IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

Tabraiz Shamsi: ಅಂದಹಾಗೆ ಇದು ಶಮ್ಸಿಗೆ ಚೊಚ್ಚಲ ಐಪಿಎಲ್ ಅಲ್ಲ ಎಂಬುದು ವಿಶೇಷ. ಏಕೆಂದರೆ 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದಕ್ಷಿಣ ಆಫ್ರಿಕಾ ಮ್ಯಾಜಿಕಲ್ ಸ್ಪಿನ್ನರ್ 4 ಪಂದ್ಯಗಳನ್ನಾಡಿದ್ದರು.

| Updated By: ಝಾಹಿರ್ ಯೂಸುಫ್

Updated on: Aug 26, 2021 | 3:25 PM

 ಐಪಿಎಲ್ 2021 ರ ಎರಡನೇ ಸುತ್ತಿನ ಪಂದ್ಯಗಳಿಗಾಗಿ ರಾಜಸ್ಥಾನ ರಾಯಲ್ಸ್ ಮತ್ತೊಬ್ಬ ಸ್ಟಾರ್ ಆಟಗಾರನನ್ನು ಸೇರಿಸಿಕೊಂಡಿದೆ. ರಾಜಸ್ಥಾನ್ ತಂಡದ ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ಬೆನ್​ ಸ್ಟೋಕ್ಸ್​ ಹಾಗೂ ಆ್ಯಂಡ್ರೊ ಟೈ ಐಪಿಎಲ್​ನ ದ್ವಿತಿಯಾರ್ಧದಿಂದ ಹೊರಗುಳಿದಿದ್ದಾರೆ.

1 / 6
ಇದೀಗ ಆರ್​ಆರ್ ಫ್ರಾಂಚೈಸಿ ಆ್ಯಂಡ್ರೊ ಟೈ ಸ್ಥಾನದಲ್ಲಿ ವಿಶ್ವದ ನಂಬರ್ 1 ಟಿ20 ಬೌಲರ್ ದಕ್ಷಿಣ ಆಫ್ರಿಕಾದ ತಬ್ರೇಜ್ ಶಮ್ಸಿಯನ್ನು ಆಯ್ಕೆ ಮಾಡಿಕೊಂಡಿದೆ. ಚೈನಮನ್ ಬೌಲರ್ ಆಗಿರುವ ಶಮ್ಸಿ ಉತ್ತಮ ಫಾರ್ಮ್​ನಲ್ಲಿದ್ದು, ಟಿ20 ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

2 / 6
ಅಂದಹಾಗೆ ಇದು ಶಮ್ಸಿಗೆ ಚೊಚ್ಚಲ ಐಪಿಎಲ್ ಅಲ್ಲ ಎಂಬುದು ವಿಶೇಷ. ಏಕೆಂದರೆ 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದಕ್ಷಿಣ ಆಫ್ರಿಕಾ ಮ್ಯಾಜಿಕಲ್ ಸ್ಪಿನ್ನರ್ 4 ಪಂದ್ಯಗಳನ್ನಾಡಿದ್ದರು. ಆ ಬಳಿಕ ಐಪಿಎಲ್​ನಲ್ಲಿ ಅವಕಾಶ ದೊರೆತಿರಲಿಲ್ಲ.

3 / 6
ಐಪಿಎಲ್‌ನಲ್ಲಿ ಆರ್​ಸಿಬಿ ಪರ 4 ಪಂದ್ಯಗಳನ್ನಾಡಿರುವ ಶಮ್ಸಿ 3 ವಿಕೆಟ್ ಪಡೆದಿದ್ದರು. ಇದೀಗ ಟಿ20 ಕ್ರಿಕೆಟ್​ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿರುವ ತಬ್ರೇಜ್ ಶಮ್ಸಿ, ಯುಎಇ ಪಿಚ್‌ಗಳಲ್ಲಿ ತಮ್ಮ ಸ್ಪಿನ್ ಮೋಡಿ ಮಾಡುವ ನಿರೀಕ್ಷೆಯಿದೆ.

4 / 6
31 ವರ್ಷದ ಶಮ್ಸಿ ಇದುವರೆಗೆ 39 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 45 ವಿಕೆಟ್ ಪಡೆದಿದ್ದಾರೆ. ಅದು ಕೂಡ ಕೇವಲ 6.80 ಎಕಾನಮಿಯಲ್ಲಿ ಎಂಬುದು ವಿಶೇಷ.

5 / 6
ಈ ವರ್ಷ ಆಡಿರುವ 14 ಟಿ20 ಪಂದ್ಯಗಳಲ್ಲಿ ಕೇವಲ 5.32 ರನ್ ಸರಾಸರಿಯಲ್ಲಿ 24 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಯುಎಇನ ಮರಳುಗಾಡಿನ ಪಿಚ್​ನಲ್ಲಿ ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೇಜ್ ಶಮ್ಸಿ ಗೇಮ್ ಚೇಂಜರ್ ಆಗುವ ನಿರೀಕ್ಷೆಯಲ್ಲಿದೆ ರಾಜಸ್ಥಾನ್ ರಾಯಲ್ಸ್ ತಂಡ.

6 / 6
Follow us