ್ನು ಎಸೆದು ಕೆಣಕಿದ್ದರು. ಇದೀಗ ಸಿರಾಜ್ ಅವರನ್ನು ಇಂಗ್ಲೆಂಡ್ ಪ್ರೇಕ್ಷಕರು ಗುರಿಯಾಗಿಸಿಕೊಂಡಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯಾ ಸರಣಿ ವೇಳೆ ಆಸೀಸ್‌ ಪ್ರೇಕ್ಷಕರಿಂದ ಸಿರಾಜ್ ಜನಾಂಗೀಯ ನಿಂದನೆಗೆ ಗುರಿಯಾಗಿದ್ದರು. ಆ ಬಳಿಕ ಕಾಂಗರೂ ನಾಡಿನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ವೇಗಿ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿ ಭಾರತ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ಲಾರ್ಡ್ಸ್​ನಲ್ಲಿ ನಡೆದ 2ನೇ ಪಂದ್ಯದಲ್ಲಿ 8 ವಿಕೆಟ್ ಉರುಳಿಸಿ ಐತಿಹಾಸಿಕ ಟೆಸ್ಟ್ ಪಂದ್ಯ ಗೆಲ್ಲುವಲ್ಲಿ ಕಾರಣರಾಗಿದ್ದರು. ಇದೀಗ ಭರ್ಜರಿ ಪ್ರದರ್ಶನ ನೀಡಿದ್ದ ಸಿರಾಜ್ ಮೇಲೆ ಇಂಗ್ಲೆಂಡ್ ಪ್ರೇಕ್ಷಕರು ಗುರಿಯಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(India vs England 3rd test: Ball thrown at Mohammed Siraj by Headingley crowd)